ಹಿಂದೆಲ್ಲಾ ಪ್ರತಿಯೊಂದು ಮನೆಯಲ್ಲೂ ಕೂಡ ಮಣ್ಣಿನ ಪಾತ್ರಗಳಲ್ಲಿ ಅಡುಗೆನ ಮಾಡ್ತಾ ಇದ್ರು. ಮಾತ್ರವಲ್ಲದೆ ಕುಡಿಯುವ ನೀರನ್ನು ಕೂಡ ಮಣ್ಣಿನ ಪಾತ್ರೆಯಲ್ಲಿ ಅಥವಾ ಮಡಿಕೆಯಲ್ಲಿ ಸ್ಟೋರ್ ಮಾಡ್ತಾ ಇದ್ರು. ನಂತರ ಸ್ಟೀಲ್ ಪಾತ್ರೆಗಳು ಸಿಲ್ವರ್ ಪಾತ್ರೆಗಳು ಹಾಗೂ ಬಾಟಲ್ ಗಳು ಕೂಡ ಬಂದ್ವು.. ಟ್ರೆಂಡಲ್ಲಿ ಯಾವುದಿರುತ್ತದೋ ಜನರು ಅದಕ್ಕೆ ಒಗ್ಗಿಕೊಳ್ಳುವುದು ಸಹಜ . ಇದೀಗ ಮತ್ತೆ ಓಲ್ಡ್ ಇಸ್ ಗೋಲ್ಡ್ ಅನ್ನುವ ಹಾಗೆ ಮಂಜುಲ್ಲಾ ಬಳಸುತ್ತಿದ್ದ ಮಣ್ಣಿನ ಪಾತ್ರೆಗಳನ್ನ ಮುಖ್ಯವಾಗಿ ಮಣ್ಣಿನಿಂದ ತಯಾರಿಸಿದ ಬಾಟಲ್ ಗಳಲ್ಲಿ ನೀರನ್ನ ಸ್ಟೋರ್ ಮಾಡಿಟ್ಟುಕೊಂಡು ಕುಡಿಯುತ್ತಾರೆ.

ಮಣ್ಣಿನ ಪಾತ್ರೆಯಲ್ಲಿ ಮಾಡಿದಂತಹ ಅಡುಗೆಯನ್ನು ಅಥವಾ ಸ್ಟೋರ್ ಮಾಡಿಟ್ಟು ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ
ನ್ಯಾಚುರಲ್ ಕೂಲಿಂಗ್
ಹೌದು ಮಣ್ಣಿನ ಮಡಕೆಗಳು ನೈಸರ್ಗಿಕ ತಂಪಾಗಿಸುವ ಗುಣಗಳನ್ನು ಹೊಂದಿದ್ದು, ಬಿಸಿಯಾದ ತಾಪಮಾನದಲ್ಲಿ ನೀರನ್ನು ಮಣ್ಣಿನ ಮಡಕೆ ಅಥವಾ ಮಣ್ಣಿನ ಬಾಟಲ್ ನಲ್ಲಿ ಇಡುವುದರಿಂದ ನ್ಯಾಚುರಲ್ ತಂಪಾಗಿ ಇಡುತ್ತವೆ.ಇದ್ದನ್ನು ನ್ಯಾಚುರಲ್ ಫ್ರಿಡ್ಜ್ ಅಂತನೂ ಕರಿಯುತ್ತಾರೆ..
pH ಲೆವೆಲ್
ಮಡಕೆಗೆ ಬಳಸುವ ಮಣ್ಣಿನಿಂದ ನೀರಿನ ನೈಸರ್ಗಿಕ pH ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.ಇದು ಆರೋಗ್ಯಕ್ಕೂ ಕೂಡ ತುಂಬಾನೆ ಒಳ್ಳೆಯದು.

ಕಲ್ಮಶಗಳನ್ನು ತೆಗೆದುಹಾಕುತ್ತದೆ
ನೀರಿನಲ್ಲಿರುವ ಕಲ್ಮಶವನ್ನು ತೆಗೆದು ಹಾಕಲು ಫಿಲ್ಟರ್ ಅಥವಾ ವಾಟರ್ ಪ್ಯೂರಿಫೈಯರ್ ಅನ್ನು ದುಬಾರಿ ಹಣ ಕೊಟ್ಟು ತರುತ್ತಾರೆ..ಆದ್ರೆ ಜೇಡಿಮಣ್ಣಿನ ರಂಧ್ರಯುಕ್ತ ಸ್ವಭಾವವು ನೀರಿನಿಂದ ಕಲ್ಮಶಗಳು ಮತ್ತು ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ.
ಖನಿಜಗಳನ್ನು ಸೇರಿಸುತ್ತದೆ
ಜೇಡಿಮಣ್ಣಿನ ಮಡಿಕೆ ನೀರಿಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳನ್ನು ಸೇರಿಸಬಹುದು, ಈ ನೀರನ್ನು ಕುಡಿಯುವುದರಿಂದ ಆರೋಗ್ಯಕರವಾಗಿಸುತ್ತದೆ.