ಮಳೆಯ ಅಬ್ಬರದಿಂದ ಬೆಂಗಳೂರಿಗರು ಪರದಾಡ್ತಿದ್ದಾರೆ. ಇನ್ನೊಂದು ಕಡೆ ಮಳೆಯಲ್ಲೇ ನೀರು ತರಲು ಹೋಗಿದ್ದ ಬಾಲಕಿ ಹಾಗು ಆಕೆಯ ಸಹೋದರ ನೀರು ಪಾಲಾಗಿರುವ ಘಟನೆ ಕೆಂಗೇರಿ ಕೆರೆಯಲ್ಲಿ ನಡೆದಿದೆ. ಮಹಾಲಕ್ಷ್ಮಿ ಮತ್ತು ಜಾನ್ ಸೀನ್ ಎಂಬ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರಿನಲ್ಲಿ 13 ವರ್ಷದ ಬಾಲಕ ಜಾನ್ ಸೀನಾ ಹಾಗು ಆತನ ತಂಗಿ ಮಹಾಲಕ್ಷ್ಮೀ ನಿನ್ನೆ ನೀರು ತರುವ ಉದ್ದೇಶದಿಂದ ಬಿಂದಿಗೆ ಹಿಡಿದು ಕೆರೆ ಬಳಿಗೆ ಹೋಗಿದ್ದರು. ಆದರೆ ಮಳೆಯ ನಡುವೆ ಬಾಲಕಿ ಕಾಲು ಜಾರಿ ಕೆರೆಗೆ ಬಿದ್ದಿದ್ದಳು. ಆ ನಂತರ ತಂಗಿಯ ರಕ್ಷಣೆಗೆ ಮುಂದಾಗಿದ್ದ ಅಣ್ಣ ಕೂಡ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ.
ನನ್ನ ತಂಗಿ ಕೆರೆಯಲ್ಲಿ ಮುಳುಗಿ ಹೋಗ್ತಿದ್ದಾಳೆ ಯಾರಾದ್ರು ಕಾಪಾಡಿ ಕಾಪಾಡಿ ಎಂದು ಜನರ ಮುಂದೆ ಅಂಗಲಾಚಿ ಬೇಡಿದ್ದಾನೆ. ಆದ್ರೆ, ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ.. ಕೊನೆಗೆ ಅಲ್ಲೇ ಇದ್ದ ಹಿಂದಿ ಹುಡುಗರ ಬಳಿಯೂ ನನ್ನ ತಂಗಿಯನ್ನ ಕಾಪಾಡಿ ಅಂತಾ ಗೋಗರಿದಿದ್ದಾನೆ. ಆದರೆ ಹಿಂದಿ ಹುಡುಗರಿಗೆ ಈತ ಹೇಳಿದ್ದು ಅರ್ಥವೇ ಆಗಿಲ್ಲ.ಕೊನೆಗೆ ಕೆರೆಯ ದಡದ ಮೇಲೆ ಟೀ ಶರ್ಟ್ ತೆಗೆದಿಟ್ಟು ಕೆರೆಗೆ ಹಾರಿದ್ದಾನೆ.. ಇದಾದ ಐದೇ ಐದು ನಿಮಿಷಕ್ಕೆ ಇಬ್ಬರೂ ಜಲಸಮಾಧಿಯಾಗಿದ್ದಾರೆ..
ಕೆಂಗೇರಿಯಲ್ಲಿ ಇಬ್ಬರು ಮಕ್ಕಳ ನಾಪತ್ತೆ ಪ್ರಕರಣದ ಬಗ್ಗೆ ಮಾತನಾಡಿರುವ ಕಮಿಷನರ್, ಸ್ನಾನಕ್ಕೋ ಅಥವಾ ಈಜೋಕೋ ಹೋಗಿದ್ದಾರೆ, ಬಾಡಿ ಸಿಕ್ಕಿದೆ. ಮಳೆಯಿಂದ ಆದ ಸಮಸ್ಯೆ ಅಲ್ಲ ಇದು . ಕೆರೆ ನೀರು ತರೋಕೆ ಹೋದ್ರೂ ಈಜೋಕೆ ಹೋದ್ರು ಗೊತ್ತಿಲ್ಲ. ಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂದಿದ್ದಾರೆ. ಡಿಸಿಎಂ ಕೂಡ ತಾಯಿಯ ಆಕ್ರಂದನ ನೋಡಲು ಆಗ್ತಿಲ್ಲ ಎಂದಿದ್ದಾರೆ. ತಾಯಿ ಬೆಳಗ್ಗೆ ಮನೆಯಿಂದ ಹೊರಟ್ರೆ ಸಂಜೆಯೇ ಬರ್ತಿದ್ರು. ಹೀಗಾಗಿ ಅಣ್ಣ-ತಂಗಿ ಇಬ್ಬರೇ ದಿನವಿಡೀ ಒಟ್ಟೊಟ್ಟಿಗೆ ಇರ್ತಿದ್ದರು.. ದುರಂತ ಅಂದ್ರೆ ಸಾವಿನಲ್ಲೂ ಇಬ್ಬರೂ ಒಂದಾಗಿ ಹೋಗಿದ್ದಾರೆ.