ಎಲ್ಗರ್ ಪರಿಷತ್ ಪ್ರಕರಣ: ಉಳಿದ ಕಾರ್ಯಕರ್ತರ ಜಾಮೀನು ಅರ್ಜಿಗಳ ಸ್ಥಿತಿಗತಿಯೇನು?
ಎಲ್ಗರ್ ಪರಿಷತ್ ಪ್ರಕರಣದಲ್ಲಿ NIAಯಿಂದ ಬಂಧನಕ್ಕೆ ಒಳಗಾಗಿದ್ದ ಫಾ. ಸ್ಟ್ಯಾನ್ ಸ್ವಾಮಿ ಅವರು ಮೃತಪಟ್ಟಿದ್ದಾರೆ. ಇದೇ ಪ್ರಕರಣದಲ್ಲಿ ಹಲವು ಹಿರಿಯ ಹೋರಾಟಗಾರರನ್ನು NIA ಬಂಧಿಸಿದ್ದು, ಅವರು ಕೂಡಾ...
Read moreDetailsಎಲ್ಗರ್ ಪರಿಷತ್ ಪ್ರಕರಣದಲ್ಲಿ NIAಯಿಂದ ಬಂಧನಕ್ಕೆ ಒಳಗಾಗಿದ್ದ ಫಾ. ಸ್ಟ್ಯಾನ್ ಸ್ವಾಮಿ ಅವರು ಮೃತಪಟ್ಟಿದ್ದಾರೆ. ಇದೇ ಪ್ರಕರಣದಲ್ಲಿ ಹಲವು ಹಿರಿಯ ಹೋರಾಟಗಾರರನ್ನು NIA ಬಂಧಿಸಿದ್ದು, ಅವರು ಕೂಡಾ...
Read moreDetailsಕರೋನಾ ಎರಡನೇ ಅಲೆಯ ಭಯ ಕಡಿಮೆಯಾಗಿದೆ. ದೇಶದಾದ್ಯಂತ ಅನ್ಲಾಕ್ ಪ್ರಕ್ರಿಯೆಗಳು ಆರಂಭವಾಗಿವೆ. ಆದರೆ, ಮೂರನೇ ಅಲೆ ಎಂಬ ಸಂಭಾವ್ಯ ಆಪತ್ತು ನಮ್ಮ ಕಣ್ಣ ಮುಂದೆಯೇ ಇದೆ. ಇಂದಿನಿಂದ ಕರ್ನಾಟಕವೂ ಸಂಪೂರ್ಣವಾಗಿ ಓಪನ್ ಆಗಲಿದೆ. ಬೆಳಿಗ್ಗೆ 5ರಿಂದ ಸಂಜೆ 9ರ ವರೆಗೆ ಬಹುತೇಕ ಚಟುವಟಿಕೆಗಳು ಕರ್ನಾಟಕದಲ್ಲಿ ತೆರೆದುಕೊಳ್ಳಲಿವೆ. ಇಷ್ಟು ದಿನ ಮನೆಯಲ್ಲೇ ಇದ್ದಂತಹವರಿಗೆ ಮನೆಯಿಂದ ಹೊರ ಹೋಗುವ ಹರ್ಷ. ಆದರೆ, ಕರೋನಾ ಸೋಂಕಿನ ತೀವ್ರತೆ ಇನ್ನೂ ಮುಗಿದಿಲ್ಲ. ಅದರ ಹಬ್ಬುವಿಕೆ ಕಡಿಮೆಯಾಗಿರಬಹುದು. ಸೋಂಕಿನಿಂದ ದೇಶ ಸಂಪೂರ್ಣವಾಗಿ ಇನ್ನೂ ಹೊರಬಂದಿಲ್ಲ. ಸೆಪ್ಟೆಂಬರ್ ನಿಂದ ನವೆಂಬರ್ ವರೆಗಿನ ಸಮಯದಲ್ಲಿ ಮೂರನೇ ಅಲೆಯು ದೇಶವನ್ನು ಅಪ್ಪಳಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಅಂತರ ಕಾಪಾಡುವಿಕೆ, ಮಾಸ್ಕ್ ಬಳಕೆ ಹಾಗು ಇತರ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ, ಅಕ್ಟೋಬರ್ - ನವೆಂಬರ್ ವೇಳೆ ಮೂರನೇ ಅಲೆಯು ಉತ್ತುಂಗಕ್ಕೆ ಏರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಕೋವಿಡ್ ತಜ್ಞರ ತಂಡದ ಸದಸ್ಯರಾಗಿರುವ ವಿಜ್ಞಾನಿ ಮನೀಂದ್ರ ಅಗರ್ವಾಲ್ ಅವರ ಪ್ರಕಾರ ಕೋವಿಡ್ ನ ಹೊಸ ಮಾದರಿಯಾದ SARS-CoV-2 ಕಾಣಿಸಿಕೊಂಡಲ್ಲಿ ವೇಗದಿಂದ ಹರಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಮೂರನೇ ಅಲೆಯು ಎರಡನೇ ಅಲೆಯಷ್ಟು ತೀವ್ರವಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿ ದಿನದ ಪ್ರಕರಣಗಳಲ್ಲಿ ಎರಡನೇ ಅಲೆಯ ಅರ್ಧದಷ್ಟು ಪ್ರಕರಣಗಳು ಮಾತ್ರ ವರದಿಯಾಗಲಿದೆ. ಲಸಿಕಾಕರಣ ವೇಗದಿಂದ ನಡೆದಲ್ಲಿ ಸಂಭಾವ್ಯ ಮೂರನೇ ಅಲೆಯ ತೀವ್ರತೆ ಹಾಗೂ ಮುಂಬರುವ ಅಲೆಗಳನ್ನು ತಡೆಯಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ. ಪ್ರತಿದಿನ 50,000 ದಿಂದ 1,00,000 ಪ್ರಕರಣಗಳು ವರದಿಯಾಗಲಿವೆ ಎಂದು ಅವರು ಊಹಿಸಿದ್ದಾರೆ. ಮೂರನೇ ಅಲೆಯ ತೀವ್ರತೆ ಹೆಚ್ಚಿನ ಮಟ್ಟಿಗೆ ಇರುವುದಿಲ್ಲ ಎಂದಯ ತಜ್ಞರು ಅಭಿಪ್ರಾಯಪಟ್ಟಿದ್ದರಾದರೂ, ಸೋಂಕು ಹರಡುವ ವೇಗ ಹೆಚ್ಚಾದಲ್ಲಿ, ಮತ್ತೆ ಲಾಕ್ಡೌನ್ ಮೊರೆ ಹೋಗುವ ಪರಿಸ್ಥಿತಿ ಬರಬಹುದು. ಕಳೆದ ಎರಡು ಅಲೆಗಳಲ್ಲಿ ಬೆಡ್, ಆಕ್ಸಿಜನ್ ಹಾಗೂ ವೆಂಟಿಲೇಟರ್ ಸಮಸ್ಯೆಯಿಂದ ಈಗಾಗಲೇ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಅನ್ಲಾಕ್ ಆಗುವ ಸಮಯದಲ್ಲಿ ವಿವೇಚನೆಯಿಂದ ವರ್ತಿಸಬೇಕಾಗಿದೆ. ಬೇಕಾಬಿಟ್ಟಿ ತಿರುಗಾಟ ಹಾಗೂ ಕರೋನಾ ಸೋಂಕಿನ ಕುರಿತ ಅಸಡ್ಡೆ ಮತ್ತೆ ಸಂಪೂರ್ಣ ರಾಜ್ಯವನ್ನು ಸಂಕಷ್ಟಕ್ಕೆ ನೂಕಲಿದೆ. ಸರ್ಕಾರವು ತನ್ನ ವೈಫಲ್ಯವನ್ನು ಪ್ರದರ್ಶಿಸುತ್ತಲೇ ಬಂದಿರುವುದರಿಂದ, ನಮ್ಮ ಜೀವದ ಕುರಿತು ನಾವೇ ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ.
Read moreDetailsಉತ್ತರಾಖಂಡ ರಾಜ್ಯವು ಕಳೆದ ನಾಲ್ಕು ತಿಂಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. ಇತ್ತೀಚಿನ ಸಮಯದಲ್ಲಿ ಇಷ್ಟು ಅಸ್ಥಿರ ನಾಯಕತ್ವವನ್ನು ಯಾವ ರಾಜ್ಯವೂ ಕಂಡಿರಲಿಲ್ಲ. ಕರ್ನಾಟಕದಲ್ಲಿ ಇನ್ನೇನು ನಾಯಕತ್ವ ಬದಲಾವಣೆ...
Read moreDetailsಕಳೆದ ವರ್ಷ ಕರ್ನಾಟಕ ಕಾಂಗ್ರೆಸ್ ಯುವ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆ ಸಮಯದಿಂದ ಯುವ ಕಾಂಗ್ರೆಸ್ ನಲ್ಲಿ ಆರಂಭವಾದ ಗೊಂದಲ ಇನ್ನೂ...
