ಭಾರತ-ಬಾಂಗ್ಲಾದೇಶ ವಿರುದ್ದ ನಡೆಯುತ್ತಿರುವ ಪಂದ್ಯಗಳ ಟೆಸ್ಟ್ ರಣಿಯಲ್ಲಿ ಅತಿಥೇಯರನ್ನು 150 ರನ್ಗಳಿಗೆ ಆಲೌಟ್ ಮಾಡುವಲ್ಲಿ ಭಾರತದ ಬೌಲರ್ಗಳು ಯಶಸ್ವಿಯಾಗಿದ್ದಾರೆ.
ಚಟ್ಟೋಗ್ರಾಮ್ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ 3ನೇ ದಿನದಾಟದ ಪ್ರಾರಂಭದಲ್ಲಿ 17 ರನ್ ಗಳಿಸಿ ಸರ್ವಪತವನವಾಯಿತ್ತು.
ಭಾರತದ ಪರ ಮೊಹಮ್ಮದ್ ಸಿರಾಜ್ (13-2-20-3), ಉಮೇಶ್ ಯಾದವ್ (8-1-33-1), ಕುಲದೀಪ್ ಯಾದವ್ (16-6-40-5), ಅಕ್ಷರ್ ಪಟೇಲ್ (8.5-4-10-1) ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ 254 ರನ್ಗಳ ಮುನ್ನಡೆಯನ್ನು ತಂದುಕೊಟ್ಟಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 15 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ.