• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾಲಿಗೆ ಹರಿಬಿಟ್ಟರೆ ಹುಷಾರ್‌!: ಕಂಗನಾಗೆ BJP ಚಾಟಿ

ಪ್ರತಿಧ್ವನಿ by ಪ್ರತಿಧ್ವನಿ
August 29, 2024
in Top Story, ಕರ್ನಾಟಕ, ರಾಜಕೀಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
ನಾಲಿಗೆ ಹರಿಬಿಟ್ಟರೆ ಹುಷಾರ್‌!: ಕಂಗನಾಗೆ BJP ಚಾಟಿ
Share on WhatsAppShare on FacebookShare on Telegram

ನವದೆಹಲಿ: “ನೀವು ನಾಲಿಗೆ ಹರಿಬಿಟ್ಟು ಪಕ್ಷಕ್ಕೆ ಮುಜುಗರ ತರುತ್ತಿದ್ದೀರಿ ಇದು ಸರಿ ಅಲ್ಲ. ಪಕ್ಷದ ಹಿತಾಸಕ್ತಿಗೆ ಧಕ್ಕೆಯಾಗುವಂಥ ಬೇಕಾಬಿಟ್ಟಿ ಹೇಳಿಕೆ ನೀಡ ಕೂಡದು” ಹೀಗೆಂದು ಬಾಲಿವುಡ್‌ Actress, ಸಂಸದೆ ಕಂಗನಾ ರಣೌತ್‌ಗೆ BJP ಹೈ ಕಮಾಂಡ್‌ ತರಾಟೆ ತೆಗದುಕೊಂಡಿದೆ.  

ADVERTISEMENT

ಹೌದು, ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕಂಗನಾ, ಇತ್ತೀಚೆಗಷ್ಟೇ ರೈತಪ್ರತಿಭಟನೆ (Formers protest ) ವಿಚಾರದಲ್ಲೂ ನಾಲಿಗೆ ಹರಿಬಿಟ್ಟಿದ್ದರು. ಈ ಬಗ್ಗೆ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಕೂಡ ಈ ಬಗ್ಗೆ ಕಿಡಿ ಕಾರಿದ್ದರು.

ನಟಿಯಾಗಿದ್ದಾಗಲೂ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿದ್ದ ಈಕೆ ಸಂಸದೆಯಾದ ಬಳಿಕವೂ ಬೇಕಾಬಿಟ್ಟಿ ಹೇಳಿಕೆ ನೀಡುತ್ತಾರೆ. ಇದರಿಂದ BJP ಘನತೆಗೆ ಧಕ್ಕೆಯಾಗುತ್ತಿದೆ ಎಂಬ ಮಾತೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಂಗನಾ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ BJP  ಹೈ ಕಮಾಂಡ್‌ನಿಂದ ಆಕೆಗೆ ಸಮನ್ಸ್‌ ಜಾರಿಗೊಳಿಸಿತ್ತು.

ಅದರಂತೆ  BJP ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ದಿಲ್ಲಿಯ ಅವರ ನಿವಾಸದಲ್ಲಿ ಗುರುವಾರ ಕಂಗನಾ ಭೇಟಿಯಾಗಿದ್ದಾರೆ. ಬರೋಬ್ಬರಿ ಅರ್ಧ ಗಂಟೆಗಳ ಕಾಲ ಕಂಗನಾಗೆ ನಡ್ಡಾ ತರಾಟೆ ತೆಗೆದುಕೊಂಡಿದ್ದು, ವಿಧಾನಸಭೆ ಚುನಾವಣೆಗಳು ಹೊಸ್ತಿಲಿನಲ್ಲಿರುವಾಗ ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟು ನೀವು ಪಕ್ಷಕ್ಕೆ ಮುಜುಗರ ತರುತ್ತಿದ್ದೀರಿ, ಪಕ್ಷದ ಹಿತಾಸಕ್ತಿಗಳಿಗೆ ನಿಮ್ಮಿಂದ ಧಕ್ಕೆಯಾಗುತ್ತಿದೆ. ನಾಲಿಗೆಯನ್ನು ಹಿಡಿದಿಟ್ಟುಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.

ಕಂಗನಾ ವಿವಾದ ಪ್ರಧಾನಿ ಮೋದಿ ಅವರ ಗಮನಕ್ಕೂ ಬಂದ ಹಿನ್ನೆಲೆಯಲ್ಲಿ ಅವರ ಆದೇಶದ ಮೇರೆಗೆ ವರಷ್ಠರು ಕಂಗನಾರನ್ನು ತರಾಟೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾನು ಬುದ್ದಿಗೇಡಿ ಅಲ್ಲ, ತಪ್ಪಿನ ಅರಿವಾಗಿದೆ: ನಡ್ಡಾರನ್ನು ಭೇಟಿಯಾದ ಬಳಿಕ Media (ಮಾಧ್ಯಮಗಳ) ಎದುರು ಹೈ ಕಮಾಂಡ್‌ ತನಗೆ ಛೀಮಾರಿ ಹಾಕಿದ ವಿಚಾರವನ್ನುಕಂಗನಾ ಹೇಳಿಕೊಂಡಿದ್ದಾರೆ. ರೈತ ಪ್ರತಿಭಟನೆ ವಿಚಾರವಾಗಿ ಪಕ್ಷದ ವರಿಷ್ಠರು ನನ್ನನ್ನು ಕರೆದು ಛೀಮಾರಿ ಹಾಕಿದ್ದಾರೆ. ನನ್ನ ತಪ್ಪಿನಿಂದ ಇದಾಗಿದೆ. ನಾನೆಂದೂ ಪಕ್ಷದಲ್ಲಿ ನಾನು ಹೇಳಿದ್ದೇ ಅಂತಿಮ ಎನ್ನುವಂತೆ ಅಂದುಕೊಂಡಿಲ್ಲ, ಹಾಗೆ ಅಂದಕೊಳ್ಳುವಷ್ಟು ದಡ್ಡಿಯೂ ನಾನಲ್ಲ.ನನ್ನ ಹೇಳಿಕೆಗಳಿಂದ ಪಕ್ಷದ ನೀತಿ ಮತ್ತು ಘನತೆಗೆ ಧಕ್ಕೆಯಾಗಿದ್ದರೆ ನನ್ನಷ್ಟು ದುಃಖ ಪಡುವವರೂ ಯಾರಿಲ್ಲ. ಇನ್ನು ಮುಂದೆ ನನ್ನ ಹೇಳಿಕೆಗಳ ಬಗ್ಗೆ ಜಾಗ್ರತೆ ವಹಿಸುತ್ತೇನೆ ಎಂದಿದ್ದಾರೆ.

