ಭಾನುವಾರ ರಾಮನವಮಿ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿದ್ದರಿಂದ ವ್ಯಾಪರಿಗಳು ತೀವ್ರ ನಷ್ಟವನ್ನು ಅನುಭವಿಸಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಭಾನುವಾರದಂದೇ ರಾಮನವಮಿ ಮತ್ತು ರಂಜಾನ್ ಆರಂಭ ಇತ್ತು. ಬಿಬಿಎಂಪಿ ಮಾಂಸ ಮಾರಟವನ್ನು ನಿಷೇಧಿಸಿದ ಕಾರಣ ನಾವು ಗರಿಷ್ಠ 25,000ರೂಗಳ ವರೆಗೆ ನಷ್ಟವನ್ನು ಅನುಭವಿಸಿದ್ದೇವೆ ಎಂದು ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರತಿ ವರ್ಷ ಮಹಾಶಿವರಾತ್ರಿ, ರಾಮನವಮಿ, ಗಾಂಧಿ ಜಯಂತಿ ಸೇರಿದಂತೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಮಾಂಸ ಮಾರಾಟವನ್ನು ವರ್ಷದಲ್ಲಿ 8 ದಿನಗಳು ನಿಷೇಧಿಸುತ್ತದೆ. ಈ ಹಿಂದೆ ಯುಗಾದಿ ಹಬ್ಬದ ಸಂದರ್ಭ ಹಲಾಲ್ ಮಾಂಸವನ್ನು ಖರೀದಿಸದಂತೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದ ಬೆನ್ನಲ್ಲೇ ಈ ಪ್ರಕಟನೆ ಬಂದಿದ್ದು ನಮ್ಮಗೆ ತೀವ್ರ ನಷ್ಟ ಉಂಟಾಯಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಹಲಾಲ್ ಮಾಂಸದ ಬಗ್ಗೆ ಗಂಭೀರ ಆಕ್ಷೇಪಣೆಯನ್ನು ಎತ್ತಲಾಗಿದೆ ಮತ್ತು ಗಂಭೀರ ನಿಲುವು ತೆಗೆದುಕೊಳ್ಳುವ ಮೊದಲು ಸರ್ಕಾರವು ಸಮಸ್ಯೆಯನ್ನು ಗಂಭೀರವಾಗಿ ಪರಿಶೀಲಿಸುತ್ತದೆ ಎಂದು ಹೇಳಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಬಿಬಿಎಂಪಿ ಅಧಿಕಾರಿಯೊಬ್ಬರು ಇದು ಬಿಬಿಎಂಪಿಯ ವಾಡಿಕೆಯ ಆದೇಶ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದ ಅತ್ಯಂತ ಜನನಿಬಿಡ ಮಾಂಸ ಮಾರುಕಟ್ಟೆಗಳಲ್ಲಿ ಒಂದಾದ ರಸೆಲ್ ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿಗಳು ಮುಚ್ಚಿದ್ದವು ಮತ್ತು ಸಂಜೆಯ ನಂತರ ಕೆಲವು ಅಂಗಡಿ ಮುಂಗಟ್ಟುಗಳು ತೆರೆದವು.
ಈ ಕುರಿತು ಮಾತನಾಡಿರುವ ರಸೆಲ್ ಮಾರುಕಟ್ಟೆ ಮಾಂಸ ವ್ಯಾಪಾರಿಗಳ ಸಂಘದ ಅಧ್ಯಕ್ಷ ಫೈರೋಜ್ ಖುರೇಷಿ ಶನಿವಾರ ತಡವಾಗಿ ನಿಷೇಧ ಘೋಷಿಸಿದ್ದರಿಂದ ಅನೇಕರು ಸಂಜೆಯೇ ಮಾಂಸವನ್ನು ಖರೀದಿಸಿದ್ದರು ಹಾಗಾಗಿ ಭಾನುವಾರ ನಮ್ಮಗೆ ದೊಡ್ಡ ನಷ್ಟವಾಗಲಿಲ್ಲ. ಆದರೆ, ನಾವು ಏನೇ ಮಾಡಿದ್ದರು ಸೋಮವಾರ ಮರುಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ನಾವು ಭಾನುವಾರ ಅಂಗಡಿಗಳನ್ನು ತೆರೆಯುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿದ್ದಾರೆ.
ರಸೆಲ್ ಮಾರುಕಟ್ಟೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಾನ್ಸನ್ ಮಾರ್ಕೆಟ್ನಲ್ಲಿ ಮಾಂಸದ ಅಂಗಡಿಗಳು ಮುಚ್ಚಲ್ಪಟ್ಟಿದ್ದವು ತರಕಾರಿ ವ್ಯಾಪಾರ ಎಂದಿನಂತೆ ನಡೆಯಿತ್ತು. ಆದರೆ, ಮಾರುಕಟ್ಟೆಗಳಲ್ಲಿನ ಅಂಗಡಿಗಳಲ್ಲಿ ಮಾಂಸಹಾರ ಇರುವ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿತ್ತು ಇಲ್ಲಿನ ವರ್ತಕರು ಕೂಡ ಮಾಂಸ ಮಾರಾಟ ನಿಷೇಧದಿಂದಾಗಿ ಭಾನುವಾರ ಹೆಚ್ಚಿನ ನಷ್ಟವನ್ನು ಅನುಭವಿಸಿದ್ದಾರೆ ಎಂದು ವ್ಯಾಪಾರಿ ಒಬ್ಬರು ಹೇಳಿದ್ದಾರೆ.
ಟ್ಯಾನರಿ ರಸ್ತೆಯಲ್ಲರಿಉವ ಪ್ರಮುಖ ಫುಡ್ ಸ್ಟ್ರೀಟ್ನಲ್ಲಿ ಡಜನ್ಗಟ್ಟಲೆ ಮಾಂಸದ ಅಂಗಡಿಗಳು, ಹೋಟೆಲ್ಗಳು ಹಾಗೂ ಕಸಾಯಿ ಖಾನೆಗಳನ್ನು ಹೊಂದಿದೆ. ಆದರೆ, ಭಾನುವಾರ ನಿಷೇಧ ಹೇರಿದ್ದ ಕಾರಣ ತೀವ್ರ ನಷ್ಟವಾದ್ದ ಕುರಿತು ವ್ಯಾಪಾರಿಗಳು ತೀವ್ರ ಅಸಮಾಧಾನವನ್ನು ಹೋರಹಾಕಿದ್ದರು. ಆದರೆ, ಜಾರಿಗೆ ತಂದಿರುವ ನಿಯಮವನ್ನು ತಪ್ಪದೆ ಪಾಲಿಸಿದ್ದಾಗಿ ತಿಳಿಸಿದ್ದರು.
ರಂಜಾನ್ ತಿಂಗಳಾಗಿರುವುದರಿಂದ ನಾವು ಸಾಮಾನ್ಯವಾಗಿ ಭಾನುವಾರದಂದು ಹೆಚ್ಚಿನ ವ್ಯಾಪಾರವನ್ನು ನಿರೀಕ್ಷಿಸುತ್ತೇವೆ. ಸಣ್ಣ ಪುಟ್ಟ ಅಂಗಡಿಗಳು ಸಹ ನಿಷೇಧ ಹೇರಿದ್ದರಿಂದ 10-15 ಸಾವಿರ ರೂಪಾಯಿಗಳ ನಷ್ಟವನ್ನು ಅನುಭವಿಸಿವೆ, ಮಧ್ಯಮ ಹಾಗೂ ದೊಡ್ಡ ಅಂಗಡಿಗಳು 25-30 ಸಾವಿರ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಮತ್ತೊಂದು ಪ್ರಮುಖ ಮಾರುಕಟ್ಟೆಯಾದ ಕೆ.ಆರ್. ಮಾರುಕಟ್ಟೆಯಲ್ಲಿ ಮಾಂಸದ ಅಂಗಡಿಗಳು ಮುಚ್ಚಿದ್ದವು.