
ಮೈಸೂರು :ಸಮಾಜದಲ್ಲಿ ಕ್ರೀಡೆ ಮತ್ತು ಫಿಟ್ನೆಸ್ ಅನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡೈನಾಮಿಕ್ ಮತ್ತು ಸ್ಪೂರ್ತಿದಾಯಕ ನಾಯಕ ಕೃಷ್ಣ ಬೈರೇಗೌಡ ಅವರು, ಸ್ವತಃ ಈಜುವ ಮೂಲಕ ಕೆಂಪಾಪುರದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿದ ಅವರೀಗ ಸೈಕ್ಲಿಂಗ್ ಮಾಡುವ ಮೂಲಕ ಮೈಸೂರಿನಲ್ಲಿ ಟೂರ್ ಆಫ್ ನೀಲಗಿರಿ 2024 ಮ್ಯಾರಥಾನ್ಗೆ ಚಾಲನೆ ನೀಡಿದ್ದಾರೆ.

ವಿವಿದ ರಾಜ್ಯ ಹಾಗೂ ದೇಶದಳಿಂದ ಬಂದಿದ್ದ ಸೈಕಲಿಸ್ಟ್ ಗಳ ಜೊತೆ ಸವಾರಿ.ಸುಮಾರು 80 ಜನ ಸೈಕ್ಲಿಸ್ಟ್ ಗಳ ಜೊತೆ ಕೃಷ್ಣ ಭೈರೇಗೌಡ ಸೈಕಲ್ ಸವಾರಿ.ಮೈಸೂರಿನಿಂದ ಕೊಯಮತ್ತೂರಗೆ ಹೊರಟಿರುವ ಟೂರ್ ಆಫ್ ನಿಲಿಗಿರಿಸ್ ಗೆ ಸೈಕ್ಲಿಸ್ಟ್ ತಂಡ.8 ದಿನದಲ್ಲಿ 800 ಕಿ.ಮೀ ಸಂಚಾರ ಮಾಡಲಿರುವ ಸೈಕಲ್ ಸವಾರರು.

ಈ ವೇಳೆ ಸೈಕಲ್ ಸವಾರರ ಜೊತೆ 10 ಕಿ.ಮೀ ಸವಾರಿ ಮಾಡಿದ ಸಚಿವ.ನಾನು ಸೈಕಲ್ ಸವಾರಿ ಮಾಡುವುದು ನನಗು ಇಷ್ಟ.ಆರೋಗ್ಯ ದೃಷ್ಟಿಯಿಂದ ಸೈಕಲ್ ಸವಾರಿ ಮಾಡಬೇಕು.ನಾನು ಈ ಮ್ಯಾರಥಾನ್ ಭಾಗವಹಿಸಬೇಕು ಎಂಬ ಆಸೆ ಇತ್ತು.ಆದರೆ ಕೆಲಸದ ಕಾರಣದಿಂದ ಭಾಗವಹಿಸಲು ಸಾಧ್ಯವಿಲ್ಲ.ಮೈಸೂರಿನಲ್ಲಿ ಸಚಿವ ಕೃಷ್ಣ ಬೈರೆಗೌಡ ಹೇಳಿದರು.