• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ತಂದೆ, ಮಗಳ ಸಾವಿನ ಬಳಿಕ ಎಚ್ಚೆತ್ತ BESCOM : ಟ್ರಾನ್ಸ್ ಫಾರ್ಮರ್ ಸರ್ವೇಗಿಳಿದ ವಿದ್ಯುತ್ ಮಂಡಳಿ!

ಪ್ರತಿಧ್ವನಿ by ಪ್ರತಿಧ್ವನಿ
March 30, 2022
in ಕರ್ನಾಟಕ
0
ತಂದೆ, ಮಗಳ ಸಾವಿನ ಬಳಿಕ ಎಚ್ಚೆತ್ತ BESCOM : ಟ್ರಾನ್ಸ್ ಫಾರ್ಮರ್ ಸರ್ವೇಗಿಳಿದ ವಿದ್ಯುತ್ ಮಂಡಳಿ!
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನದ ಹಿಂದೆ ನಡೆದ ಟ್ರಾನ್ಸ್ ಫಾರ್ಮರ್ ದುರಂತದ ಬೆನ್ನಲ್ಲೆ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತುದೆ. ನಗರದಲ್ಲಿ ಅಪಾಯದಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಸರ್ವೇಯನ್ನ ಬೆಸ್ಕಾಂ ಆರಂಭಿಸಿದ್ದು, ಈ ಮೂಲಕ ಟ್ರಾನ್ಸ್ ಫಾರ್ಮರ್ ಗಳಿಂದ ಸಂಭವಿಸಬಹುದಾದಂತ ದುರಂತಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ADVERTISEMENT

ಅಪಾಯದಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಬದಲಾವಣೆಗೆ ಸರ್ವೇ ಆರಂಭಿಸಿದ ಬೆಸ್ಕಾಂ !

ಕಳೆದ ಬುಧವಾರ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಬೆಂಗಳೂರಿನ ಮಂಗನಹಳ್ಳಿ ಬಳಿ ಹಂಪ್​ ಹತ್ತಿರ ವಾಹನದ ವೇಗ ತಗ್ಗಿಸಿದ ಸಂದರ್ಭದಲ್ಲೇ ಅಲ್ಲಿದ್ದ ಟ್ರಾನ್ಸ್​ಫಾರ್ಮರ್ ಸ್ಫೋಟಗೊಂಡು, ಅದರಲ್ಲಿನ ಆಯಿಲ್ ಸಮೇತ ಬೆಂಕಿ ಸಿಡಿದು ತಂದೆ ಮಗಳು ಇಬ್ಬರು ದುರಂತವಾಗಿ ಸಾವನ್ನಪಿದ್ದರು. ಈ ಸಾವುಗಳ ಬಳಿಕ ಸದ್ಯ ಬೆಸ್ಕಾಂ ಅಧಿಕಾರಿಗಳು ಇಂತಹ ದುರಂತಗಳನ್ನ ತಪ್ಪಿಸಲು ಮುಂದಾಗಿದ್ದಾರೆ. ನಗರದಲ್ಲಿ ದುರಸ್ತಿ ಮತ್ತು ಕ್ಷಮತೆ ಕಳೆದುಕೊಂಡಿರುವ ಟ್ರಾನ್ಸ್ ಫಾರ್ಮರ್ ಗಳ ಸರ್ವೇ ಆರಂಭಿಸಿದ್ದು, ಈ ಸರ್ವೇ ಮೂಲಕ ಸಮಸ್ಯೆ ಇರುವ ಟ್ರಾನ್ಸ್ ಫಾರ್ಮರ್ ಗಳನ್ನ ಪತ್ತೆ ಮಾಡಿ ಅವುಗಳನ್ನ ಬದಲಾಯಿಸಿ ಅವಘಡಗಳನ್ನ ತಪ್ಪಿಸಲು  ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಗಳು ಅಪಾಯದ ಸ್ಥಿತಿಯಲ್ಲಿ !

ಬೆಂಗಳೂರಿನಲ್ಲಿ ಬರೊಬ್ಬರಿ 4,50,584 ಟ್ರಾನ್ಸ್ ಫಾರ್ಮರ್ ಸೆಂಟರ್ ಗಳಿವೆ. ಇವುಗಳಲ್ಲಿ 25, 63, 100, 250, 500 ಕೆವಿ ಕ್ಯಾಪಸಿಟಿ ಟ್ರಾನ್ಸ್ ಫಾರ್ಮರ್ ಗಳು ಇದ್ದು, ಸದ್ಯದ ಮಾಹಿತಿ ಪ್ರಕಾರ ನಗರದಾದ್ಯಂತ 100 ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಗಳು ಅಪಾಯ ತಂದೊಡ್ಡಬಲ್ಲ ಪರಿಸ್ಥಿತಿಯಲ್ಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ 25  ಮತ್ತು 15  ವರ್ಷದ ಹಳೆಯ 1000 ಕ್ಕೂ ಹೆಚ್ಚು  ಟ್ರಾನ್ಸ್ ಫಾರ್ಮರ್ ಡೇಂಜರ್‌ ಹಂತದಲ್ಲಿವೆ.  ಜೊತೆಗೆ  27,830 ಅಧಿಕ‌ ಟ್ರಾನ್ಸ್ ಫಾರ್ಮರ್ ವಿಫಲವಾಗಿವೆ.  ಇವೆಲ್ಲ ಹಲವು ವರ್ಷಗಳ ಹಳೆದಾದ ಕಾರಣ ಅವುಗಳ ಗುಣಮಟ್ಟ ಪರಿಶೀಲನೆ ಮಾಡಿ, ಅವುಗಳ ಗುಣಮಟ್ಟ ಕ್ಷೀಣಿಸಿದ್ರೆ ಅವುಗಳನ್ನು ಬದಲಾಯಿಸಿ ಮತ್ತಷ್ಟು ಗುಣಮಟ್ಟದ ಟ್ರಾನ್ಸ್ ಫಾರ್ಮರ್ ಹಾಕಲು ಬೆಸ್ಕಾಂ ಚಿಂತನೆ ನಡೆಸಿದೆ.

ಟ್ರಾನ್ಸ್ ಫಾರ್ಮರ್ ಸರ್ವೇ ಬಗ್ಗೆ ಬೆಸ್ಕಾಂ ಟೆಕ್ನಿಕಲ್ ವಿಭಾಗದ ನಿರ್ದೇಶಕ ನಾಗರ್ಜುನ್ ಮಾಹಿತಿ ನೀಡಿದ್ದು, ಈಗಾಗಲೇ ನಗರದಾದ್ಯಂತ ಏಜ್ ಓಲ್ಡ್ ಟ್ರಾನ್ಸ್ ಫಾರ್ಮರ್ ಸರ್ವೇ ಆರಂಭಿಸಿದ್ದೇವೆ. ಸಾಮಾನ್ಯವಾಗಿ ಓವರ್ ಲೋಡ್ ಆದ ಟ್ರಾನ್ಸ್ ಫಾರ್ಮರ್ ಗಳು ಬಳಕೆಗೆ ಬರಲ್ಲ. ಮಳೆ ಸಂಧರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಲೂ ಬೇಗ ಹಾಳಾಗುತ್ತೆ. ಇಂತಹ ಸಮಸ್ಯೆಗಳನ್ನ ಸರ್ವೇ ಮೂಲಕ ಪತ್ತೆ ಮಾಡಲಾಗುತ್ತೆ. ಬಳಿಕ ಅವುಗಳ ಜಾಗಕ್ಕೆ ಉತ್ತಮ ಗುಣಮಟ್ಟದ ಟ್ರಾನ್ಸ್ ಫಾರ್ಮರ್ ಗಳನ್ನ ಅಳವಡಿಕೆ ಮಾಡಲಾಗುತ್ತೆ. ಸರ್ವೇ ಸಂಪೂರ್ಣವಾಗಿ ಇನ್ನೊಂದು ತಿಂಗಳೊಳಗೆ ಮುಕ್ತಾಯವಾಗಲಿದ್ದು ಆ ಬಳಿಕ ತಕ್ಷಣವೇ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದಿದ್ದಾರೆ. ಒಟ್ಟಾರೆ ದುರಂತದ ಬೆನ್ನಲ್ಲೆ ಬೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡಿರೋದು ಸಂತಸದ ವಿಚಾರ. ಆದರೆ ಸದ್ಯ ನಗರದಲ್ಲಿ ಇನ್ನಷ್ಟು ಟ್ರಾನ್ಸ್ ಫಾರ್ಮರ್ ಗಳು ಡೇಂಜರ್ ಪರಿಸ್ಥಿತಿಯಲ್ಲಿದ್ದು ಆದಷ್ಟು ಬೇಗ ಅವುಗಳನ್ನು ಬದಲಾಯಿಸಿ ಆಗಬಹುದಾದ ಅಪಾಯ ತಪ್ಪಿಸಲು ಬೆಸ್ಕಾಂ ತನ್ನ ಸರ್ವೇ ಕೆಲಸವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ.

Tags: BescomBJPCongress Partyತಂದೆಬಿಜೆಪಿಮಗಳ ಸಾವುವಿದ್ಯುತ್ ಮಂಡಳಿ
Previous Post

ಬಂದೂಕು ಹೊಂದಲು ಕೊಡವರಿಗೆ ವಿಶೇಷ ಅವಕಾಶ : ರಾಜ್ಯಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

Next Post

ಜಮ್ಮು & ಕಾಶ್ಮೀರ : CRPF ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಮುಸುಕುಧಾರಿ ಮಹಿಳೆ!

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
Next Post
ಜಮ್ಮು & ಕಾಶ್ಮೀರ : CRPF ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಮುಸುಕುಧಾರಿ ಮಹಿಳೆ!

ಜಮ್ಮು & ಕಾಶ್ಮೀರ : CRPF ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಮುಸುಕುಧಾರಿ ಮಹಿಳೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada