ಬೆಂಗಳೂರಲ್ಲಿ ಪಾರ್ಟಿ ಮುಗಿಸಿದ ಬಳಿಕ ಮನೆಗೆ ಹೋಗಲು ಅಪರಿಚಿತನ ಬಳಿ ಲಿಫ್ಟ್ ಕೇಳಿದ ಯುವತಿಯನ್ನು ಎಚ್ಎಸ್ಆರ್ ಲೇಔಟ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಕಾಮುಕ ಪಾತಕಿಯನ್ನ ಪೋಲೀಸರು ಬಂಧಿಸಿದ್ದಾರೆ. ಸಿಸಿಟಿವಿ ಫೂಟೇಜ್ ಆಧರಿಸಿ ಕಾಮುಕನನ್ನು ಪತ್ತೆಹಚ್ಚಲಾಗಿದೆ. ಅನ್ಯರಾಜ್ಯದ ಯುವತಿ ಬೆಂಗಳೂರಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದು ಗೆಟ್ ಟುಗೆದರ್ ಪಾರ್ಟಿಗಾಗಿ ಸ್ನೇಹಿತರ ಜೊತೆ ಹೋಗಿದ್ದಳು. ವಾಪಸ್ ಆಗುತ್ತಿದ್ದ ಯುವತಿಯನ್ನು ಈ ಯುವಕ ಬೈಕ್ನಲ್ಲಿ ಡ್ರಾಪ್ ನೆಪದಲ್ಲಿ ಕರೆದೊಯ್ದಿದ್ದಾನೆ. ಬೊಮ್ಮನಹಳ್ಳಿ ಸಮೀಪದ ಶೆಡ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಪ್ರಕರಣದ ಸ್ಥಳದ ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಯನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.ಆರೋಪಿಯ ಆಡುಗೋಡಿಯ ನಿವಾಸದಿಂದ ಆತನನ್ನು ಬಂಧಿಸಲಾಗಿದೆ. ಸದ್ಯ ತನಿಖೆ ಮುಂದುವರೆದಿದ್ದು ಆರೋಪಿಯ ಹೆಚ್ಚಿನ ವಿವರ ಗೊತ್ತಾಗಬೇಕಿದೆ. ತಮಿಳುನಾಡು ಮೂಲದ ಕೊರಿಯೋಗ್ರಾಫರ್ ಆಗಿರುವ ಅತ್ಯಾಚಾರ ಆರೋಪಿ ಇದೇ ಸಮಯದಲ್ಲಿ ಕೋರಮಂಗಲ ಪಬ್ಗೆ ಪಾರ್ಟಿಗೆ ಬಂದಿದ್ದ. ಮನೆಗೆ ತೆರಳುವಾಗ ಯುವತಿ ಡ್ರಾಪ್ ಕೇಳಿದ್ದಾಳೆ. ಯುವತಿ ಕೂಡ ಕೋರಮಂಗಲದ ಪಬ್ನಲ್ಲಿ ಪಾರ್ಟಿ ಮುಗಿಸಿ ಹೊರಟಿದ್ದಳು. BNS ಕಾಯ್ದೆ 64 ಅಡಿಯಲ್ಲಿ HSR ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಬಿಜೆಪಿ ಕಚೇರಿಗೆ ಬರ್ತೇವೆ.. ಚರ್ಚೆಗೆ ಸಿದ್ಧವಿರಿ.. ಓಪನ್ ಚಾಲೆಂಜ್
ಮೈಸೂರಲ್ಲಿ ಮುಡಾ ವಿಚಾರದಲ್ಲಿ ಬಿಜೆಪಿ ಕೆ.ಆರ್ ಕ್ಷೇತ್ರದ ಶಾಸಕ ದಿನ ಬೆಳಗ್ಗೆ ಎದ್ದು ಮಾತನಾಡುತ್ತಾರೆ. ಅಷ್ಟು ಸೈಟು ಇಷ್ಟು ಕೋಟಿ ಹಗರಣ ಅಂತಾರೆ. ಸ್ವಲ್ಪ ಪಟ್ಟಿ ಬಿಡುಗಡೆ...
Read moreDetails