ಗರ್ಭಿಣಿಯೊಬ್ಬರು ಹಂದಿ ಜ್ವರಕ್ಕೆ (H1N1) ಬಲಿಯಾಗಿರುವ ಆಘಾತಕಾರಿ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭವಿಸಿದೆ.
ಹುಣಸೂರಿನ ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿ ನಾಯಕ ಎಂಬುವವರ ಪುತ್ರಿ ಛಾಯಾ (26) ಹಂದಿ ಜ್ವರಕ್ಕೆ ಬಲಿಯಾದ ಮಹಿಳೆ. ರಾಜ್ಯದಲ್ಲಿ ಹಂದಿ ಜ್ವರಕ್ಕೆ ಮೊದಲ ಬಲಿ ಇದಾಗಿದೆ.
ಅಸ್ವಸ್ಥಗೊಂಡಿದ್ದ ಛಾಯಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾರೆ.
ವೈದ್ಯ ಡಾ. ಹೆಚ್.ಕೆ ಪ್ರಸಾದ್‌ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಆಸ್ಪತ್ರೆಯಿಂದ ವರದಿ ತರಿಸಿಕೊಳ್ಳುತ್ತಿದ್ದು, ಹೆಚ್ಚಿನ ತನಿಖೆ ಮಾಡುಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದು ಮಳೆಗಾಲದಲ್ಲಿ ಹೆಚ್ಚು ಕಂಡುಬರುತ್ತದೆ. H1N1 ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ವಯಸ್ಸಾದವರಿಗೆ ಬೇಗ ತಗುಲುತ್ತದೆ. ಇವರುಗಳು ಹೃದಯ ಸಮಸ್ಯೆ, ಮತ್ತಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು.