ದೇಶದಲ್ಲಿ ಕೃಷಿಕಾಯ್ದಗಳನ್ನು ವಿರೋಧಿಸಿ ರೈತರು ಆಧುನಿಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಧೀರ್ಘಕಾಲದವರೆಗೆ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಜನವರಿ26 ಗಣರಾಜೋತ್ಸವ ದಿನದಂದು ಬೃಹತ್ ಮಟ್ಟದ ಟ್ರ್ಟಾಕ್ಟರ್ ಪೆರೆಡ್ ನಡೆಸಲು ತೀರ್ಮಾನಿಸಲು ನಿರ್ಧರಿಸಿದ್ದಾರೆ. ಈ ಪೆರಡ್ಗೆ ದೇಶದಾದ್ಯಂತ ರೈತರು ಒಕ್ಕೊರಳಿನಿಂದ ಬೆಂಬಲ ನೀಡಿದ್ದಾರೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ರೈತರು ದೆಹಲಿಯ ರೈತ ಪರೇಡ್ಗೆ ಬೆಂಬಲ ನೀಡಿ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೂ ರೈತ ಸಂಘಗಳು ಟ್ಯಾಕ್ಟರ್ ಮೆರವಣಿಗೆಯನ್ನು ನಡೆಸಲು ತೀರ್ಮಾನಿಸಿವೆ.
ಬೆಂಗಳೂರಿನಲ್ಲಿ ನಡೆಯುವ ಟ್ರ್ಟಾಕ್ಟರ್ ಪರೇಡ್ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಟ್ರ್ಟಾಕ್ಟರ್, ಟ್ರಕ್, ಬೈಕ್ಗಳಲ್ಲಿ ಬರುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಮೆರವಣಿಗೆಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ ಎಂಬ ನಂಬಿಕೆ ನಮಗೆ ಇದೆ. ಒಂದು ವೇಳೆ ಅಡ್ಡಿಪಡಿಸಿದರೆ ಹೆದ್ದಾರಿ ಬಂದ್ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಟ್ರ್ಟಾಕ್ಟರ್ ಮೆರವಣಿಗೆಗೆ ಸಂಬಂಧಿಸಿದಂತೆ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ರವರು ಜನವರಿ24 ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ದೆಹಲಿ ಮತ್ತು ಬೆಂಗಳೂರಿನಲ್ಲಿ ರಾಷ್ಟ್ರಧ್ವಜಾರೋಹಣ ನಡೆದ ನಂತವರೇ ನಾವು ಟ್ರ್ಯಾಕ್ಟರ್ ಪರೇಡ್ ಆರಂಭಿಸುತ್ತೇವೆ ಎಂದಿದ್ದಾರೆ.
ನೈಸ್ ರಸ್ತೆಯಿಂದ ಆರಂಭವಾಗಲಿರುವ ಪರೇಡ್ ಗೊರಗುಂಟೆಪಾಳ್ಯ ಕ್ರಾಸ್, ಯಶವಂತಪುರ, ಮಲ್ಲೇಶ್ವರಂ ಮಾರಮ್ಮ ವೃತ್ತ, ಶೇಷಾದ್ರಿ ಪುರಂ ಪೊಲೀಸ್ ಠಾಣೆ, ಆನಂದ ರಾವ್ ಸರ್ಕಲ್, ಶೇಷಾದ್ರಿ ಪುರಂ ರಸ್ತೆಯ ಮೂಲಕ ಪ್ರೀಡಂ ಪಾರ್ಕ್ ತಲುಪಲಿದ್ದೇವೆ ಎಂದಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಸಾವಿರಾರೂ ರೈತರು ಭಾಗವಹಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಲಿದ್ದಾರೆಂದು ತಿಳಿಸಿದ್ದಾರೆ.