ಬಿಗ್ ಬಾಸ್ ಸೀಸನ್ 11ರ 11ನೇ ವಾರಕ್ಕೆ ಇನ್ನೇನು ಸ್ಪರ್ಧಿಗಳು ಕಾಲಿಡಲು ಸಜ್ಜಾಗಿದ್ದಾರೆ ಈ ನಡುವೆ ಯಾವ ಕಂಟೆಸ್ಟೆಂಟ್ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.ಭಾನುವಾರದ ಎಪಿಸೋಡ್ ನಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಕಿಚ್ಚ ಆಕ್ಟಿವಿಟಿಯನ್ನು ಮಾಡುತ್ತಾರೆ ಜೊತೆಗೆ ಫನ್ ಕಂಟೆಂಟ್ ಕೂಡ ಹೆಚ್ಚಿರುತ್ತದೆ.
ಎಲಿಮಿನೇಷನ್ ಅಂತ ಬಂದಾಗ ಈ ವಾರ ವೋಟಿಂಗ್ ಲೈನ್ ಗಳು ತೆರೆದಿಲ್ಲ ಎಂಬುದು ಒಂದೆಡೆಯಾದರೆ ,ಸದ್ಯ ಹೊರಬಿದ್ದಿರುವ ಪ್ರೋಮೋ ಇನ್ನಷ್ಟೂ ಕಂಫ್ಯೂಷನ್ ಕ್ರಿಯೆಟ್ ಮಾಡಿದೇ. ಪ್ರತಿ ಬಾರಿ ಬಿಗ್ ಬಾಸ್ ಸಂಡೆ ಪ್ರೋಮೋ ಹೊರ ಬಿದ್ದಾಗ, ಕಿಚ್ಚ ಯಾರಿಗೆ ಕ್ಲಾಸ್ ತಗೊಳ್ತಾರೆ ಅಥವಾ ಯಾವ ಆಕ್ಟಿವಿಟಿಯನ್ನು ಮಾಡುತ್ತಾರೆ ಎಂಬುವ ಕುರಿತು ಇರುತ್ತದೆ. ಆದರೆ ಇಂದಿನ ಪ್ರಮೋದಲ್ಲಿ ಮನೆಯಿಂದ ಹೊರ ಹೋಗಲು ಕೊನೆಯಲ್ಲಿ ಉಳಿದ ಇಬ್ಬರು ಕಂಟೆಸ್ಟೆಂಟ್ಗಳನ್ನು ತೋರಿಸಲಾಗಿದೆ.
ಹೌದು ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಆರು ಜನ ಕಂಟೆಸ್ಟೆಂಟ್ಗಳು ಅವರಲ್ಲಿ ಎಲ್ಲರೂ ಸೇಫ್ ಆಗಿ ಕೊನೆಯಲ್ಲಿ ಚೈತ್ರ ಹಾಗೂ ಐಶ್ವರ್ಯ ಅವರು ಉಳಿದಿದ್ದಾರೆ. ಅದರಲ್ಲೂ ಕಿಚ್ಚ, ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಹೊರ ಹೋಗಬಹುದು ಅಥವಾ ಇಬ್ಬರೂ ಕೂಡ ಹೋಗಬಹುದು ಎಂಬುದಾಗಿ ಹೇಳ್ತಾರೆ.
ಹಾಗೂ ಮನೆಯಿಂದ ಹೊರ ಹೋಗುವರು ಮೇನ್ ಡೋರ್ ಇಂದ ಹೋಗೋದಿಲ್ಲ ಬದಲಾಗಿ ಬೇರೆ ಬೇರೆ ಕಡೆಯಿಂದ ಎಕ್ಸಿಕ್ಟ್ ಆಗ್ತಾರೆ ಎಂಬುದಾಗಿ ಕಿಚ್ಚ ಹೇಳ್ತಾರೆ. ಇದಾದ ನಂತರ ಚೈತ್ರ ಕನ್ಫ್ಯೂಷನ್ ರೂಂಗೆ ಹೋಗ್ತಾರೆ ಹಾಗೂ ಐಶ್ವರ್ಯ ಅವರು ಆಕ್ಟಿವಿಟಿ ರೂಮ್ಗೆ ಕಣ್ಣೀರಾಗುತ್ತಾ ಹೋಗುತ್ತಾರೆ.
ಹಾಗೂ ಈ ಪ್ರಮೋದ ಕೊನೆಯಲ್ಲಿ ಅಂತೂ ಚೈತ್ರ ಅವರು ಮನೆಗೆ ಹೋದರು ಎಂಬ ಮಾತುಗಳನ್ನ ಕೆಲವು ಕಂಟೆಸ್ಟೆಂಟ್ಗಳು ಮಾತನಾಡುತ್ತಾರೆ. ಇದೆಲ್ಲಾ ನೋಡ್ತಾ ಇದ್ರೆ ಈ ವಾರ ಕಂಟೆಸ್ಟೆಂಟ್ ಬಿಗ್ ಬಾಸ್ ಮನೆಯಿಂದ ಹೊರ ಬರುವ ಬದಲು ಸೀಕ್ರೆಟ್ ರೂಮ್ಗೆ ಹೋಗಬಹುದು.