• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರೊಂದಿಗೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಮಲೋಚನೆ, ಮದ್ದೂರಿನಲ್ಲಿ ಮತ್ತೊಂದು ರೈಲು ನಿಲ್ದಾಣ ನಿರ್ಮಾಣ; ಜಾಗ ಗುರುತಿಸಿದರೆ ತಕ್ಷಣವೇ ಸಮೀಕ್ಷೆ

ಪ್ರತಿಧ್ವನಿ by ಪ್ರತಿಧ್ವನಿ
April 9, 2026
in Top Story, ಇದೀಗ, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿಡಿಯೋ, ವಿಶೇಷ
0
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್
Share on WhatsAppShare on FacebookShare on Telegram

ಮಾರ್ಗದ ಉದ್ದಕ್ಕೂ ಜನರೊಂದಿಗೆ ಬೆರೆತ ಸಚಿವದ್ವಯರು; ಲೆವೆಲ್ ಕ್ರಾಸಿಂಗ್, ಅಂಡರ್ ಪಾಸ್, ಮೇಲು ಸೇತುವೆ ಬಗ್ಗೆ ಬೇಡಿಕೆಗಳ ಸುರಿಮಳೆ. ಇನ್ನಷ್ಟು ಡೆಮೋ ರೈಲು ಸಂಚಾರ ಮತ್ತು ಪ್ರಮುಖ ರೈಲುಗಳ ನಿಲುಗಡೆಗೆ ಶೀಘ್ರ ಅನುಮೋದನೆ. ಸೋಮಣ್ಣ ಅವರೊಂದಿಗೆ ರೈಲು ಪ್ರಯಾಣ ನಡೆಸಿದ್ದು ಸಂತೋಷ ತಂದಿದೆ ಎಂದ ಹೆಚ್ಡಿಕೆ.

ADVERTISEMENT

ಬೆಂಗಳೂರು 9 ಏಪ್ರಿಲ್ 2026: ಐದು ಗಂಟೆಗಳ ಕಾಲ ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ರೈಲಿನಲ್ಲಿ ಪ್ರಯಾಣ ಮಾಡಿ ಆ ಮಾರ್ಗದಲ್ಲಿ ನಡೆಯುತ್ತಿರುವ ರೈಲ್ವೆ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಪರಿವೀಕ್ಷಣೆ ನಡೆಸಿದ್ದು ನನಗೆ ವಿಶೇಷ ಅನುಭವವಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ರೈಲು ರೈಲು ಪ್ರಯಾಣದ ನಡುವೆ ತಮ್ಮನ್ನು ಭೇಟಿಯಾದ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರೊಂದಿಗೆ ಇಂದು ಬೆಳಗ್ಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಹೊರಟು ಅಪರಾನ್ಹ 3 ಗಂಟೆಗೆ ಮೈಸೂರು ತಲುಪಿದ್ದೇವೆ. ವಿಂಡೋ ಟ್ರೈಲಿಂಗ್ ಮೂಲಕ ಪರಿವೀಕ್ಷಣೆ ನಡೆಸಲಾಯಿತು ಎಂದರು.


ನಾನು ಮೊದಲು ಹೆಚ್ಚಾಗಿ ರೈಲಿನಲ್ಲಿಯೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆ. ಕೆಲ ವರ್ಷಗಳಿಂದ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿರಲಿಲ್ಲ. ಈಗ ಮತ್ತೊಮ್ಮೆ ರೈಲಿನಲ್ಲಿ ಪ್ರಯಾಣಿಸಿ ಜನರ ಸಮಸ್ಯೆ ಆಲಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ಕೇಂದ್ರ ಸಚಿವನಾಗಿ ರೈಲಿನಲ್ಲಿ ಸಂಚರಿಸಿದ್ದು, ಆ ಸಂದರ್ಭದಲ್ಲಿ ಜನತೆಯನ್ನು ಮಾರ್ಗದ ಉದ್ದಕ್ಕೂ ಭೇಟಿಯಾಗಿದ್ದು ರೋಮಾಂಚನ ಉಂಟುಮಾಡಿದೆ ಎಂದು ಹೇಳಿದರು.

ಸಾಮೂಹಿಕ ಸಾರಿಗೆ ವ್ಯವಸ್ಥೆಗಳಲ್ಲಿ ರೈಲು ಸಾರಿಗೆಗೆ ಅತ್ಯಂತ ಮಹತ್ವವಿದೆ. ಪ್ರಯಾಣಿಕರ ಸಂಚಾರ ಮಾತ್ರವಲ್ಲದೆ ವಾಣಿಜ್ಯ ದೃಷ್ಟಿಯಿಂದಲೂ ರೈಲು ವ್ಯವಸ್ಥೆ ದೇಶದ ಬೆನ್ನೆಲುಬಾಗಿದೆ. ಮುಖ್ಯವಾಗಿ ಬೆಂಗಳೂರು ಮತ್ತು ಮೈಸೂರು ನಗರಗಳ ನಡುವೆ ರೈಲು ಸಂಚಾರ ಈಗಾಗಲೇ ಉತ್ತಮವಾಗಿದ್ದು ಅದನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ನಾನು ಮತ್ತು ಸೋಮಣ್ಣನವರು ಚರ್ಚೆ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ಮತ್ತಷ್ಟು ಪರಿವರ್ತನಾತ್ಮಕ ಬೆಳವಣಿಗೆಯನ್ನು ಕಾಣುವ ದಿನಗಳು ದೂರವಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಪ್ರಮುಖವಾಗಿ ನಾನು ರಾಮನಗರ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಾದುಹೋಗುವ ರೈಲು ಮಾರ್ಗದ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳ ಅಭಿವೃದ್ಧಿ, ಹೆಚ್ಚುವರಿ ರೈಲುಗಳ ಸಂಚಾರ, ಪ್ರಮುಖ ರೈಲುಗಳ ನಿಲುಗಡೆ, ವಾಣಿಜ್ಯ ಚಟುವಟಿಕೆಗಳ ವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಸಚಿವ ಸೋಮಣ್ಣ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದ್ದೇನೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಮುಖ್ಯವಾಗಿ ಎಲ್ಲಾ ಲೆವೆಲ್ ಕ್ರಾಸಿಂಗ್ ಗಳನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ಅಂಡರ್ ಪಾಸ್ ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸಚಿವ ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಲಾಯಿತು. ಜತೆಗೆ, ಈ ಮಾರ್ಗದ ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ ಸೇರಿದಂತೆ ಹಲವಾರು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ರೈಲ್ವೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಯಿತು ಎಂದು ಬೃಹತ್ ಕೈಗಾರಿಕಾ ಸಚಿವರು ಹೇಳಿದರು.


ಒಡೆಯರ್ ಎಕ್ಸ್ಪ್ರೆಸ್ ನಿಲುಗಡೆಗೆ ಒಪ್ಪಿಗೆ:
ಮೊದಲಿಗೆ ರಾಮನಗರದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ರೇಲ್ವೆ ಮಂಡಳಿಯಿಂದ ಅನುಮತಿ ಸಿಕ್ಕಿದೆ. ಅದಷ್ಟು ಬೇಗ ಸದರಿ ರೈಲಿನ ನಿಲುಗಡೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಸೋಮಣ್ಣ ಅವರು ಭರವಸೆ ನೀಡಿದ್ದಾರೆಂದು ಕುಮಾರಸ್ವಾಮಿಯವರು ತಿಳಿಸಿದರು.

ಈ ಈ ರೈಲಿನ ನಿಲುಗಡೆಯ ಬಗ್ಗೆ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವರಾದ ಸೋಮಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದ ಕುಮಾರಸ್ವಾಮಿ ಅವರು, ಈ ರೈಲಿನ ನಿಲುಗಡೆಯಿಂದ ರಾಮನಗರದ ಜನರಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ಎಂದರು.

ಮದ್ದೂರಿನಲ್ಲಿ ಮತ್ತೊಂದು ರೈಲು ನಿಲ್ದಾಣ:
ಪಟ್ಟಣದಲ್ಲಿ ಹಾಲಿ ಇರುವ ರೈಲು ನಿಲ್ದಾಣ ಪಟ್ಟಣದ ಜನರಿಗೆ ದೂರದಲ್ಲಿದ್ದು, ಅದು ಸುಮಾರು ನೂರು ವರ್ಷಗಳಷ್ಟು ಹಳೆಯದು. ಹೀಗಾಗಿ ಪಟ್ಟಣದಲ್ಲಿ ಮತ್ತೊಂದು ಸುಸಜ್ಜಿತ ರೈಲು ನಿಲ್ದಾಣ ಅಗತ್ಯವಿದೆ ಎಂದು ಸಚಿವ ಸೋಮಣ್ಣ ಅವರಿಗೆ ಕುಮಾರಸ್ವಾಮಿ ಅವರು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸ್ಪಂದಿಸಿದ ಸಚಿವ ಸೋಮಣ್ಣ ಅವರು ತಕ್ಷಣವೇ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.


ಜಾಗವನ್ನು ಗುರುತಿಸಿದರೆ ತಕ್ಷಣವೇ ಆ ಜಾಗದ ಸಮೀಕ್ಷೆಗೆ ಅಧಿಕಾರಿಗಳನ್ನು ಕಳಿಸಲಾಗುವುದು. ಪಟ್ಟಣದಲ್ಲಿ ಈಗಿರುವ ರೈಲು ನಿಲ್ದಾಣ ಸಾಕಾಗುತ್ತಿಲ್ಲ, ಪ್ರಯಾಣಿಕರ ದಟ್ಟಣೆ ಜಾಸ್ತಿ ಇದೆ. ಹೀಗಾಗಿ ಎರಡನೇ ನಿಲ್ದಾಣ ಬೇಕೆಂದು ಕುಮಾರಸ್ವಾಮಿ ಅವರು ಮತ್ತು ಡಿ.ಸಿ. ತಮ್ಮಣ್ಣ ಅವರು ಮನವಿ ಮಾಡಿದ್ದಾರೆ. ಮದ್ದೂರು ನಿಲ್ದಾಣ ಬಹಳ ಹಳೆಯ ನಿಲ್ದಾಣ. ಈ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ ಆಧುನಿಕರಣ ಮಾಡಲಾಗುವುದು. ಇನ್ನು ಆರು ತಿಂಗಳಲ್ಲಿ ಅಳಿಯ ನಿಲ್ದಾಣದ ಆಧುನಿಕರಣ ಕಾಮಗಾರಿ ಮುಗಿಸಲಾಗುವುದು. ನಾನು ಮತ್ತು ಕುಮಾರಸ್ವಾಮಿ ಸೇರಿ ಉದ್ಘಾಟನೆ ಮಾಡುತ್ತೇವೆ ಎಂದು ಮದ್ದೂರು ಜನರಿಗೆ ಭರವಸೆ ನೀಡಿದರು.

ಇನ್ನು ನಾಲ್ಕೈದು ದಿನಗಳಲ್ಲಿ ಹಿರಿಯ ಅಧಿಕಾರಿಗಳು ಮದ್ದೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಹಾಗೆಯೇ, ಇಲ್ಲಿ ಕೆಲ ರೈಲುಗಳನ್ನು ನಿಲಗಡಗೆ ಬೇಡಿಕೆ ಇದೆ ಅದನ್ನು ಪರಿಶೀಲನೆ ಮಾಡುತ್ತೇವೆ. ಈ ಬಗ್ಗೆ ರೈಲ್ವೆ ಸಚಿವರು ಆಶ್ವಾಸನೆ ನೀಡಿದ್ದಾರೆ ಎಂದು ಬೃಹತ್ ಕೈಗಾರಿಕೆ ಸಚಿವರು ಹೇಳಿದರು.

ಮದ್ದೂರು ತಾಲೂಕಿನ ನಿಡಘಟ್ಟ ಬಳಿ ವಿಶೇಷ ರೈಲನ್ನು ನಿಲ್ಲಿಸಿ ಗ್ರಾಮಸ್ಥರನ್ನು ಭೇಟಿಯಾದ ಸಚಿವರುಗಳು, ಅಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣದ ತುರ್ತು ಅಗತ್ಯವಿದೆ ಎಂಬುದನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಚಿವರಿಗೆ ಅಹವಾಲು ಸಲ್ಲಿಸಿದ ಗ್ರಾಮಸ್ಥರು, ಕೃಷಿ ಚಟುವಟಿಕೆಗಳಿಗೆ ಹಾಗೂ ವಾಹನಗಳ ಸುಗುಮ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಅಂಡರ್ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಕೋರಿದರು. ಅದಕ್ಕೂ ಸ್ಪಂದಿಸಬೇಕು ಎಂದು ಕೇಂದ್ರ ಸಚಿವರು ರೈಲ್ವೆ ಸಚಿವರನ್ನು ಕೋರಿದರು.


ತಕ್ಷಣವೇ ಅಧಿಕಾರಿಗಳನ್ನು ಕಳಿಸಿ ಸಮೀಕ್ಷೆ ನಡೆಸಲಾಗುವುದು, ಸಮೀಕ್ಷೆ ವರದಿ ಬಂದ ನಂತರ ತಕ್ಷಣವೇ ಅಂಡರ್ ಪಾಸ್ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿಯವರು ಮತ್ತು ಸೋಮಣ್ಣ ಅವರು ಸಾರ್ವಜನಿಕರಿಗೆ ಭರವಸೆ ನೀಡಿದರು. ಹನಕೆರೆ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರ ಅಹಬಾಲು ಸ್ವೀಕರಿಸಿದ ಸಚಿವರುಗಳು, ನಿಲ್ದಾಣದ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಅಲ್ಲದೆ, ನಿಲ್ದಾಣ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಇಲ್ಲಿಯೂ ಕೆಲವೆಡೆ ರೈಲ್ವೆ ಅಂಡರ್ ಪಾಸ್ ಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ವಿನಂತಿ ಮಾಡಿದರು.

ಪದೇಪದೇ ಲೆವೆಲ್ ಕ್ರಾಸಿಂಗ್ ಗಳಲ್ಲಿ ರೈಲ್ವೆ ಗೇಟ್ ಗಳನ್ನು ಹಾಕುವುದರ ಮೂಲಕ ರೈತರಿಗೆ ಕಷ್ಟವಾಗುತ್ತಿದೆ. ಕಬ್ಬು ಸಾಗಿಸುವ ವಾಹನಗಳಿಗೆ ಅಡ್ಡಿ ಆಗುತ್ತಿದೆ. ಅಲ್ಲದೆ, ಶಾಲಾ ಮಕ್ಕಳಿಗೆ ಕೂಡ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇವರ ಬೇಡಿಕೆಗೆ ಸ್ಪಂದಿಸಿದ ಕುಮಾರಸ್ವಾಮಿ ಅವರು ಗ್ರಾಮಸ್ಥರ ಪರವಾಗಿ ರೈಲ್ವೆ ಸಚಿವರಿಗೆ ಬೇಡಿಕೆ ಇಟ್ಟು, ಅದಷ್ಟು ಬೇಗ ಲೆವೆಲ್ ಕ್ರಾಸಿಂಗ್ ಗಳಲ್ಲಿ ಮೇಲು ಸೇತುವೆ ಅಥವಾ ನಿರ್ಮಾಣ ಮಾಡಲು ಕೋರಿದರು. ನಂತರ ಯಲಿಯೂರು, ಪಾಂಡವಪುರ, ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿದ ಸಚಿವರು ಸಾರ್ವಜನಿಕರ ಹವಾಲು ಸ್ವೀಕರಿಸಿದರು.


15 ದಿನಗಳಲ್ಲಿ ಎಲ್ಲಾ ಅರ್ಜಿಗಳ ಬಗ್ಗೆ ಕ್ರಮ:
ಎಲ್ಲಾ ನಿರ್ಧಾರಗಳಲ್ಲಿ ಸಾರ್ವಜನಿಕರು ಸಲ್ಲಿಸಿರುವ ಮನವಿಗಳ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ರೈಲ್ವೆ ಸಚಿವರಾದ ಸೋಮಣ್ಣ ಅವರು ಮತ್ತು ಉನ್ನತ ರೈಲ್ವೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಜನತೆಯ ಬೇಡಿಕೆಗಳು ತುರ್ತು ರೀತಿಯಲ್ಲಿದ್ದು ಅವುಗಳನ್ನು ಆದಷ್ಟು ಬೇಗ ಪರಿಹಾರ ಮಾಡಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವ ಸೋಮಣ್ಣ ಅವರು, ಒಂದು ವಾರ ಅಥವಾ 15 ದಿನಗಳಲ್ಲಿ ಜನತೆ ನೀಡಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ವಹಿಸುತ್ತೇವೆ. ತಮ್ಮೊಂದಿಗೆ ತಮ್ಮೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಅಧಿಕಾರಿಗಳ ಜೊತೆಯು ನಾನು ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಕೆಲವು ಹೊಸ ರೈಲುಗಳ ನಿಲುಗಡೆ ಮಾಡಬೇಕೆಂದು ರೈಲ್ವೆ ಸಚಿವರನ್ನು ಕೋರಿದ್ದೇನೆ. ಅದೇ ರೀತಿ ಕೆಲ ಡೆಮೋ ರೈಲುಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೇಳಿದ್ದೇನೆ. ಅಲ್ಲದೆ, ಕೆಲವು ಪ್ರಮುಖ ರೈಲುಗಳ ನಿಲುಗಡೆ ಕೋರಿ ಕೋರಿಕೆ ಸಲ್ಲಿಸಿದ್ದೇನೆ ಎಂದು ಸಚಿವರು ತಿಳಿಸಿದರು

ಮುಖ್ಯವಾಗಿ ಬೆಂಗಳೂರು ಮೈಸೂರು ನಡುವಿನ ಪ್ರಮುಖ ನಗರವಾದ ಮಂಡ್ಯ ಕೃಷಿ ಮತ್ತು ವಾಣಿಜ್ಯ ಶೆಟುವಟಿಕೆಗಳಲ್ಲಿ ಮುಂಚೂಣಿ ನಗರವಾಗಿದೆ. ಅಲ್ಲದೆ ಪ್ರವಾಸೋದ್ಯಮ ವಲಯದಲ್ಲೂ ಪ್ರಮುಖವಾಗಿದೆ. ಹೀಗಾಗಿ ಮಂಡ್ಯದ ರೈಲ್ವೆ ನಿಲ್ದಾಣವನ್ನು ಅತ್ಯಧುನಿಕ ಮತ್ತು ಸ್ವಸಜಿತ ನಿಲ್ದಾಣವನ್ನಾಗಿ ಪರಿವರ್ತಿಸಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದರು. ಹೆಚ್ಚು ಫ್ಲಾಟ್ ಫಾರ್ಮ್ ಗಳನ್ನು ಮಾಡುವುದು ಹಾಗೂ ಹಾಲಿ ಇರುವ ಪ್ಲಾಟ್ ಫಾರ್ಮ್ ಗಳನ್ನು ಅಭಿವೃದ್ಧಿಪಡಿಸಿ ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡುವ ನಿಟ್ಟಿನಲ್ಲಿ ನಿರ್ಧಾರವನ್ನು ಅಭಿವೃದ್ಧಿಪಡಿಸಬೇಕು ಎಂದು ಸಾರ್ವಜನಿಕರು ಸಚಿವರು ಇಬ್ಬರನ್ನು ಕೋರಿದರು.

ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿಯವರು, ಈಗಾಗಲೇ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ನಮ್ಮ ರಾಜ್ಯದವರಾದ ವಿ ಸೋಮಣ್ಣ ಅವರ ಸಹಕಾರದಿಂದ ಮಂಡ್ಯ ನಿಲ್ದಾಣವು ಆಧುನಿಕ ನಿರ್ಧಾರವಾಗಿ ರೂಪಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಹೀಗಾಗಿ ಮಂಡ್ಯ ರೈಲು ನಿಲ್ದಾಣವನ್ನು ಕಂಡು ಕೇಳರಿಯದ ರೀತಿಯಲ್ಲಿ ಆಧುನಿಕವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಿದ್ದೇವೆ ಎಂದು ಸಚಿವ ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಸಚಿವರ ಜತೆ ನೈರುತ್ಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ (ಬೆಂಗಳೂರು) ಸೇರಿ ಹಿರಿಯ ರೈಲ್ವೆ ಅಧಿಕಾರಿಗಳು, ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಚಾಮರಾಜ ಕೃಷ್ಣರಾಜ ಒಡೆಯರ್ ಅವರು ಇದ್ದರು.

ಕೇಂದ್ರದ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರು, ನನ್ನ ಆತ್ಮೀಯರು ಆಗಿರುವ ಸೋಮಣ್ಣ ಅವರೊಂದಿಗೆ ಬೆಂಗಳೂರು ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮೈಸೂರು ರೈಲು ನಿಲ್ದಾಣದವರೆಗೆ ವಿಂಡೋ ಟ್ರೈಲಿಂಗ್ ಪರಿವೀಕ್ಷಣೆ ನಡೆಸಲಾಯಿತು. ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದ ರೈಲ್ವೆ ವಲಯದಲ್ಲಿ ಪರಿವರ್ತನಾತ್ಮಕ ಬೆಳವಣಿಗೆ ಆಗುತ್ತಿದ್ದು, ಕರ್ನಾಟಕಕ್ಕೆ ಅತಿಹೆಚ್ಚು ಒತ್ತು ನೀಡುತ್ತಿರುವ ಅವರ ಕಾಳಜಿಯನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಇದೇ ಸಂದರ್ಭದಲ್ಲಿ ನಮ್ಮ ರಾಜ್ಯದ ಬೇಡಿಕೆಗಳಿಗೆ ಸದಾ ಸಕಾರಾತ್ಮಕವಾಗಿ ಸ್ಪಂದಿಸುವ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.

-ಹೆಚ್.ಡಿ. ಕುಮಾರಸ್ವಾಮಿ
ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು, ಭಾರತ ಸರ್ಕಾರ

Previous Post

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

Next Post

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

Related Posts

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?
Top Story

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

by ಪ್ರತಿಧ್ವನಿ
April 19, 2026
0

ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕಿಸ್ತಾನ, ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್...

Read moreDetails
​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

April 18, 2026
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
Next Post
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada