ಆಗಸ್ಟ್‌ನಲ್ಲಿ 1.44 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ ಶೇ. 28ರಷ್ಟು ಏರಿಕೆಯಾಗಿದೆ ಎಂದು ಸೆಪ್ಟೆಂಬರ್ 1ರಂದು ಹಣಕಾಸು ಸಚಿವಾಲಯ ತಿಳಿಸಿದೆ.
ಆದಾಗ್ಯೂ, ಜುಲೈನಲ್ಲಿ ಸಂಗ್ರಹವಾದ ಜಿಎಸ್‌ಟಿಗೆ ಹೋಲಿಸಿದರೆ ಆಗಸ್ಟ್ ಜಿಎಸ್‌ಟಿ ಸಂಗ್ರಹ ಶೇ. 4ರಷ್ಟು ಕಡಿಮೆಯಾಗಿದೆ. ಸತತ ಆರು ತಿಂಗಳಿನಿಂದ ಮಾಸಿಕ ಜಿಎಸ್‌ಟಿ ಆದಾಯವು 1.4 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ ಪಾಲು 24,710 ಕೋಟಿ ರೂ.ಗಳಾಗಿದ್ದರೆ, ರಾಜ್ಯ ಜಿಎಸ್‌ಟಿ 30,951 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್‌ಟಿ 77,782 ಕೋಟಿ ರೂ.ಗಳಾಗಿವೆ. ಇದರಲ್ಲಿ 10,168 ಕೋಟಿ ರೂ. ಸೆಸ್ ಕೂಡ ಸೇರಿದೆ.
ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಜಿಎಸ್‌ಟಿ ಸಂಗ್ರಹವಾಗಿದ್ದರೂ, ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 14ಕ್ಕಿಂತ ಕಡಿಮೆ ಬೆಳವಣಿಗೆ ದಾಖಲಿಸಿವೆ.

14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಗಸ್ಟ್‌ನಲ್ಲಿ ಶೇ. 14ಕ್ಕಿಂತ ಕಡಿಮೆ ಜಿಎಸ್‌ಟಿ ಆದಾಯವನ್ನು ವರದಿ ಮಾಡಿದ್ದು, ಅಂಡಮಾನ್ ಮತ್ತು ನಿಕೋಬಾರ್ ಶೇ. -21, ಅರುಣಾಚಲ ಪ್ರದೇಶ ಶೇ. 11, ಅಸ್ಸಾಂ ಶೇ. 10, ಛತ್ತೀಸ್‌ಗಢ ಶೇ. 2, ದಮನ್ ಮತ್ತು ದಿಯು ಶೇ. 4, ಹಿಮಾಚಲ ಪ್ರದೇಶ ಶೇ. 1, ಜಮ್ಮು ಮತ್ತು ಕಾಶ್ಮೀರ ಶೇ. 11, ಲಕ್ಷದ್ವೀಪ ಶೇ. -73, ಮಣಿಪುರ ಶೇ. -22, ರಾಜಸ್ಥಾನ ಶೇ. 10, ಸಿಕ್ಕಿಂ ಶೇ. 13, ತೆಲಂಗಾಣ ಶೇ. 10, ತ್ರಿಪುರ ಮತ್ತು ಉತ್ತರಾಖಂಡನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ.