ಎರಡನೇ ಅಲೆಗೆ 21-40 ವಯಸ್ಸಿನವರಲ್ಲೇ ಶೇಕಡಾ 50 ರಷ್ಟು ಸೋಂಕು ಪತ್ತೆ: ರಾಷ್ಟ್ರೀಯ ಸರಾಸರಿ ಅಂಕಿ ಅಂಶಗಳಿಗೆ ಸಂಪೂರ್ಣ ತದ್ವಿರುದ್ದವಾದ ಮಂಡ್ಯ ಜಿಲ್ಲೆ..

ಸಕ್ಕರೆ ನಾಡು ಮಂಡ್ಯದಲ್ಲಿ ಎರಡನೇ ಅಲೆಯ ಕೋವಿಡ್ 19, ದೇಶದ ಇತರ ಭಾಗಗಳಿಗಿಂತ ಭಿನ್ನವಾಗಿ ಹರಡಿದೆ. ದೇಶದ ಇತರ ಭಾಗಗಳಲ್ಲಿ ವಯಸ್ಕರೇ ಸೋಂಕಿಗೆ ಅತೀ ಹೆಚ್ಚು ತುತ್ತಾಗಿದ್ದರೆ ಜಿಲ್ಲೆಯ ಅಂಕಿ ಅಂಶ ವ್ಯತಿರಿಕ್ತವಾಗಿದೆ.  ಮಂಡ್ಯ ಜಿಲ್ಲಾಡಳಿತದ ಮಾಹಿತಿಯ ಪ್ರಕಾರ, 21-40 ವಯಸ್ಸಿನವರು ಜಿಲ್ಲೆಯ ಒಟ್ಟು ಕೋವಿಡ್ -19 ಪ್ರಕರಣಗಳಲ್ಲಿ ಶೇಕಡಾ 50 ರಷ್ಟು ಭಾಗವನ್ನು ಹೊಂದಿದ್ದಾರೆ.  ಮಂಡ್ಯದ ಅಂಕಿ -ಅಂಶಗಳು ರಾಷ್ಟ್ರೀಯ ಸರಾಸರಿ ಅಂಕಿ ಅಂಶಗಳಿಗೆ ಸಂಪೂರ್ಣ ತದ್ವಿರುದ್ದವಾಗಿವೆ. ಕಳೆದ ಏಪ್ರಿಲ್ ನಲ್ಲಿ ಕೋವಿಡ್ ಕುರಿತ ಮಾಹಿತಿ ನೀಡುವಾಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ, ಅವರು ಎರಡನೇ ಅಲೆಯಲ್ಲಿ ಯುವಕರಿಗಿಂತ ವಯಸ್ಸಾದವರೇ ಹೆಚ್ಚು ಸೋಂಕಿಗೆ ತುತ್ತಾಗುತ್ತಾರೆ ಎಂದು ಹೇಳಿದ್ದರು. ಎರಡನೇ ತರಂಗದಲ್ಲಿ ಸೋಂಕಿಗೆ ತುತ್ತಾಗುವ ಕೋವಿಡ್ -19 ರೋಗಿಗಳ ಸರಾಸರಿ ವಯಸ್ಸು 48.9 ವರ್ಷಗಳು, ಮೊದಲ ಅಲೆಯಲ್ಲಿ ಇದು 50.4 ವರ್ಷಗಳಾಗಿತ್ತು.  ಮಂಡ್ಯದಲ್ಲಿ, ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಯುವಕರಲ್ಲೆ ಸೋಂಕು  ಉಲ್ಬಣಗೊಂಡಿರುವುದು ಕಂಡು ಬಂದಿದೆ.

ಅಂಕಿಅಂಶಗಳ ಪ್ರಕಾರ, 2020 ರ ಏಪ್ರಿಲ್ 7 ರಿಂದ 2021 ರ ಮಾರ್ಚ್ 31 ರವರೆಗೆ ಸುಮಾರು ಒಂದು ವರ್ಷ ಜಿಲ್ಲೆಯಲ್ಲಿ 20,035 ಪ್ರಕರಣಗಳು ವರದಿಯಾಗಿವೆ. ಆದರೆ ಸುಮಾರು ಎರಡು ತಿಂಗಳಲ್ಲಿ – ಏಪ್ರಿಲ್ 1 ರಿಂದ ಮೇ 24 ರವರೆಗೆ – ಜಿಲ್ಲೆಯಲ್ಲಿ 36,341 ಪ್ರಕರಣಗಳು ದಾಖಲಾಗಿವೆ, ಇದು 181 ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 258 ಸಾವುಗಳು ದಾಖಲಾಗಿವೆ. 36,341 ಪ್ರಕರಣಗಳಲ್ಲಿ, 45.5 ಶೇಕಡಾ ಅಥವಾ 16,541 ಜನರು 21-40 ವಯಸ್ಸಿನವರಾಗಿದ್ದಾರೆ. ಒದಗಿಸಲಾದ ಮಾಹಿತಿಯ ಪ್ರಕಾರ, ಧನಾತ್ಮಕ ಪರೀಕ್ಷೆ ನಡೆಸಿದವರಲ್ಲಿ 8,012 ಮಂದಿ 21-30 ವಯಸ್ಸಿನವರಾಗಿದ್ದರೆ, 8,529 ಮಂದಿ 31-40 ವಯಸ್ಸಿನವರಾಗಿದ್ದಾರೆ. 0-10 ವಯೋಮಾನದವರಲ್ಲಿ 1,219 ಪ್ರಕರಣಗಳು ಮತ್ತು 11-20 ವಯೋಮಾನದವರಲ್ಲಿ 3,308 ಪ್ರಕರಣಗಳು ದಾಖಲಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, 50+ ವಯೋಮಾನದವರಲ್ಲಿ 8,382 ಪ್ರಕರಣಗಳು ಅಥವಾ ಶೇಕಡಾ 23 ರಷ್ಟು ಪ್ರಕರಣಗಳು ದಾಖಲಾಗಿವೆ.

ಈ ಕೋವಿಡ್ -19 ಅಲೆಯಲ್ಲಿ ಯುವಕರು ಹೊರಗಡೆ  ಇದ್ದಿದ್ದೇ   ಪ್ರಮುಖ ಕಾರಣ ಎಂದು ಮಂಡ್ಯ ಜಿಲ್ಲೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಬಾರಿಯ ಕೋವಿಡ್ ಸಮಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಎರಡನೇ ಅಲೆಯಲ್ಲಿ ಯುವಕರು ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಆದ ಕಾರಣ ಅವರೇ ಹೆಚ್ಚು ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು. ಮಂಡ್ಯ ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಬರುತ್ತಿರುವುದರಿಂದ ಹೆಚ್ಚು ಸೋಂಕು ಪ್ರಕರಣಗಳೂ ವರದಿ ಆಗಿವೆ ಎಂದೂ ಅವರು ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿ ಅವರು    18-45 ವಯೋಮಾನದವರಿಗೆ ಇತ್ತೀಚೆಗಷ್ಟೆ ಲಸಿಕೆ ನೀಡಲು ಅರಂಭಿಸಲಾಯಿತು ಬಹುಶಃ ಇದರಿಂದಾಗೇ ಈ ವಯಸ್ಸಿನವರಲ್ಲಿ ಸೋಂಕು ಹೆಚ್ಚಾಗಿ ಕಂಡು ಬಂದಿರಬಹುದು ಎಂದರಲ್ಲದೆ ಈ ಕುರಿತು ಜಿಲ್ಲಾಡಳಿತ ಯಾವುದೇ ಅಧ್ಯಯನ ನಡೆಸಿಲ್ಲ ಇದು ಬರೇ ಊಹೆಯಾಗಿದೆ ಎಂದರು.  ಸೋಂಕು ಪ್ರಕರಣಗಳ ಹೆಚ್ಚಳವನ್ನು ತಡೆಗಟ್ಟಲು, ಜನರು ಮನೆಯಲ್ಲಿಯೇ ಉಳಿಯುವಂತೆ ಮಾಡಲು ಜಿಲ್ಲಾಡಳಿತವು ಈಗ ಜಿಲ್ಲೆಯಲ್ಲಿ ಕಟ್ಟುನಿಟ್ಟಾದ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಿದೆ.  ವಾರದ ನಾಲ್ಕು ದಿನಗಳಲ್ಲಿ (ನಿರಂತರವಲ್ಲದೆ) ಸಂಪೂರ್ಣ ಲಾಕ್ಡೌನ್ ಇರುತ್ತದೆ.   ಈ ಸಮಯದಲ್ಲಿ ಕೇವಲ ವೈದ್ಯಕೀಯ ಅಂಗಡಿಗಳನ್ನು  ಮಾತ್ರ  ತೆರೆಯಲು  ಅನುಮತಿಸಲಾಗುತ್ತದೆ. ರಾಜ್ಯ ಮಟ್ಟದಲ್ಲಿ, ನಿರ್ಬಂಧಗಳೊಂದಿಗೆ ಈಗಾಗಲೇ ಲಾಕ್ಡೌನ್ ಇದೆ” ಎಂದು ಅವರು ಹೇಳಿದರು.  ಆದರೆ ಅದನ್ನು ಹೊರತುಪಡಿಸಿ, ಅಗತ್ಯವಿದ್ದರೆ ಹೆಚ್ಚುವರಿ ನಿರ್ಬಂಧಗಳನ್ನು ಜಾರಿಗೊಳಿಸಲು  ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಿದೆ ಎಂದೂ ಅವರು ಹೇಳಿದರು.

ಈ ಕುರಿತು ಮಾತನಾಡಿದ ಮತ್ತೊಬ್ಬ ಅಧಿಕಾರಿಯು ಎರಡನೇ ಅಲೆಯ ತೀವ್ರತೆಗೆ  ಕಳೆದ ಏಪ್ರಿಲ್ ಮತ್ತು ಮಾರ್ಚ್ ನಡುವೆ 20,000 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. ಏಪ್ರಿಲ್ ಮತ್ತು ಮೇ ನಡುವೆ, ಈಗಾಗಲೇ 36,000 ಪ್ರಕರಣಗಳು ದಾಖಲಾಗಿವೆ. ನಾವು ಕಿರಿಯ ವಯಸ್ಸಿನವರಲ್ಲಿ ಸಾಕಷ್ಟು ಸಕಾರಾತ್ಮಕ ಪ್ರಕರಣಗಳನ್ನು ಪಡೆಯುತ್ತಿದ್ದೇವೆ. ಜನರು ಅನಗತ್ಯವಾಗಿ ಹೊರಬರದಂತೆ ನಾವು ಈಗ ಸಂಪೂರ್ಣ ಲಾಕ್ಡೌನ್ ಮಾಡಿದ್ದೇವೆ ಎಂದರು.

 ಕಳೆದ ಎರಡು ತಿಂಗಳಲ್ಲಿ 11-30 ವಯೋಮಾನದವರಲ್ಲಿ 11,320 ಪ್ರಕರಣಗಳು ದಾಖಲಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ಏಪ್ರಿಲ್ 2020 ಮತ್ತು 31 ಮಾರ್ಚ್ 2021 ರ ನಡುವಿನ ಮೊದಲ ಅಲೆಯಲ್ಲಿ ಇದೇ  ವಯಸ್ಸಿನವರಲ್ಲಿ ಕೇವಲ 5,701 ಪ್ರಕರಣಗಳನ್ನು ಕಂಡಿದೆ. ಅಲ್ಲದೆ, 61-70 ವಯಸ್ಸಿನವರು ಜಿಲ್ಲೆಯ ಪ್ರಸ್ತುತ  ಸೋಂಕು ಹೆಚ್ಚಳದಲ್ಲಿ  ಅತಿ ಹೆಚ್ಚು ಸಾವುಗಳನ್ನು (84) ಕಂಡಿದ್ದರೆ, 41-50 ವಯಸ್ಸಿನವರಲ್ಲಿ ಸಾವಿನ ಪ್ರಮಾಣವು  ತೀವ್ರವಾಗಿ ಏರಿದೆ. ಮೊದಲ ಅಲೆಯಲ್ಲಿ ಸುಮಾರು ಒಂದು ವರ್ಷದವರೆಗೆ 41-50 ವಯೋಮಾನದವರಲ್ಲಿ ಕೇವಲ 14 ಜನರು ಸಾವನ್ನಪ್ಪಿದ್ದಾರೆ.  ಆದರೆ ಕಳೆದ ಎರಡು ತಿಂಗಳಲ್ಲಿ, ಈ ವಯೋಮಾನದವರಲ್ಲಿ 50 ಜನರು  ಮೃತಪಟ್ಟಿದ್ದಾರೆ.

 ಕೋವಿಡ್ ಸೋಂಕು  ಪ್ರಕರಣಗಳನ್ನು ಮೊದಲೇ ಪತ್ತೆ ಹಚ್ಚಲು ಜಿಲ್ಲಾಡಳಿತವು ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಅನೇಕ ರೋಗಿಗಳನ್ನು ಆಸ್ಪತ್ರೆಗೆ ಕರೆತಂದಾಗ, ಅವರ ಆಮ್ಲಜನಕದ ಮಟ್ಟವು ಈಗಾಗಲೇ ಶೇಕಡಾ 40 ಅಥವಾ 50 ಕ್ಕೆ ಕುಸಿದಿರುತ್ತದೆ ಹೀಗಾಗಿ ಅನೇಕ ಸಂದರ್ಭಗಳಲ್ಲಿ, ಅವರು ಆಸ್ಪತ್ರೆಗೆ ತಲುಪಿದ 12 ಗಂಟೆಗಳಲ್ಲಿ ಸಾವು ಸಂಭವಿಸುತ್ತದೆ, ಎಂದು ಅಧಿಕಾರಿಯೊಬ್ಬರು ಹೇಳಿದರು.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...