ಬಿಗ್ ಬಾಸ್ ಸೀಸನ್ ಕನ್ನಡ 11 ರಲ್ಲಿ ಸದ್ಯ ರಾಜಕೀಯ ಚದುರಂಗ ಟಾಸ್ಕ್ ಜೋರಾಗಿಯೇ ನಡಿತಾ ಇದೆ.ನಿನ್ನೆ ಬಿಗ್ ಬಾಸ್ ಎಪಿಸೋಡ್ ನಲ್ಲಿ ಎರಡು ತಂಡಗಳ ನಡುವೆ ಕಾಂಪಿಟೇಶನ್ ಹೆಚ್ಚುತ್ತು ಜೊತೆಗೆ ಫೈಟ್ ಕೂಡ ಅತಿ ಆಯ್ತು.ಇದೇ ಕಾರಣಕ್ಕೆ ಬಿಗ್ ಬಾಸ್ ನಿನ್ನೆಯ ಟಾಸ್ಕ್ ಅನ್ನ ರದ್ದು ಮಾಡಿದ್ರು.

ಹಾಗೂ ನಿನ್ನೆ ಬಿಗ್ ಬಾಸ್ ಮನೆಗೆ ಕನ್ನಡ ನ್ಯೂಸ್ ಚಾನೆಲ್ ನಲ್ಲಿ ತುಂಬಾನೇ ಫೇಮಸ್ ಆಗಿರುವಂತಹ ನಿರೂಪಕಿ ರಾಧಾ ಹಿರೇಗೌಡ ಅವರು ಅತಿಥಿಯಾಗಿ ಬಂದಿದ್ರು..
ಆದರೆ ಇವತ್ತಿನ ಬಿಗ್ ಬಾಸ್ ನ ಹೊಸ ಪ್ರೋಮೋ ರಿಲೀಸ್ ಆಗಿದ್ದು ತುಂಬಾನೇ ಶಾಕ್ ನೀಡಿದೆ. ಮೊದಲೇ ಹೇಳಿದ ಹಾಗೆ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಚದುರಂಗ ಆಟ ನಡಿತಾ ಇದೆ. ರಾಜಕೀಯ ಅಂದಮೇಲೆ ಪೊಲಿಟಿಷಿಯನ್ಸ್ ಹೇಗೆ ಬೇಕೋ ಅದೇ ರೀತಿ ಸಾಮಾನ್ಯ ಜನರ ಅವಶ್ಯಕತೆ ಕೂಡ ತುಂಬಾನೇ ಇರುತ್ತದೆ.. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಒಂದಿಷ್ಟು ಸಾಮಾನ್ಯ ಜನರು ಎಂಟ್ರಿಕೊಟ್ಟಿದ್ದಾರೆ..ಹಾಗೂ ಅವರವರ ಅಭಿಪ್ರಾಯವನ್ನು ತಿಳಿಸಿಕೊಟ್ಟಿದ್ದಾರೆ. ಜನರ ಅಭಿಪ್ರಾಯ ಕೇಳಿದ ಬಿಗ್ ಬಾಸ್ ಕಂಟೆಸ್ಟೆಂಟ್ ಗಳು ಒಂದು ಕಡೆ ಖುಷಿಪಟ್ಟರೆ ಇನ್ನೊಂದು ಕಡೆ ಶಾಕ್ ಆಗಿದ್ದಾರೆ.

ಬಿಗ್ ಬಾಸ್ ಕಳೆದ 10 ಸೀಜನ್ ಗಳಲ್ಲಿ ಯಾವ ಸೀಜನ್ ಕೂಡ ಇಂತಹ ಪ್ರಯತ್ನ ಮಾಡಿರ್ಲಿಲ್ಲ. ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಸಾಮಾನ್ಯ ಜನರು ಎಂಟ್ರಿ ಕೊಟ್ಟು ಇತಿಹಾಸ ಸೃಷ್ಟಿಸಿದ್ದಾರೆ.

ಒಟ್ಟಾರೆಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಂತ ಪಬ್ಲಿಕ್, ಕಂಟೆಸ್ಟೆಂಟ್ ಗಳಿಗೆ ಏನೆಲ್ಲ ಪ್ರಶ್ನೆ ಕೇಳ್ತಾರೆ ?ಕಂಟೆಸ್ಟೆಂಟ್ಗಳು ಇದಕ್ಕೆ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನ ಇವತ್ತಿನ ಎಪಿಸೋಡ್ ನೋಡಿ ತಿಳಿಯಬೇಕಿದೆ.





