• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, July 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಡಿ.11 ರಂದು ನಟ ದರ್ಶನ್ ಗೆ ಸರ್ಜರಿ ಫಿಕ್ಸ್ : ಹಿರಿಯ ವಕೀಲ ಸಿವಿ ನಾಗೇಶ್ ಮಾಹಿತಿ

ಪ್ರತಿಧ್ವನಿ by ಪ್ರತಿಧ್ವನಿ
December 9, 2024
in ಕರ್ನಾಟಕ, ಶೋಧ, ಸಿನಿಮಾ
0
ಡಿ.11 ರಂದು ನಟ ದರ್ಶನ್ ಗೆ ಸರ್ಜರಿ ಫಿಕ್ಸ್ : ಹಿರಿಯ ವಕೀಲ ಸಿವಿ ನಾಗೇಶ್ ಮಾಹಿತಿ
Share on WhatsAppShare on FacebookShare on Telegram

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆನ್ನು ನೋವಿನ ಕಾರಣ ತಿಳಿಸಿ ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನು ಪಡೆದುಕೊಂಡ ನಟ ದರ್ಶನವರು ಬೆಂಗಳೂರಿನ ಬಿ ಜಿ ಎಸ್ ಆಸ್ಪತ್ರೆಗೆ ಸರ್ಜರಿ ಮಾಡಿಸಿಕೊಳ್ಳಲು ದಾಖಲಾಗಿದ್ದರು.ಆದರೆ ಆರು ವಾರಗಳ ಕಳೆದರೂ ಕೂಡ ನಟ ದರ್ಶನ್ ಇದುವರೆಗೂ ಸರ್ಜರಿಗೆ ಒಳಗಾಗಿಲ್ಲ.

ADVERTISEMENT
Pradeep Eshwar: ಶಿವಕುಮಾರ ಸ್ವಾಮೀಜಿ ಬಗ್ಗೆ ಪ್ರದೀಪ್‌ ಈಶ್ವರ್‌ ಮಾತು..! #ShivakumarSwamiji

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಇಂದು (ಡಿಸೆಂಬರ್ 9) ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡನೆ ಮಾಡುತ್ತಿದ್ದಾರೆ.

ಇದೀಗ ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಡಿಸೆಂಬರ್ 11 ರಂದು ನಟ ದರ್ಶನ್ ಅವರಿಗೆ ಸರ್ಜರಿ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು.ಈ ವೇಳೆ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಅವರ ಸುದೀರ್ಘವಾಗಿ ವಾದ ಮಂಡಿಸಿದರು. ಪ್ರಸನ್ನಕುಮಾರ್ ವಾದ ಅಂತ್ಯವಾದ ಬಳಿಕ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದು, ದರ್ಶನ್ ನಡವಳಿಕೆ ಪರಿಗಣಿಸಬೇಕು ಎಂದು ಎಸ್ ಪಿ ಪಿ ವಾದಿಸಿದ್ದಾರೆ. ಸರ್ಜರಿಗಾಗಿ ಮಧ್ಯಂತರ ಜಾಮೀನು ಪಡೆದು ಮಾಡಿಸಿಲ್ಲವೆಂದು ವಾದಿಸಿದ್ದಾರೆ.

Marathi: ಮರಾಠಿ ಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ..! #belagavi #kannada #language

ವೈದ್ಯರು 5 ಸರ್ಟಿಫಿಕೇಟ್ಗಳನ್ನು ನೀಡಿದ್ದಾರೆ. ಅಕ್ಟೋಬರ್ 24ರ ಸರ್ಟಿಫಿಕೇಟ್ ಸರ್ಜರಿ ಅಗತ್ಯವೆಂದು ಹೇಳಿದೆ. ಕಾಲು ಮರಗಟ್ಟುತ್ತದೆ ಎಂದು ಹೇಳಿದ್ದಾರೆ.ಬಿಜಿಎಸ್ ವೈದ್ಯರ ಸರ್ಟಿಫಿಕೇಟ್ ನಲ್ಲಿ ಬಳ್ಳಾರಿ ವೈದ್ಯರ ಸರ್ಟಿಫಿಕೇಟ್ ಅನ್ನು ಖಚಿತಪಡಿಸಿದ್ದಾರೆ ಎಂದು ನಟ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸಿದರು.

ದರ್ಶನ್ ಮಧ್ಯಂತರ ಜಾಮೀನಿನ ಯಾವುದೇ ಶರತ್ತು ಉಲ್ಲಂಘಿಸಿಲ್ಲ. ಎಸ್ ಪಿ ಪಿ ಸರ್ಜರಿ ಮಾಡಿಸಿಲ್ಲವೆಂದು ಆರೋಪಿಸಿದ್ದಾರೆ.ನಾನು ವೈದಿಕೀಯ ವರದಿ ಆಧರಿಸಿಯೇ ವಾದ ಮಂಡಿಸಿದ್ದೆ. ನವೆಂಬರ್ 21ರಂದು ವೈದ್ಯರು ಮತ್ತೊಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಸರ್ಜರಿಗಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ವೈದ್ಯರು ವರದಿ ನೀಡಿದ್ದಾರೆ.ನವೆಂಬರ್ 6 ರಂದು ಕೆಲ ಚಿಕಿತ್ಸೆಗಳನ್ನು ನೀಡಲಾಗಿದೆ.ಡಿಸೆಂಬರ್ 11ಕ್ಕೆ ಸರ್ಜರಿ ಮಾಡಲಾಗುತ್ತದೆ ಎಂದು ಸಿಬಿ ನಾಗೇಶ್ ಅವರು ನ್ಯಾಯಾಧೀಶರ ಗಮನಕ್ಕೆ ತಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಬೆನ್ನು ನೋವು ಹಿನ್ನೆಲೆ ಹೈಕೋರ್ಟ್‌ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಇನ್ನು ಡಿಸೆಂಬರ್ 11ಕ್ಕೆ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾಗಲಿತ್ತು. ಇದರ ನಡುವೆಯೇ ಡಿಸೆಂಬರ್ 11ಕ್ಕೆ ನಟ ದರ್ಶನ್‌ಗೆ ಸರ್ಜರಿ ಇದೆ ಎಂದು ಸಿ.ವಿ.ನಾಗೇಶ್‌ ವಾದ ಮಂಡನೆ ಮಾಡಿದ್ದರಿಂದ ಕೋರ್ಟ್‌ ಮಧ್ಯಂತರ ಜಾಮೀನನ್ನು ವಿಸ್ತರಣೆ ಮಾಡಿದೆ.

ನಟನಿಗೆ ರಕ್ತದೊತ್ತಡ ವ್ಯತ್ಯಾಸ ಆಗುತ್ತಿರುವುದರಿಂದ ಶಸ್ತ್ರ ಚಿಕಿತ್ಸೆ ಇನ್ನೂ ನಡೆಸಿಲ್ಲ ಎಂದು ಹೇಳಿದ್ದರು.

ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್‌ಗೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆ ಅಲ್ಲಿಯೇ ಅವರಿಗೆ ವೈದ್ಯರು ಕೆಲವು ಪರೀಕ್ಷೆಗಳನ್ನ ಮಾಡಿ, ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಿದ್ದರು. ಎಲ್ಲಾ ವರದಿಗಳನ್ನು ಆಧರಿಸಿ ದರ್ಶನ್​ಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಜಾಮೀನು ಅವಧಿ ಡಿಸೆಂಬರ್​ 11ಕ್ಕೆ ಅಂತ್ಯವಾಗುವ ಹಿನ್ನೆಲೆ ವಿಸ್ತರಣೆಗಾಗಿ ಮನವಿ ಮಾಡಲಾಗಿತ್ತು. ಇದೀಗ ಜಾಮೀನು ಅವಧಿ ವಿಸ್ತರಣೆ ಆಗಿದ್ದು, ದರ್ಶನ್‌ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

ರೆಗ್ಯುಲರ್​ ಬೇಲ್ ವಿಚಾರಣೆಯ ವಾದ-ಪ್ರತಿವಾದ ಮುಗಿದಿದ್ದು, ಆದೇಶವನ್ನು ಹೈಕೋರ್ಟ್​ ಕಾಯ್ದಿರಿಸಿದೆ. ಆದೇಶ ಬರುವವರೆಗೂ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Tags: actor darshan arrested in murder caseActor Darshan Bailactor darshan case updatesdarshan baildarshan bail application hearingdarshan bail extensiondarshan bail newsdarshan bail orderdarshan bail petitiondarshan bail pleadarshan bail plea hearing argumentdarshan bail verdictdarshan case chargesheet detailsdarshan case updatedarshan case updatesdarshan interim baildarshan medical grounds bailhigh courthigh court on darshan bailhigh court order on darshan bailhigh court verdict on darshan bailPrasanna KumarSPP
Previous Post

ಪ್ರಧಾನಮಂತ್ರಿ ಸೂರ್ಯ ಘರ್‌‌ಗೆ 5,14 ಲಕ್ಷ ನೋಂದಣಿ: ಮಹಾಂತೇಶ ಬಿಳಗಿ

Next Post

ಬಿಗ್ ಬಾಸ್ ಮನೆಯಲ್ಲಿ ಜಗಳ ಜೋರು – ನಾಮಿನೇಷನ್ ಪಾಸ್ ಯಾರಿಗೆ ಸಿಗುತ್ತೆ.!

Related Posts

Top Story

ಚಿತ್ರ ವಿಮರ್ಶೆ: ಸಿಂಪಲ್‌ ರಕ್ಕಿಯ ರೌಡಿಸಂ ಕಥೆಗೆ ಹುಡುಗಿಯೇ ಟ್ವಿಸ್ಟು!

by ಪ್ರತಿಧ್ವನಿ
July 11, 2026
0

ಚಿತ್ರ ರಕ್ಕಿ: ನಿರ್ದೇಶನ: ವೆಂಕಟ್‌ ಭಾರಧ್ವಾಜ್‌ ನಿರ್ಮಾಣ: ಸುರೇಶ್‌ ಸಾಲಿಗ್ರಾಮ ತಾರಾಗಣ: ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ.ಸುರೇಶ, ಹರಿಣಿ, ಸಂಪತ್‌ ಕುಮಾರ್‌, ಗೋವಿಂದೇಗೌಡ,...

Read moreDetails
2026ರ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ನಿಗದಿ: ಈ ಬಾರಿಯ ವಿಶೇಷತೆಯೇನು..?

2026ರ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ನಿಗದಿ: ಈ ಬಾರಿಯ ವಿಶೇಷತೆಯೇನು..?

July 10, 2026
ಯೋಗಿ ಈಗ ಫಾರೆವರ್!‌ 51ನೇ ಸಿನಿಮಾಗೆ ಅದ್ಧೂರಿ ಚಾಲನೆ:‌ ಸಾಥ್‌ ಕೊಟ್ಟ ಧ್ರುವ ಸರ್ಜಾ

ಯೋಗಿ ಈಗ ಫಾರೆವರ್!‌ 51ನೇ ಸಿನಿಮಾಗೆ ಅದ್ಧೂರಿ ಚಾಲನೆ:‌ ಸಾಥ್‌ ಕೊಟ್ಟ ಧ್ರುವ ಸರ್ಜಾ

July 10, 2026
ಚೆಕ್ ಬೌನ್ಸ್‌ ಕೇಸ್‌ : ಈ ನಟನಿಗೆ ಮೂರು ತಿಂಗಳು ಜೈಲು!

ಚೆಕ್ ಬೌನ್ಸ್‌ ಕೇಸ್‌ : ಈ ನಟನಿಗೆ ಮೂರು ತಿಂಗಳು ಜೈಲು!

July 10, 2026
Prakash Raj: 4 ವೋಟರ್ ಐಡಿ ಆರೋಪ-ನಟ ಪ್ರಕಾಶ್ ರಾಜ್‌ಗೆ ಜಾಮೀನು

Prakash Raj: 4 ವೋಟರ್ ಐಡಿ ಆರೋಪ-ನಟ ಪ್ರಕಾಶ್ ರಾಜ್‌ಗೆ ಜಾಮೀನು

July 10, 2026
Next Post
ಬಿಗ್ ಬಾಸ್ ಮನೆಯಲ್ಲಿ ಜಗಳ ಜೋರು – ನಾಮಿನೇಷನ್ ಪಾಸ್ ಯಾರಿಗೆ ಸಿಗುತ್ತೆ.!

ಬಿಗ್ ಬಾಸ್ ಮನೆಯಲ್ಲಿ ಜಗಳ ಜೋರು - ನಾಮಿನೇಷನ್ ಪಾಸ್ ಯಾರಿಗೆ ಸಿಗುತ್ತೆ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada