ಗದಗ :ಮೇ.22: ದಾಖಲೆ ಇಲ್ಲದೇ ಕಾರಲ್ಲಿ ಕೋಟಿ ಕೋಟಿ ಹಣ ಸಾಗಾಟ ಮಾಡುತ್ತಿದ್ದ ಕಾರನ್ನು ಗದಗ ಜಿಲ್ಲೆಯ ನರಗುಂದ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ಸುಮಾರು ದಾಖಲೆ ಇಲ್ಲದ 1 ಕೋಟಿ 70 ಲಕ್ಷ ರೂಪಾಯಿ ಹಣ ಸಾಗಿಸುತ್ತಿದ್ದ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ನರಗುಂದ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ.


ಕ್ರೇಟಾ ಕಾರಲ್ಲಿ ಹಣ ಸಾಗಿಸ್ತಿದ್ದ ಆರೋಪಿಗಳನ್ನ, ವಿಕ್ರಂ ಸಿಂಗ್ ಹಾಗೂ ಚಾಲಕ ಶಿವಬಸಯ್ಯ ಹಿರೇಮಠ ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆಯಯಿಂದ ಹುಬ್ಬಳ್ಳಿ ಕಡೆಗೆ ಹಣ ಸಾಗಿಸ್ತಿದ್ದಾಗ ಹಣ ಸೀಜ್ ಮಾಡಲಾಗಿದೆ. ಗದಗ ಎಸ್ಪಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.