• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಆಶ್ರಮ್ -3 ವೆಬ್ ಸೀರೀಸ್ ತಂಡದ ಮೇಲೆ ಭಜರಂಗದಳ ದಾಳಿ: ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿ.!

Any Mind by Any Mind
October 25, 2021
in ದೇಶ
0
ಆಶ್ರಮ್ -3 ವೆಬ್ ಸೀರೀಸ್ ತಂಡದ ಮೇಲೆ ಭಜರಂಗದಳ ದಾಳಿ: ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿ.!
Share on WhatsAppShare on FacebookShare on Telegram

ಹಿಂದೂ ಬಲಪಂಥೀಯ ಗುಂಪುಗಳು ಸಿನೆಮಾಗಳ ವಿರುದ್ಧ ನಡೆಸುವ ದಾಳಿ ಕಳೆದ ಕೆಲವು ವರ್ಷಗಳಿಂದ ಸರ್ವೇ ಸಾಮಾನ್ಯವೆಂಬಂತಾಗಿದೆ. ದಂಗಲ್‌, ಪಿಕೆ, ಪದ್ಮಾವತ್‌ ಮೊದಲಾದ ಸಿನೆಮಾಗಳ ವಿರುದ್ಧ ಬಲಪಂಥೀಯ ಗುಂಪುಗಳು ವಿರೋಧ ವ್ಯಕ್ತಪಡಿಸಿದ್ದವು. ಲೀಲಾ, ಪಾತಾಲ್‌ ಲೋಕ್‌ ಮೊದಲಾದ ವೆಬ್‌ ಸೀರೀಸ್‌ಗಳ ವಿರುದ್ಧವೂ ಸಂಘಟನೆಗಳು ಅಭಿಯಾನ ನಡೆಸಿದ್ದವು.

ADVERTISEMENT

ಇದೀಗ ಖ್ಯಾತ ಬಾಲಿವುಡ್​ ನಿರ್ದೇಶಕ ಪ್ರಕಾಶ್​ ಝಾ ಅವರು ನಿರ್ದೇಶಿಸುತ್ತಿರುವ ಆಶ್ರಮ್‌ 3 ವೆಬ್‌ಸೀರಿಸ್‌ ತಂಡದ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ, ಸೆಟ್‌ಗಳನ್ನು ಧ್ವಂಸ ಮಾಡಿದ್ದಾರೆ.

ಝಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆಶ್ರಮ್​ 3’ ವೆಬ್​ ಸರಣಿಯ ಶೀರ್ಷಿಕೆ ಮತ್ತು ಕಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಭಜರಂಗ ದಳದ ಕಾರ್ಯಕರ್ತರು ಶೂಟಿಂಗ್​ ಸ್ಥಳಕ್ಕೆ ನುಗ್ಗಿ ಹಲ್ಲೆ ಕೂಡ ಮಾಡಿದ್ದಾರೆ. ನಾಯಕ ಬಾಬಿ ಡಿಯೋಲ್​​ ಮೇಲೆ ಹಲ್ಲೆ ಮಾಡುವ ಉದ್ದೇಶದೊಂದಿಗೆ ಈ ದಾಳಿ ನಡೆದಿದೆ. ಆದರೆ ಬಜರಂಗದಳ ಕಾರ್ಯಕರ್ತರ ಕೈಗೆ ಬಾಬಿ ಡಿಯೋಲ್​ ಸಿಗದ ಕಾರಣ ಹಲ್ಲೆಯಿಂದ ತಪ್ಪಿಸಿಕೊಂಡಿದ್ದಾರೆ.

ಭೊಪಾಲ್​ನಲ್ಲಿ ‘ಆಶ್ರಮ್​ 3’ ಶೂಟಿಂಗ್ ನಡೆಯುತ್ತಿತ್ತು. ಹಳೇ ಜೈಲಿನಲ್ಲಿ ಕೆಲವು ಸೆಟ್​ಗಳನ್ನು ಹಾಕಲಾಗಿತ್ತು. ಚಿತ್ರೀಕರಣದ ಸ್ಥಳಕ್ಕೆ ಬಂದ ಭಜರಂಗ ದಳದ ಕಾರ್ಯಕರ್ತರು ವೆಬ್​ ಸಿರೀಸ್​ ತಂಡದ ಸಿಬ್ಬಂದಿಯನ್ನು ಮನಬಂದಂತೆ ಥಳಿಸಿದ್ದಾರೆ. ಚಿತ್ರೀಕರಣದ​ ಉಪಕರಣಗಳಿಗೆ ಹಾನಿ ಮಾಡಿದ್ದಾರೆ. ನಿರ್ದೇಶಕ ಪ್ರಕಾಶ್​ ಝಾ ಮುಖಕ್ಕೆ ಮಸಿ ಬಳಿದು ಅವಮಾನಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಬಾಬಿ ಡಿಯೋಲ್‌ ವಿರುದ್ಧವೂ ಹಲ್ಲೆಗೆ ಯೋಜನೆ ರೂಪಿಸಿಕೊಂಡಿದ್ದು, ‘ಬಾಬಿ ಡಿಯೋಲ್​ ಎಲ್ಲಿ’ ಎಂದು ಅವರೆಲ್ಲ ಕೂಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

https://twitter.com/Karth1keyan/status/1452516594337271809

‘ಈ ವೆಬ್​ ಸರಣಿಗೆ ಆಶ್ರಮ್​ ಎಂದು ಹೆಸರಿಟ್ಟು, ಆಶ್ರಮದ ಗುರುಗಳು ಮಹಿಳೆಯರನ್ನು ಶೋಷಿಸುವ ದೃಶ್ಯಗಳನ್ನು ತೋರಿಸಲಾಗಿದೆ. ಚರ್ಚ್​ ಅಥವಾ ಮದರಾಸ ಬಗ್ಗೆ ಇದೇ ರೀತಿ ತೋರಿಸುವ ಧೈರ್ಯ ಇವರಲ್ಲಿ ಇದೆಯೇ? ‘ಆಶ್ರಮ್​ 1’ ಮತ್ತು ‘ಆಶ್ರಮ್​ 2’ ಬಳಿಕ ಈಗ ‘ಆಶ್ರಮ್​ 3’ ಮಾಡುತ್ತಿದ್ದಾರೆ. ಇದನ್ನು ಚಿತ್ರೀಕರಿಸಲು ನಾವು ಬಿಡಲ್ಲ. ಸದ್ಯಕ್ಕೆ ಪ್ರಕಾಶ್​ ಝಾ ಮುಖಕ್ಕೆ ಮಸಿ ಬಳಿದಿದ್ದೇವೆ. ಬಾಬಿ ಡಿಯೋಲ್​ಗಾಗಿ ಹುಡುಕುತ್ತಿದ್ದೇವೆ. ತಮ್ಮ ಸಹೋದರ ಸನ್ನಿ ಡಿಯೋಲ್​ ಅವರನ್ನು ನೋಡಿ ಬಾಬಿ ಡಿಯೋಲ್​ ಕಲಿಯಬೇಕು. ಅವರು ಎಂಥೆಂಥ ದೇಶಭಕ್ತಿ ಸಿನಿಮಾ ಮಾಡಿದ್ದಾರೆ’ ಎಂದು ಭಜರಂಗ ದಳದ ಮುಖಂಡ ಸುಶೀಲ್​ ಹೇಳಿದ್ದಾರೆ.

ನಿರ್ದೇಶಕ ಪ್ರಕಾಶ್​ ಝಾ ಅವರು ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿಲ್ಲ. ಆದರೂ ಕೂಡ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ವೆಬ್​ ಸರಣಿ ತಂಡದವರಿಗೆ ಪೂರ್ತಿ ಭದ್ರತೆ ನೀಡಿ, ಶೂಟಿಂಗ್​ಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಭಜರಂಗ ದಳದವರು ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ಲಭ್ಯವಾಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಈ ಘಟನೆ ಬಗ್ಗೆ ಭೋಪಾಲ್ ದಕ್ಷಿಣದ ಎಸ್ ಪಿ ಸಾಯಿ ಕೃಷ್ಣ ಥೋಟ ಪ್ರತಿಕ್ರಿಯೆ ನೀಡಿದ್ದು, “ವೆಬ್ ಸೀರೀಸ್ ನ ಹೆಸರಿಗೆ ವಿರೋಧ ವ್ಯಕ್ತಪಡಿಸಿ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅರೇರಾ ಹಿಲ್ಸ್ ನ ಪ್ರದೇಶದಲ್ಲಿರುವ ಹಳೆಯ ಜೈಲಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ” ಎಂದು ತಿಳಿಸಿದ್ದಾರೆ.

ಹಿಂದೂಗಳನ್ನು ಅವಮಾನಿಸುವ, ಮಹಿಳೆಯರನ್ನು ಧಾರ್ಮಿಕ ಗುರುಗಳು ವಂಚಿಸುವ ಅಶ್ಲೀಲ ದೃಶ್ಯಗಳನ್ನು ವೆಬ್ ಸೀರೀಸ್ ನಲ್ಲಿ ಚಿತ್ರೀಕರಿಸಲಾಗಿದ್ದು ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬುದು ಸಂಘಟನೆಯ ಪ್ರಮುಖ ಆರೋಪವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ

ಘಟನೆ ವರದಿಯಾಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಈ ವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ.‌

Tags: Ashram-3'Bajrang DalBJPBollywoodPrakash Jhaಆಶ್ರಮ್ -3ಪ್ರಕಾಶ್ ಝಾಬಿಜೆಪಿಭಜರಂಗದಳ
Previous Post

ಬಿಬಿಎಂಪಿ ಚುನಾವಣೆಗೆ ಬೆಂಗಳೂರು ಜನಪ್ರತಿನಿಧಿಗಳಿಂದ ಸಿಎಂ ಮೇಲೆ ಭಾರೀ ಒತ್ತಡ; ಯಾಕೆ?

Next Post

ಆನ್ಲೈನ್ ಬೋಧನೆಯ ಬಗ್ಗೆ 43% ರಷ್ಟು ಶಿಕ್ಷಕರಿಗೆ ಅಸಮಾಧಾನ, 9% ಶಿಕ್ಷಕರಿಗೆ ಅತೃಪ್ತಿ: ಸಮೀಕ್ಷೆ

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
Next Post
ಆನ್ಲೈನ್ ಬೋಧನೆಯ ಬಗ್ಗೆ 43% ರಷ್ಟು ಶಿಕ್ಷಕರಿಗೆ ಅಸಮಾಧಾನ, 9% ಶಿಕ್ಷಕರಿಗೆ ಅತೃಪ್ತಿ: ಸಮೀಕ್ಷೆ

ಆನ್ಲೈನ್ ಬೋಧನೆಯ ಬಗ್ಗೆ 43% ರಷ್ಟು ಶಿಕ್ಷಕರಿಗೆ ಅಸಮಾಧಾನ, 9% ಶಿಕ್ಷಕರಿಗೆ ಅತೃಪ್ತಿ: ಸಮೀಕ್ಷೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada