ಹಿರಿಯ ನಟ ಆಶಿಶ್ ವಿದ್ಯಾರ್ಥಿ ಆಸ್ಸಾಂನ ರೂಪಾಲಿ ಬರುವಾ ಜೊತೆಯಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನಟ ಆಶಿಶ್ ವಿದ್ಯಾರ್ಥಿ ಈ ಹಿಂದೆ ಶಕುಂತಲಾ ಬರುವಾ ಪುತ್ರಿ ರಾಜೋಶಿ ಬರುವಾರನ್ನು ವಿವಾಹವಾಗಿದ್ದರು.
ಆಶಿಶ್ ಮತ್ತು ರೂಪಾಲಿ ಕುಟುಂಬಸ್ಥರು ಹಾಗೂ ಆಪ್ತಸ್ನೇಹಿತರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ. ಮೂಲತಃ ಕೇರಳದವರಾದ ಆಶಿಶ್ ಶ್ವೇತ ವರ್ಣದ ಉಡುಪನ್ನು ಧರಿಸಿದ್ದರೆ ರೂಪಾಲಿ ಶ್ವೇತ ಹಾಗೂ ಬಂಗಾರ ಬಣ್ಣದ ಸೀರೆ ಧರಿಸಿದ್ದರು.
60ನೇ ವಯಸ್ಸಿನಲ್ಲಿ ಮತ್ತೊಮ್ಮೆ ಮದುವೆಯಾದ ಬಗ್ಗೆ ನನ್ನ ಜೀವನದ ಈ ಹಂತದಲ್ಲಿ ರೂಪಾಲಿಯನ್ನು ಮದುವೆಯಾಗೋದು ಅಸಮಾನ್ಯ ಭಾವನೆ . ಬೆಳಗ್ಗೆ ನಾವು ಕೋರ್ಟ್ ಮ್ಯಾರೇಜ್ ಆಗಿದ್ದೇವೆ. ಸಂಜೆ ಗೆಟ್ ಟು ಗೆದರ್ ಮಾಡುತ್ತೇವೆ ಎಂದು ಆಶಿಶ್ ಹೇಳಿದ್ದರು.