ಬೆಂಗಳೂರು : ಸಿಎಂ ಇಬ್ರಾಹಿಂ ರಾಜೀನಾಮೆ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಭವಾನಿ ರೇವಣ್ಣ ಕಣ್ಣಿಟ್ಟಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸದ್ಯ ಭಾರೀ ಚರ್ಚೆಗೆ ಕಾರಣವಾಗ್ತಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಇಂದು ಸ್ಪಷ್ಟನೆ ನೀಡಿದ ಮಾಜಿ ಸಚಿವ ಹೆಚ್ಡಿ ರೇವಣ್ಣ, ನಾವ್ಯಾರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಭವಾನಿ ರೇವಣ್ಣರಿಗೆ ಕೊಡಬೇಕು ಎಂದು ಕೇಳಿಯೇ ಇಲ್ಲ ಎಂದಿದ್ದಾರೆ.
ಇದು ಕೇವಲ ಒಂದು ಗಾಳಿ ಸುದ್ದಿ . ಇಂತಹದ್ದೊಂದು ಬೇಡಿಕೆಯನ್ನೇ ನಾವು ಪಕ್ಷದ ವರಿಷ್ಠರ ಎದುರು ಇಟ್ಟಿಲ್ಲ. ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೆಚ್ಡಿ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ,
ಈ ಬಾರಿಯ ಚುನಾವಣೆಯಲ್ಲಿ ಹಾಸನದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣಗೆ ಟಿಕೆಟ್ ಮಿಸ್ ಆಗಿತ್ತು . ಹೆಚ್ಡಿಕೆ ಒತ್ತಾಯದ ಮೇರೆಗೆ ಹಾಸನ ಟಿಕೆಟ್ ಸ್ವರೂಪ್ಗೆ ನೀಡಲಾಗಿದ್ದು ಅವರು ಚುನಾವಣೆಯಲ್ಲಿ ಗೆಲುವನ್ನೂ ಸಾಧಿಸಿದ್ದರು. ಇದಾದ ಬಳಿಕ ಭವಾನಿ ರೇವಣ್ಣಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು.