ಬೆನ್ನು ನೋವು ಎಂಬುದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ಸಮಸ್ಯೆಯಾಗಿದೆ ಅದರಲ್ಲೂ 80% ಅಷ್ಟು ಜನರಿಗೆ ಬೆನ್ನು ನೋವು ಕಾಡುತ್ತಿದೆ..
ಲ್ಯಾಪ್ಟಾಪ್ ಮುಂದೆ ತುಂಬಾ ಹೊತ್ತು ಕುಳಿತು ಕೆಲಸ ಮಾಡುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚು ಹೊತ್ತು ನಿಂತು ಕೆಲಸ ಮಾಡುವುದರಿಂದ, ಡ್ರೈವಿಂಗ್ ಕೆಲಸದಿಂದ, ಅಥವಾ ಮನೆ ಕೆಲಸ ಜಾಸ್ತಿ ಇದ್ದರೂ ಕೂಡ ಬೆನ್ನು ನೋವಿನ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಈ ಬೆನ್ನು ನೋವಿನ ಸಮಸ್ಯೆಯನ್ನ ನಿವಾರಣೆ ಮಾಡಿಕೊಳ್ಳಲು ಈ ಸಿಂಪಲ್ ರೂಟೀನ್ ನ ಫಾಲೋ ಮಾಡಿ.
ಎಕ್ಸರ್ಸೈಜ್
ಬೆನ್ನುನೋವಿನ ಸಮಸ್ಯೆ ಇದ್ದವರು ಅಥವಾ ದೇಹದಲ್ಲಿ ಯಾವುದೇ ನೋವಿದ್ದರೂ ಕೂಡ ತಪ್ಪದೇ ಎಕ್ಸರ್ಸೈಜ್ ಅನ್ನ ಮಾಡುವಂಥದ್ದು ಉತ್ತಮ. ಅದ್ರಲ್ಲೂ ಸ್ಟ್ರೆಚಿಂಗ್ ಎಕ್ಸರ್ಸೈಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.
ಶಾಖ ನೀಡಿ
ಬೆನ್ನು ನೋವು ಕಾಣಿಸಿಕೊಂಡಾಗ ಬೆನ್ನಿಗೆ ಬಿಸಿ ನೀರಿನ ಶಾಖವನ್ನು ಕೊಡುವಂತದ್ದು ಉತ್ತಮ. ಹಾಟ್ ವಾಟರ್ ಬಾಗಿಗೆ. ಬಿಸಿ ನೀರು ತುಂಬಿಸಿ ಬೆನ್ನಿನ ಮೇಲೆ ಕೆಲ ನಿಮಿಷಗಳ ಕಾಲ ಇಡಿ. ನಂತರ ತೆಗಿರಿ ಹೀಗೆ ಪ್ರತಿದಿನ ಮಾಡುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ. ಇಲ್ಲವಾದರೆ ಕಲ್ಲುಪ್ಪನ್ನು ಬಿಸಿ ಮಾಡಿ ಒಂದು ಕಾಟನ್ ಬಟ್ಟೆಗೆ ಬಿಸಿಯಾದ ಉಪ್ಪನ್ನು ಕಟ್ಟಿ ಬೆನ್ನಿನ ಮೇಲೆ ಶಾಖವನ್ನು ನೀಡುವುದರಿಂದ ಕೂಡ ನೋವು ಕಡಿಮೆಯಾಗುತ್ತದೆ.
ಈ ಪದಾರ್ಥಗಳನ್ನು ಡಯಟ್ ನಲ್ಲಿ ಸೇರಿಸಿ
ನಿಮ್ಮ ಡಯಟ್ ನಲ್ಲಿ ಒಮೇಗಾ 3 ಆಸಿಡ್ ಅಂಶ ಇರುವಂತಹ ಆಹಾರಗಳನ್ನು ಹೆಚ್ಚಾಗಿ ಸೇರಿಸಿ. ಆಂಟಿ ಇನ್ಫ್ಲಮಿಟರಿ ಅಂಶ ಇರುವಂತಹ ಹಣ್ಣುಗಳು ತರಕಾರಿಗಳು ಮತ್ತು ಧಾನ್ಯಗಳನ್ನು ಸೇವಿಸುವುದು ಉತ್ತಮ. ಸಂಸ್ಕರಿಸಿದ ಆಹಾರಗಳು ಸೇವಿಸಬೇಡಿ ಮತ್ತು ಸಕ್ಕರೆಯನ್ನು ತಪ್ಪಿಸಿ.
ವಿಶ್ರಾಂತಿ
ತುಂಬಾ ಹೊತ್ತು ಕೆಲಸ ಮಾಡುವ ಸಂದರ್ಭದಲ್ಲಿ ಕೂಡ ಕೆಲ ನಿಮಿಷಗಳ ಕಾಲ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ನಂತರ ಪ್ರತಿದಿನ ತಪ್ಪದೆ ಎಂಟರಿಂದ-ಒಂಬತ್ತು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಕೂಡ ಬೆನ್ನು ನೋವಿನ ಸಮಸ್ಯೆಯ ನಿವಾರಣೆಯಾಗುತ್ತದೆ.