—

 ಕಂಗನಾ ಹೇಳಿದ್ದೇನು ? : ರೈತ ಪ್ರತಿಭಟನೆ ವೇಳೆ ಶವಗಳು ನೇತಾಡುತ್ತಿದ್ದವು, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳೂ ನಡೆಯುತ್ತಿದ್ದವು. ಕೇಂದ್ರ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳದೇ ಇದ್ದಿದ್ದರೆ ಬಾಂಗ್ಲಾದೇಶದ ಪರಿಸ್ಥಿತಿಯೇ ಭಾರತಕ್ಕೂ ಬಂದಿರುತ್ತಿತ್ತು ಎಂದು ಕಂಗನಾ ಹೇಳಿದ್ದರು. ರೈತ ಪ್ರತಿಭಟನೆ ಕುರಿತು ಅವರು ನೀಡಿದ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

———

ಕಂಗನಾಗೆ EMERGENCY ಸಂಕಷ್ಟ

ಹೈ ಕಮಾಂಡ್‌ ತರಾಟೆ ಒಂದೆಡೆಯಾದರೆ ಮತ್ತೊಂದೆಡೆ ಕಂಗನಾ ನಟಿಸಿ, Action – cut ಹೇಳಿರುವ ಎಮರ್ಜೆನ್ಸಿ ಸಿನಿಮಾದ ರಿಲೀಸ್‌ಗೂ ಸಂಕಷ್ಟ ಎದುರಾಗಿದೆ. ಈ ಸಿನಿಮಾ ರಿಲೀಸ್‌ ಆಗಬಾರದು ಎಂದು ದಿಲ್ಲಿ ಶಿರೋಮಣಿ ಅಕಾಲಿ ದಳವು (SAD) ಕೇಂದ್ರೀಯ ಚಲನಚಿತ್ರ ಪ್ರಮಾಣೀಕರ ಮಂಡಳಿಯನ್ನು (CBFC) ಒತ್ತಾಯಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲ ಕಂಗನಾ ನಟಿಸಿರುವ ಈ ಸಿನಿಮಾ ಕೋಮುದ್ವೇಷವನ್ನು ಹೆಚ್ಚಿಸುವುದರ ಜತೆಗೆ ತಪ್ಪು ತಿಳುವಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಿದೆ ಎಂದು SAD ಆರೋಪಿಸಿದೆ. September 6 ರಂದು EMERGENCY ತೆರೆ ಕಾರಣಲು ಸಿದ್ಧತೆಗಳು ನಡೆದಿವೆ.

Tags: BJPCongress Partyemergency kangana ranautkangana ranautkangana ranaut bjpkangana ranaut controversykangana ranaut interviewkangana ranaut latest newskangana ranaut mandikangana ranaut movieskangana ranaut new moviekangana ranaut newskangana ranaut on farmerskangana ranaut on farmers protestkangana ranaut on rahul gandhikangana ranaut podcastkangana ranaut slappedkangana ranaut speechkangana ranaut tweet on farmersmp kangana ranautಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸಿಎಂ ಸಿದ್ದರಾಮಯ್ಯ ಪತ್ನಿಗೆ 15 ಸೈಟ್ ಅಚ್ಚರಿ ಮಾಹಿತಿ ಬಹಿರಂಗ ಪಡಿಸಿದ ವಿಜಯೇಂದ್ರ

Next Post

ಸಿದ್ದರಾಮಯ್ಯ ಅನ್ನ ಭಾಗ್ಯ ಕ್ಕು ಅನ್ನ ಸಿನಿಮಾಗು ಏನ್ ಸಂಬಂಧ…?

Related Posts

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ
Top Story

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

by ಪ್ರತಿಧ್ವನಿ
April 29, 2026
0

ಕೊಲ್ಕತ್ತಾ ಸೇರಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ನಡೆದ ಮತದಾನದಲ್ಲಿ ಭರ್ಜರಿ ಸ್ಪಂದನೆ ಕಂಡುಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಅರ್ಗವಾಲ್ ಮಾಹಿತಿ ನೀಡಿದಂತೆ, ಒಟ್ಟು ಮತದಾನದ...

Read moreDetails
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
Next Post

ಸಿದ್ದರಾಮಯ್ಯ ಅನ್ನ ಭಾಗ್ಯ ಕ್ಕು ಅನ್ನ ಸಿನಿಮಾಗು ಏನ್ ಸಂಬಂಧ…?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada