ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಆರು ಜನ ಕಂಟೆಸ್ಟೆಂಟ್ಗಳು ಅವರಲ್ಲಿ ಎಲ್ಲರೂ ಸೇಫ್ ಆಗಿ ಕೊನೆಯಲ್ಲಿ ಚೈತ್ರ ಹಾಗೂ ಐಶ್ವರ್ಯ ಅವರು ಉಳಿದಿದ್ದಾರೆ. ಅದರಲ್ಲೂ ಕಿಚ್ಚ, ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಹೊರ ಹೋಗಬಹುದು ಅಥವಾ ಇಬ್ಬರೂ ಕೂಡ ಹೋಗಬಹುದು ಎಂಬುದಾಗಿ ಹೇಳ್ತಾರೆ.
ಹಾಗೂ ಮನೆಯಿಂದ ಹೊರ ಹೋಗುವರು ಮೇನ್ ಡೋರ್ ಇಂದ ಹೋಗೋದಿಲ್ಲ ಬದಲಾಗಿ ಬೇರೆ ಬೇರೆ ದಾರಿಯಿಂದ ಹೊರಬರ್ತಾರೆ ಎಂಬುದಾಗಿ ಕಿಚ್ಚ ಹೇಳ್ತಾರೆ. ಇದಾದ ನಂತರ ಚೈತ್ರ ಕನ್ಫ್ಯೂಷನ್ ರೂಂಗೆ ಹೋಗ್ತಾರೆ ಹಾಗೂ ಐಶ್ವರ್ಯ ಅವರು ಆಕ್ಟಿವಿಟಿ ರೂಮ್ಗೆ ಕಣ್ಣೀರು ಹಾಕ್ತ ಹೋಗುತ್ತಾರೆ.
ಕನ್ಫ್ಯೂಷನ್ ರೂಮ್ಗೆ ಹೋದಂತ ಚೈತ್ರ ಅವರಿಗೆ ಬಿಗ್ ಬಾಸ್ ಹೆಡ್ ಫೋನ್ಸ್ ನೀಡ್ತಾರೆ ಜೊತೆಗೆ ಮನೆಯಲ್ಲಿ ಏನೆಲ್ಲಾ ಮಾತಾಡ್ತಾರೆ ಎಂಬುದನ್ನ ಕೇಳಿಸಿಕೊಳ್ತಾರೆ.. ಇನ್ನು ಮನೆಯಲ್ಲಿ ಇದ್ದ ಉಳಿದ ಸ್ಪರ್ಧಿಗಳು ಇವರ ಬಿಗ್ ಬಾಸ್ ನಿಂದ ಚೈತ್ರ ಹಾಗೂ ಎಲಿಮಿನೇಟ್ ಆಗಿದ್ದಾರೆ ಅಂದುಕೊಂಡು ಚೈತ್ರ ಅವರ ಬಗ್ಗೆ ಒಂದಿಷ್ಟು ಚರ್ಚೆಗಳನ್ನ ಮಾಡ್ತಾರೆ.
ಹನುಮಂತ ಚೈತ್ರಕ್ಕ ಹೋದಳು ಪಾಪ ಅಂತ ಹೇಳ್ತಾರೆ ಅದಕ್ಕೆ, ಧನರಾಜ್ ಟಾ ಟಾ, ಬೈ, ಬೈ ಮಾಡಿದ್ದಾರೆ.ಈ ನಡುವೆ ರಜತ್, ಮಂಜು, ತ್ರಿವಿಕ್ರಮ್ , ಹನುಮಂತ ಹಾಗೂ ಧನರಾಜ್ ಗಾರ್ಡನ್ ಏರಿಯಾ ಅಲ್ಲಿ ಕುಳಿತುಕೊಂಡಾಗ ರಜತ್ ಜನಕ್ಕೆ ಈ ಯಮ್ಮ ಮಾತಾಡಿದ್ದೇ ಮಾತನಾಡುತ್ತಿದ್ದಾಳೆ ಅಂತ ಇರಿಟೇಟ್ ಅನ್ನಿಸಿರಬಹುದು ಎಂದಿದ್ದಾರೆ , ಇದಕ್ಕೆ ತ್ರಿವಿಕ್ರಮ್ ಚಪ್ಪಾಳೆ ಹೊಡೆದು ನಕ್ಕಿದ್ದಾರೆ.
ಈ ಎಲ್ಲಾ ಮಾತುಗಳನ್ನ ಚೈತ್ರಾ ಕುಂದಾಪುರ ಅವರು ಕೇಳಿಸಿಕೊಂಡಿದ್ದು, ನಿಜವಾದ ಬಿಗ್ ಬಾಸ್ ಮನೆಯ ಆಟ ಅಂದ್ರೆ ಇದೆ ಎಂದು ಕಣ್ಣೀರು ಹಾಕಿದ್ದಾರೆ.