Read moreDetailsಕೇಂದ್ರ ಸರ್ಕಾರದ ಸಚಿವ ಸಂಪುಟದ ವಿಸ್ತರಣೆಗೆ ಕಾಲ ಕೂಡಿಬಂದಿದೆ. ಮುಂಬರುವ ವಿಧಾನಸಭೆ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಈ ಬಾರಿಯ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ. 81 ಸಚಿವರನ್ನು ನೇಮಿಸಲು ಅವಕಾಶವಿದ್ದು, ಸದ್ಯಕ್ಕೆ ಕೇವಲ 53 ಸಚಿವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ, ಇನ್ನೂ 28 ಜನ ಸಂಸದರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ. ಈ ಬಾರಿ ಸಚಿವ ಸ್ಥಾನ ಪಡೆಯಲಿರುವ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಅವಕಾಶ ಮಾಡಿಕೊಟ್ಟ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಈ ಬಾರಿ ಸಚಿವ ಸ್ಥಾನ ಖಚಿತವೆನ್ನಲಾಗುತ್ತಿದೆ. ಅಸ್ಸಾಂನಲ್ಲಿ ಹಿಮಂತ್ ಬಿಸ್ವಾ ಅವರಿಗೆ ಸಿಎಂ ಆಗಲು ಅನುವು ಮಾಡಿಕೊಟ್ಟ ಸರ್ಬಾನಂದ ಸೋನೋವಾಲ್ ಅವರು ಕೂಡಾ ಸಚಿವ ಸ್ಥಾನದ ರೇಸ್ ನಲ್ಲಿದ್ದಾರೆ. ಜಫರ್ ಇಸ್ಲಾಂ ಬಿಹಾರದಿಂದ ಲೋಕಸಭೆಗೆ ಪ್ರತಿನಿಧಿಸುವವರ ಪೈಕಿ ಎನ್ ಡಿ ಎ ಮಿತ್ರಪಕ್ಷವಾಗಿರುವ ಜೆಡಿಯುಗೆ ಸಚಿವ ಸ್ಥಾನ ಲಭಿಸಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2019ರಲ್ಲಿ ಕೇಂದ್ರ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ನಿತೀಶ್ ಕುಮಾರ್ ಸಚಿವ ಸ್ಥಾನವನ್ನು ನಿರಾಕರಿಸಿದ್ದರು. ಈಗ ಮತ್ತೆ ಅವರಿಗೆ ಮಣೆ ಹಾಕಲಾಗುವುದೋ ಇಲ್ಲವೋ ಎಂಬುದು ಕಾದು ನೋಡಬೇಕಷ್ಟೇ. ಈ ಬಾರಿ ಕೇಂದ್ರದಲ್ಲಿ ಎರಡು ಸಚಿವ ಸ್ಥಾನ ಪಡೆಯಬೇಕೆಂದು ನಿತೀಶ್ ಆಶಿಸಿದ್ದಾರೆ. ಜೆಡಿಯು ಸಂಸದರಾದ ಲಲ್ಲನ್ ಸಿಂಗ್, ರಾಮ್ ನಾಥ್ ಠಾಕುರ್ ಹಾಗೂ ಸಂತೋಷ್ ಖುಷ್ವಾಹ ರೇಸ್ ನಲ್ಲಿದ್ದಾರೆ. ರಾಮ್ ನಾಥ್ ಠಾಕೂರ್ ಎಲ್ ಜೆ ಪಿಯ ರಾಮ್ ವಿಲಾಸ್ ಪಾಸ್ವಾನ್ ನಿಧನದ ನಂತರ ಖಾಲಿಯಾಗಿರುವ ಸಚಿವ ಸ್ಥಾನಕ್ಕೆ, ಅವರ ಪುತ್ರ ಚಿರಾಗ್ ಪಾಸ್ವಾನ್ ಆಯ್ಕೆಯಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ, ಕಳೆದೆರಡು ವಾರದಲ್ಲಿ ಎಲ್ ಜೆ ಪಿ ನಾಯಕರು ಚಿರಾಗ್ ವಿರುದ್ದವೇ ಬಂಡೆದ್ದರಿಂದ, ಈಗ ಈ ಸ್ಥಾನ ಚಿರಾಗ್ ಕುಟುಂಬದ ಮತ್ತೋರ್ವ ಸಂಸದ ಪಶುಪತಿ ಪರಾಸ್ ಅವರಿಗೆ ಲಭಿಸುವ ಸಾಧ್ಯತೆಯಿದೆ.ಬಿಹಾರದ ಹಿಂದಿನ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ, ಮಹಾರಾಷ್ಟ್ರದ ನಾರಾಯಣ ರಾಣೆ ಮತ್ತು ಹಿರಿಯ ನಾಯಕ ಭೂಪೇಂದ್ರ ಯಾದವ್ ಅವರಿಗೆ ಸಚಿವ ಸ್ಥಾನ ಬಹತೇಕ ಖಚಿತವಾಗಿದೆ. ಲಲ್ಲನ್ ಸಿಂಗ್ ಸತತ ಒಂದು ತಿಂಗಳ ಪರಾಮರ್ಶೆಯ ನಂತರ ಈಗಿರುವ ಸಚಿವರ ಅಂಕಪಟ್ಟಿಯನ್ನು ಕೂಡಾ ತಯಾರಿಸಲಾಗಿದೆ. ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಕ್ಕೆ ಈ ಬಾರಿ ಬಂಪರ್ ಆಫರ್ ಲಭಿಸುವ ಸಾಧ್ಯತೆಯಿದೆ. ವರುಣ್ ಗಾಂಧಿ, ರಾಮ್ ಶಂಕರ್ ಕಠೇರಿಯಾ, ಅನಿಲ್ ಜೈನ್, ರೀಟಾ ಬಹುಗುಣ ಜೋಷಿ ಮತ್ತು ಜಫರ್ ಇಸ್ಲಾಂ ಅವರು ಆಕಾಂಕ್ಷಿಗಳಾಗಿದ್ದಾರೆ. ಉತ್ತರಾಖಂಡದಿಂದ ಅಜಯ್ ಭಟ್ ಅಥವಾ ಅನಿಲ್ ಬಲೂನಿ ಹಾಗೂ ಕರ್ನಾಟಕದಿಂದ ಅಚ್ಚರಿಯ ಆಯ್ಕೆಯಾಗಿ ಯುವ ಸಂಸದ ಪ್ರತಾಪ ಸಿಂಹ ಅವರು ಸಚಿವರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಇತ್ತೀಚಿಗೆ ಚುನಾವಣೆ ಸೋತಿರುವ ಪಶ್ಚಿಮ ಬಂಗಾಳದಿಂದ ನಾಯಕರನ್ನು ಕೂಡಾ ಸಚಿವ ಸ್ಥಾನಕ್ಕೆ ಸೇರಿಸುವ ಆಲೋಚನೆ ಬಿಜೆಪಿ ಹೈಕಮಾಂಡ್ ಹೊಂದಿದ್ದು, ಇದರಿಂದ ಬಂಗಾಳದಲ್ಲಿ ಪಕ್ಷ ಸಂಘಟನೆ ಉತ್ತಮವಾಗಿ ನಡೆಯಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಒಂದು ವೇಳೆ ಬಂಗಾಳದ ನಾಯಕರಿಗೆ ಸಚಿವ ಸ್ಥಾನ ನೀಡಿದರೆ, ಜಗನ್ನಾಥ್ ಸರ್ಕಾರ್, ಶಾಂತನು ಠಾಖೂರ್ ಮತ್ತು ನಿತೀತ್ ಪ್ರಮಾಣಿಕ್ ಅವರ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಪಶುಪತಿ ಪರಾಸ್ ಇನ್ನುಳಿದಂತೆ, ಹರ್ಯಾಣದ ಬ್ರಿಜೇಂದ್ರ ಸಿಂಗ್, ರಾಜಸ್ಥಾನದ ರಾಹುಲ್ ಕಸ್ವಾನ್, ಓಡಿಶಾದ ಅಶ್ವನಿ ವೈಷ್ಣವ್, ಮಹಾರಾಷ್ಟ್ರದಿಂದ ಪೂನಂ ಮಹಾಜನ್ ಅಥವಾ ಪ್ರೀತಂ ಮುಂಡೆ ಮತ್ತು ದೆಹಲಿಯಿಂದ ಪರ್ವೇಶ್ ವರ್ಮಾ ಅಥವಾ ಮೀನಾಕ್ಷಿ ಲೇಖಿ ಸಚಿವ ಸ್ಥಾನವನ್ನು ಅಲಂಕರಿಸಲಿದ್ದಾರೆ. ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯುವ ಉದ್ದೇಶದಿಂದ ಈ ಬಾರಿ ಅತ್ಯಂತ ಜಾಗರೂಕತೆಯಿಂದ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿಯವರು, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರ ಜತೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಈಗಾಗಲೇ ಹೆಚ್ಚುವರಿಯಾಗಿ ಇಲಾಖೆಗಳನ್ನು ಪಡೆದಿರುವ ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಹರ್ಷ್ ವರ್ಧನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾಣಿ ಹಾಗೂ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಹೆಚ್ಚುವರಿ ಖಾತೆಯನ್ನು ಬಿಟ್ಟುಕೊಡಬೇಕಾದ ಸಂದರ್ಭ ಎದುರಾಗುವ ಸಾಧ್ಯತೆಯಿದೆ.
Read moreDetailsಪಂಜಾಬ್ ನಲ್ಲಿ ಚುನಾವಣೆಗೆ ಇನ್ನು ಎರಡು ವರ್ಷಗಳು ಬಾಕಿ ಇವೆ. ಈಗಲೇ ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಒಡಕು ಮೂಡಿದ್ದು, ಸಿಎಂ ಅಮರಿಂದರ್ ಸಿಂಗ್ ಮತ್ತು ನವಜ್ಯೋತ್ ಸಿಂಗ್ ಸಿಧು ನಡುವಿನ ಸಮರ ಈಗ ತಾರಕಕ್ಕೆ ಏರಿದೆ. ಪಕ್ಷದ ಹೈಕಮಾಂಡ್ ಅನ್ನು ಭೇಟಿಯಾಗಿ ನಾಯಕರ ಒಲವನ್ನು ಗಳಿಸುವ ಪ್ರಯತ್ನ ನಡೆಯುತ್ತಿದೆ. ಬುಧವಾರ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಸಿಧು, ಪಂಜಾಬ್ ಕಾಂಗ್ರೆಸ್ ನಲ್ಲಿ ಮೂಡಿರುವ ಒಡಕು ನಿವಾರಿಸಲು ರಾಷ್ಟ್ರ ನಾಯಕರು ಮುಂದೆ ಬಂದಿದ್ದಾರೆ. ಅವರ ನಿರ್ಧಾರಕ್ಕಾಗಿ ಕಾಯುತ್ತೇನೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಮುನ್ನ ಸಿಧು ಅವರು, ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಿದ್ದರು. ಸತತ ನಾಲ್ಕು ಗಂಟೆಗಳ ಕಾಲ ಪ್ರಿಯಾಂಕ ಗಾಂಧಿಯೊಂದಿಗೆ ಚರ್ಚೆ ನಡೆಸಿದರು. ಈ ಚರ್ಚೆಯ ವಿಷಯಗಳು ಇನ್ನೂ ಬಹಿರಂಗವಾಗಿಲ್ಲ. ಇಷ್ಟು ಮಾತ್ರವಲ್ಲದೇ, ರಾಹುಲ್ ಗಾಂಧಿಯವರೊಂದಿಗಿನ ಸಭೆಯಲ್ಲಿ ಕೂಡಾ ಪ್ರಿಯಾಂಕ ಗಾಂಧಿ ಹಾಜರಿದ್ದಿದ್ದು, ಪಂಜಾಬ್ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತದ ತೀವ್ರತೆಯನ್ನು ಸೂಚಿಸುತ್ತದೆ. ಈ ಎರಡೂ ಸಭೆಗಳು ಸಿಧು ಅವರನ್ನು ಸಮಾಧಾನಗೊಳಿಸಿವೆಯೇ ಇಲ್ಲವೇ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಸಿಧು ಅವರು ಹೈಕಮಾಂಡ್ ಮುಂದಿಟ್ಟಿರುವ ಬೇಡಿಕೆಗಳ ಮೇಲೆ ಈ ವಿಚಾರ ನಿರ್ಧರಿತವಾಗಿದೆ. ಸಿಎಂ ಖುರ್ಚಿ ಮೇಲೆ ಕಣ್ಣು? ೨೦೧೭ರ ಚುನಾವಣೆಗಿಂತಲೂ ಹಿಂದೆ ಬಿಜೆಪಿ ಪಕ್ಷದಲ್ಲಿದ್ದ ಸಿಧು, ನಂತರ ಕಾಂಗ್ರೆಸ್ ಪಾಳೆಯಕ್ಕೆ ಸೇರಿದ್ದರು. ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸುವ ಮೂಲಕ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿಕೊಂಡಿದ್ದರು. ಈಗ ಮತ್ತೆ ಬಿಜೆಪಿ ಕಡೆಗೆ ಸಿಧು ಮುಖ ಮಾಡಲಿದ್ದಾರೆ ಎಂಬ ಕುರಿತು ಕಳೆದ ಮೇ ತಿಂಗಳಲ್ಲಿ ಗಾಳಿ ಸುದ್ದಿ ಹಬ್ಬಿತ್ತು. ಈ ಸಂದರ್ಭದಲ್ಲ ಇಎಚ್ಚೆತ್ತ ಹೈಕಮಾಂಡ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಪಂಜಾಬ್ ರೈತರ ಪಾಲು ಹೆಚ್ಚಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಬಿಜೆಪಿ ವಿರುದ್ದ ಜನರು ಸಿಡಿದೆದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ೨೦೨೨ರ ಚುನಾವಣೆಯಲ್ಲಿ ಗೆಲ್ಲಲು, ಕಾಂಗ್ರೆಸ್ ಮುಂದೆ ವಿಫುಲವಾದ ಅವಕಾಶಗಳಿವೆ. ಈ ಅವಕಾಶವನ್ನು ಬಳಸಿಕೊಂಡು ಸಿಎಂ ಸ್ಥಾನವನ್ನು ಪಡೆಯುವ ಆಲೋಚನೆ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಸಿಧು ಅವರ ಈ ಪ್ರಯತ್ನಕ್ಕೆ ಈಗಾಗಲೇ ತಣ್ಣೀರೆರಚಿರುವ ಹೈಕಮಾಂಡ್, ಹಾಲಿ ಸಿಎಂ ಅಮರೀಂದರ್ ಸಿಂಗ್ ಅವರಿಗೆ ನೀಡಿರುವ ಬೆಂಬಲ ಮುಂದುವರೆಸುವುದಾಗಿ ಹೇಳಿದ್ದಾರೆ. ಮಾತ್ರವಲ್ಲದೇ, ಮುಂಬರುವ ಚುನಾವಣೆಯನ್ನು ಕೂಡಾ ಅವರ ನೇತೃತ್ವದಲ್ಲಿಯೇ ಎದುರಿಸುವುದಾಗಿ ಹೇಳಿದೆ. ಆದರೆ, ರಾಜಕೀಯದಲ್ಲಿ ಯಾವಾಗ ಯಾರ ಸ್ಥಾನ ಪಲ್ಲಟವಾಗುತ್ತದೆ ಎಂಬುದು ಯಾರು ಬಲ್ಲರು? ಈ ಕಾರಣಕ್ಕಾಗಿ, ಸಿಎಂ ಸ್ಥಾನಕ್ಕೆ ಸಿಧು ತಮ್ಮ ಲಾಬಿ ಮುಂದವರೆಸಿರುವ ಸಾಧ್ಯತೆಗಳು ಕೂಡಾ ಇವೆ. ಭಿನ್ನಮತ ಶಮನಕ್ಕೆ ಮುಂದಾದ ಪ್ರಿಯಾಂಕ ಗಾಂಧಿ? ಕೆಲ ದಿನಗಳ ಹಿಂದೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಧು ವಿರುದ್ದ ವಾಗ್ದಾಳಿ ನಡೆಸಿದ್ದರು. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರೀವಾಲ್ ಜತೆ ಸಿಧು ಮಾತುಕತೆಯಲ್ಲಿ ತೊಡಗಿದ್ದಾರೆ. ಅವರು ಯಾವ ಕ್ಷಣದಲ್ಲಿ ಬೇಕಾದರೂ ಪಕ್ಷ ಬದಲಾಯಿಸಬಹುದು ಎಂದಿದ್ದರು. ಈ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ಸಿಧು, ಅಮರಿಂದರ್ ಸಿಂಗ್ ಅವರ ಹೇಳಿಕೆಗೆ ಸ್ಪಷ್ಟನೆ ಕೇಳಿದ್ದರು. ಇದೇ ರೀತಿಯ ಒಳಜಗಳ ಒಮ್ಮೆ ರಾಜಸ್ಥಾನ ಕಾಂಗ್ರೆಸ್ ನಲ್ಲಿಯೂ ನಡೆದಿತ್ತು. ಆ ಸಂದರ್ಭಧಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಯುವ ನಾಯಕ ಸಚಿನ್ ಪೈಲಟ್ ನಡುವೆ ತಕಾರಾರು ಎದ್ದಿತ್ತು. ಇನ್ನೇನು ಕಾಂಗ್ರೆಸ್ ಇಬ್ಬಾಗವಾಗುತ್ತದೆ ಎನ್ನುವಷ್ಟರಲ್ಲಿ ಪ್ರಿಯಾಂಕ ಗಾಂಧಿ ಮಧ್ಯ ಪ್ರವೇಶಿಸಿ ಭಿನ್ನಮತ ಶಮನಗೊಳಿಸಿದ್ದರು. ಈಗ ಪಂಜಾಬ್ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಒಡಕು ಸರಿಪಡಿಸಲು ಮತ್ತೆ ಪ್ರಿಯಾಂಕ ಗಾಂಧಿಯವರು ಮುಂದಾಗಿದ್ದಾರೆ. ಸಚಿವ ಸ್ಥಾನ ನಿರಾಕರಿಸಿದ ಸಿಧು: ರಾಜ್ಯ ಕಾಂಗ್ರೆಸ್ ನಲ್ಲಿದ್ದ ಭಿನ್ನಮತ ಶಮನಕ್ಕಾಗಿ ಸೋನಿಯಾ ಗಾಂಧಿ ಅವರು ಎಐಸಿಸಿಯ ತ್ರಿಸದಸ್ಯ ಸಮಿತಿಯನ್ನು ರಚಿಸಿ ವರದಿ ಕೇಳಿದ್ದರು. ಈ ವರದಿಯ ಪ್ರಕಾರ ಸಿಧು ಅವರಿಗೆ ಪಕ್ಷದಲ್ಲಿ ಹಾಗು ಸರ್ಕಾರದಲ್ಲಿ ಸ್ಥಾನ ನೀಡಬೇಕೆಂದು ಹೇಳಲಾಗಿತ್ತು. ಆದರೆ, ಈ ಸಿಧು ಅವರು ಈ ಆಫರ್ ಅನ್ನು ನೇರವಾಗಿ ತಿರಸ್ಕರಿಸಿದ್ದರು. “ಲೋಕಸಭೆ, ರಾಜ್ಯಸಭೆ, ಶಾಸಕ, ಮಂತ್ರಿ… ಹೀಗೆ ಹದಿನೇಳು ವರ್ಷ ರಾಜಕೀಯದಲ್ಲಿದ್ದೇನೆ. ಒಂದೇ ಉದ್ದೇಶ ಏನೆಂದರೆ, ಪಂಜಾಬ್ ನ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿ ಇಲ್ಲಿನ ಜನರಿಗೆ ಅಧಿಕಾರ ನೀಡುವುದು. ನನಗೆ ಹಲವು ಬಾರಿಯೂ ಕ್ಯಾಬಿನೆಟ್ ಸ್ಥಾನ ನೀಡದರೂ, ವ್ಯವಸ್ಥೆಯನ್ನು ಬದಲಾಯಿಸುವ ನನ್ನ ಪ್ರತೀ ಪ್ರಯತ್ನವನ್ನು ‘ವ್ಯವಸ್ಥೆ’ ನಿರಾಕರಿಸಿದಾಗ ನಾನು ‘ವ್ಯವಸ್ಥೆ’ಯನ್ನೇ ನಿರಾಕರಿಸುತ್ತೇನೆ,” ಎಂದು ಹೇಳಿದ್ದರು. ಕಳೆದೆರಡು ವರ್ಷಗಳಿಂದ ಮುಸುಕಿನ ಗುದ್ದಾಟದಂತಿದ್ದ ಸಿಧು-ಅಮರಿಂದರ್ ಜಗಳ ಈಗ ಬೀದಿಗೆ ಬಂದು ನಿಂತಿದೆ. ಎರಡೇ ವರ್ಷಗಳಲ್ಲಿ ಚುನಾವಣೆಯೂ ಬರಲಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಭಿನ್ನಮತಕ್ಕೆ ಯಾವ ಮದ್ದು ಅರೆಯಲಿದೆ ಎಂಬುದು ನಿಜಕ್ಕು ಕುತೂಹಲ ಮೂಡಿಸಿದೆ.
Read moreDetailsಕರೋನಾ ಸೋಂಕಿನ ಎರಡನೇ ಅಲೆಯು ಮೊದಲನೇ ಅಲೆಗಿಂತ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ತೀವ್ರವಾಗಿತ್ತು. ಈ ಬಾರಿ ಉಂಟಾದ ಸಾವುನೋವುಗಳು ಕಳೆದ ಬಾರಿಗಿಂತ ಹೆಚ್ಚು. ಖಾಸಗಿ ಆಸ್ಪತ್ರೆಯೊಂದು ನಡೆಸಿದ...
Read moreDetailsಭಾರತ ಮತ್ತು ಚೀನಾ ನಡುವಿನ ಗಡಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಭಾರತ ಸೇನೆಯ 50,000 ಸೈನಿಕರನ್ನು ಹೆಚ್ಚುವರಿಯಾಗಿ ಚೀನಾ ಗಡಿಯಲ್ಲಿ ನಿಯೋಜಿಸಲಾಗಿದೆ. ಈಗ...
Read moreDetailsಭಾರತದಲ್ಲಿ 18 ವರ್ಷ ವಯಸ್ಸಿನ ಮೇಲ್ಪಟ್ಟವರಲ್ಲಿ ಸುಮಾರು 5.6% ಜನ ಈಗಾಗಲೇ ಕರೋನಾ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ. ಕಳೆದ ಒಂದು ವಾರದಲ್ಲಿ 3.91 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದ್ದು, ಈವರೆಗಿನ ಅತೀ ಹೆಚ್ಚು ಪ್ರಮಾಣ ಇದಾಗಿದೆ. ಸುಪ್ರಿಂಕೋರ್ಟ್ ಗೆ ನಿಡಿರುವ ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರವು ಲಸಿಕಾ ಅಭಿಯಾನದ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದೆ. ಈ ವರ್ಷಾಂತ್ಯಕ್ಕೆ 188 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಜುಲೈ 31ರ ವರೆಗೆ 51.6 ಕೋಟಿ ಲಸಿಕೆಗಳು ವಿತರಣೆಗೆ ಲಭ್ಯವಾಗುವಂತೆ ಮಾಡಲಾಗುವುದು, ಎಂದು ಹೇಳಿದೆ. ಈಗಾಗಲೇ ಲಸಿಕೆ ಪಡೆದಿರುವವರಲ್ಲಿ 54% ಪುರುಷರು ಹಾಗೂ 46% ಮಹಿಳೆಯರಿದ್ದಾರೆ. ಈ ಅಂತರವನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಬೇಕಾಗಿದೆ. ಇಲ್ಲವಾದರೆ, ಲಸಿಕಾ ಅಭಿಯಾನಕ್ಕೆ ತೊಂದರೆ ಉಂಟಾಗುವುದು ಎಂದು ರಾಷ್ಟ್ರೀಯ ತಜ್ಞರ ಸಮಿತಿಯ ಮುಖ್ಯಸ್ಥರಾದ ವಿ ಕೆ ಪೌಲ್ ಅವರು ಹೇಳಿದ್ದಾರೆ. ದಾಖಲೆ ಮಟ್ಟದ ಲಸಿಕಾ ಅಭಿಯಾನದ ಕುರಿತು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಇಲಾಖೆ, ದೇಶದಲ್ಲಿ ಈಗಾಗಲೇ ಲಸಿಕೆ ಪಡೆದಿರುವವರ ಸಂಖ್ಯೆ ಕೆನಾಡ, ಮಲೇಷಿಯಾ ಮತ್ತು ಸೌದಿ ಅರೇಬಿಯಾ ದೇಶಗಳ ಒಟ್ಟು ಜನಸಂಖ್ಯೆಯನ್ನೇ ಮೀರಿಸಿದೆ, ಎಂದು ಹೇಳಿದೆ. https://twitter.com/MoHFW_INDIA/status/1409387754731892744 ಇನ್ನು, ಅತ್ಯಂತ ಅಪಾಯಕಾರಿಯಾಗಿರುವ ಡೆಲ್ಟಾ ಪ್ಲಸ್ ಮಾದರಿಯ ವೈರಾಣು ಕುರಿತು ಕೇಂದ್ರ ಸರ್ಕಾರವು, ಈ ಮಾದರಿಯ ವೈರಸ್ ಈಗಾಗಲೇ 12 ದೇಶಗಳಲ್ಲಿ ವರದಿಯಾಗಿದೆ. ಭಾರತದಲ್ಲಿ ಕೆಲವು ಕಡೆಗಳಲ್ಲಿ ಮಾತ್ರವೇ ಈ ಮಾದರಿ ಪತ್ತೆಯಾಗಿದೆ. ಇದರ ಕುರಿತು ಐಸಿಎಂಆರ್ ಪ್ರಯೋಗಾಲಯದಲ್ಲಿ ಅಧ್ಯಯನ ನಡೆಸಲಾಗುತ್ತಿದೆ, ಎಂದು ಹೇಳಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 46,148 ಹೊಸ ಕರೋನಾ ಪ್ರಕರಣಗಳು ವರದಿಯಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಯಾಗಿದೆ. ಇದು ಕೋವಿಡ್ ಎರಡನೇ ಅಲೆ ಕೊನೆಗೊಳ್ಳುವ ಸೂಚನೆ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್ ಸಾವುಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 979 ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಎರಡನೇ ಅಲೆಯ ವಿರುದ್ದದ ನಡೆದ ಕಠಿಣ ಸಮರದ ಬಳಿಕ, ಈಗ ಬಹುತೇಕ ರಾಜ್ಯಗಳ: ಅನ್ಲಾಕ್ ಮಾಡುವತ್ತ ಮುಖ ಮಾಡಿವೆ.
Read moreDetailsಬಹುಮತವೆಂಬುದು ಭಾರತದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಸಾಬೀತಾಗಿದೆಯೋ, ಅಷ್ಟೇ ಋಣಾತ್ಮಕ ಉದಾಹರಣೆಗಳನ್ನು ಕೂಡಾ ಸೃಷ್ಟಿಸಿದೆ. ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಭಾಗವಾಗಿರುವ ಈ ಬಹುಮತ, ಅದೇ ಪ್ರಜಾಪ್ರಭುತ್ವದ ಆಶಯಗಳ ಪತನಕ್ಕೂ...
Read moreDetailsಕ್ರಿಕೆಟ್ ಇತಿಹಾಸದ ಮೊತ್ತಮೊದಲ ಟೆಸ್ಟ್ ಚಾಂಪಿಯನ್’ಶಿಪ್ ನ ಕೊನೆಯ ಹಂತವನ್ನು ನಾವು ತಲುಪಿದ್ದೇವೆ. ಇಂದಿನಿಂದ ಐದು ದಿನಗಳ ನಂತರ ವಿಶ್ವದ ಅತ್ಯುತ್ತಮ ಟೆಸ್ಟ್ ತಂಡ ಯಾವುದು ಎಂಬ...
Read moreDetailsಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ವಿದ್ಯಾರ್ಥಿ ನಾಯಕರಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ಜಾಮೀನು ಲಭಿಸಿ...
Read moreDetailsಕೋವಿಡ್ ಲಸಿಕೆ ಕುರಿತಂತೆ ಪ್ರತಿ ಬಾರಿಯೂ ತನ್ನ ನಿಲುವು ಬದಲಾಯಿಸುತ್ತಿರುವ ಸರ್ಕಾರ, ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯುವ ದಿನಗಳ ಅಂತರವನ್ನು ಕೂಡಾ ಮೇ 13ರಂದು ವಿಸ್ತರಿಸಿತ್ತು....
Read moreDetailsಕೇಂದ್ರ ಮಂತ್ರಿಯಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಲೋಕ ಜನಶಕ್ತಿ ಪಕ್ಷದ ನೇತೃತ್ವ ವಹಿಸಿದ್ದ ಚಿರಾಗ್ ಪಾಸ್ವಾನ್, ಈಗ ನಡು ನೀರಿನಲ್ಲಿ ಒಂಟಿಯಾಗಿ ನಿಂತಿದ್ದಾರೆ....
Read moreDetails2011ರ ಪಶ್ಚಿಮ ಬಂಗಾಳ ಚುಣಾವಣೆಯಲ್ಲಿ ಟಿಎಂಸಿ ಪಕ್ಷವು ಅಭೂತಪೂರ್ವ ಯಶಸ್ಸು ಸಾಧಿಸಲು ಕಾರಣಕರ್ತರಾದವರಲ್ಲಿ ಮುಕುಲ್ ರಾಯ್ ಕೂಡಾ ಒಬ್ಬರು. 67 ವರ್ಷದ ಈ ಅನುಭವಿ ರಾಜಕಾರಣಿ, ಕಳೆದ...
Read moreDetailsಈ ಬಾರಿಯ ಪಂಚ ರಾಜ್ಯಗಳ ಚುನಾವಣೆಯ ನಂತರ ಅತೀ ಹೆಚ್ಚು ಹಿಂಸೆಯನ್ನು ಕಂಡಂತಹ ರಾಜ್ಯವೆಂದರೆ ಅದು ಪಶ್ಚಿಮ ಬಂಗಾಳ. ಇಲ್ಲಿ ನಡೆದ ರಾಜಕೀಯ ಪ್ರೇರಿತ ಹಿಂಸಾಚಾರದಿಂದ ಮನೆ...
Read moreDetailsಬಿಜೆಪಿ ಅಧಿಕಾರಕ್ಕೇರಿದ ಬಳಿಕ ಸತತ ಏಳನೇ ವರ್ಷವೂ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾದ ಹೊರಹೊಮ್ಮಿದೆ. ಅತೀ ಹೆಚ್ಚು ವೈಯಕ್ತಿಕ ಹಾಗೂ ಕಾರ್ಪೊರೇಟ್ ದೇಣಿಗೆಗಳನ್ನು ಪಡೆದವರ ಪಟ್ಟಿಯಲ್ಲಿ ತನ್ನ...
Read moreDetailsಕೇರಳದಲ್ಲಿ ಬಿಜೆಪಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಳಿ ಇದ್ದಂತಹ ಒಂದು ಸೀಟನ್ನು ಕೂಡಾ...
Read moreDetailsಸಕ್ಕರೆ ನಾಡು ಮಂಡ್ಯದಲ್ಲಿ ಎರಡನೇ ಅಲೆಯ ಕೋವಿಡ್ 19, ದೇಶದ ಇತರ ಭಾಗಗಳಿಗಿಂತ ಭಿನ್ನವಾಗಿ ಹರಡಿದೆ. ದೇಶದ ಇತರ ಭಾಗಗಳಲ್ಲಿ ವಯಸ್ಕರೇ ಸೋಂಕಿಗೆ ಅತೀ ಹೆಚ್ಚು ತುತ್ತಾಗಿದ್ದರೆ...
Read moreDetailsಶಿವಕುಮಾರ್ ಎ ಲಸಿಕೆಯ ಕೊರತೆ ಭಾರತದಲ್ಲಿ ಕರೋನಾ ವಿರುದ್ದದ ಹೋರಾಟಕ್ಕೆ ದೊಡ್ಡ ಮಟ್ಟದ ಹೊಡೆತ ನೀಡಿದೆ. ಲಸಿಕೆಗಳನ್ನು ಪಡೆಯುವಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವೈಫಲ್ಯ ಸಾಮಾನ್ಯ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada