• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಕೊರಗಜ್ಜ”ಚಿತ್ರದ “ಗುಳಿಗ ಗುಳಿಗ” ಹಾಡಿನ ಭೋರ್ಗರೆತದ ಅಬ್ಬರ ಶುರು..!!

ಪ್ರತಿಧ್ವನಿ by ಪ್ರತಿಧ್ವನಿ
November 20, 2025
in Top Story, ಅಂಕಣ, ಇದೀಗ, ಕರ್ನಾಟಕ, ವಾಣಿಜ್ಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ADVERTISEMENT

ಜೀ಼ ಮ್ಯೂಜಿಕ್ ಇಂದಿನಿಂದ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯ ಅತ್ಯಂತ ನಿರೀಕ್ಷೆಯ “ಕೊರಗಜ್ಜ” ಚಿತ್ರದಲ್ಲಿ ಮೂಡಿ ಬರುವ ಕರಾವಳಿಯ ಉಗ್ರಭಯಂಕರ, ರಕ್ತದಾಹದ ದೈವ “ಗುಳಿಗ” ನ ಕುರಿತಾದ ಹಾಡನ್ನು ಜನಮನ್ನಣೆಯ “ಮರಳಿ ಮರೆಯಾಗಿಯಂತಹ ಗೀತೆಯ ಸಾಹಿತಿ- ನಿರ್ದೇಶಕ, ಸುಧೀರ್ ಅತ್ತಾವರ್ ರವರೇ ಬರೆದಿರುವ “ಗುಳಿಗ.,.ಗುಳಿಗ…ಗುಳಿಗ…ಗುಳಿಗ…ಗುಳಿಗ…ಗುಳಿಗ…ಘೋರ ಗುಳಿಗಾ…!” ಎನ್ನುವರ ಯಾಪ್ ಮಿಶ್ರಿತ ಹಾಡು ಇಂದು ಎಲ್ಲೆಡೆ ಭೋರ್ಗರೆಯಲಿದೆ…!

ದಕ್ಷಿಣ ಭಾರತದ ಖ್ಯಾತ ಸಂಗೀತಗಾರ ಗೋಪಿಸುಂದರ್ ರ ಸಂಗೀತಕ್ಕೆ ಖ್ಯಾತ ಬಾಲಿವುಡ್ ಗಾಯಕ ಜಾವೆದ್ ಆಲಿ ಜೊತೆ ಸುಧೀರ್ ಅತ್ತಾವರ್ ಹಾಡಿದ್ದಾರೆ. ಕೆಲವು ಭಾಗಗಳಲ್ಲಿ ಗೋಪಿ ಸುಂದರ್ ಕೂಡಾ ಧ್ವನಿ ನೀಡಿದ್ದಾರೆ. ನೆಲವುಲ್ಲ ಸಂಕೆಯ 24 ನೆಯ ಮಗನಾಗಿ ಹುಟ್ಟಿದ “ಗುಳಿಗ” ಹುಟ್ಟುವಾಗಲೇ ಭಯಂಕರ ಹಸಿವಿನಿಂದಾಗಿ ಸಾವಿರ ಕೋಳಿ,ಸಾವಿರ‌ ಕುದುರೆಯ ರಕ್ತ ಹೀರಿದರೂ ಹಸಿವು ನಿಲ್ಲದಿದ್ದಾಗ, ಶ್ರೀಮನ್ನಾರಾಯಣ ದೇವರ ಕಿರುಬೆರಳಿನಿಂದ ಅವರ ರಕ್ತವನ್ನೆಲ್ಲ ಹೀರಿದ… ಎನ್ನುವ ಜನಪದ ಕಥೆ ಗುಳಿಗನ ಹುಟ್ಟಿನ ಕುರಿತಾಗಿ ಇದೆ.


ಇಂತಹ ಘೋರ ಗುಳಿಗನ ಕೋಲ ಸೇವೆಯೂ ಘನ ಘೋರ ರೂಪದಲ್ಲಿ ತುಳುನಾಡಿನಾದ್ಯಂದ ಆಚರಿಸಲ್ಪಡುತ್ತಿದೆ.ಈ ಘೋರ ಗುಳಿಗನ ರಕ್ತ ಹೀರುವ ರುದ್ರ ನರ್ತನವನ್ನು ನೋಡಲಾಗದೆ ಭಯಭೀತಿಯಿಂದ ಅನೇಕರು ಕಣ್ಣು ಮುಚ್ಚಿಕೊಳ್ಳುವುದೂ ಇದೆ. ರಕ್ತ ದಾಹದಿಂದ ಎಲ್ಲೆಂದೆಲ್ಲಿ ಓಡುವ ಗುಳಿಗನನ್ನು ಹಿಡಿಯಲು ಹರಸಾಹಸ ಮಾಡುವ ದ್ರಶ್ಯವಂತೂ ಮೈ ಝುಂ ಎನಿಸುತ್ತದೆ.


ರುದ್ರಭಯಂಕರ ಗುಳಿಗದೈವ ಪಂಜುರ್ಲಿ ಜೊತೆ ಸೇರಿ “ಕೊರಗಜ್ಜ” ನನ್ನು ಭೇಟಿಯಾಗುವ ಸನ್ನಿವೇಶವು ಚಿತ್ರದಲ್ಲಿ ಮೂಡಿಬರಲಿದೆ. ಗುಳಿಗ ದೈವದ ರಣ ಭಯಂಕರ ನರ್ತನವನ್ನು ಹಾಲಿವುಡ್-ಬಾಲಿವುಡ್ ನ ಡಾನ್ಸರ್-ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ನಿರ್ವಹಿಸಿದ್ದು, ಗುಳಿಗ ದೈವದ  ರುದ್ರನರ್ತನದ ಕೊರಿಯೋಗ್ರಾಫಿ ಯನ್ನು ಸ್ವತಃ ಸೋಪರ್ಕರ್ ಮಾಡಿರುತ್ತಾರೆ.ಪಂಜುರ್ಲಿಯಾಗಿ ಸರ್ದಾರ್ ಸತ್ಯ ಅಭಿನಯಿಸಿರುವರು.

ಈ ಸನ್ನಿವೇಶವನ್ನು ಮಂಗಳೂರಿನ ಸೋಮೇಶ್ವರ ಕಡಲಕಿನಾರೆಯಲ್ಲಿ ನೂರು ಫೀಟ್ ನ ಎರಡು ಕ್ರೇನ್ ಗಳ ಸಹಾಯದಿಂದ 5 ಕ್ಯಾಮರಗಳ ಮುಖಾಂತರ ಚಿತ್ರೀಕರಿಸುವ ವೇಳೆ ರೌಡಿಗಳ ಗ್ಯಾಂಗ್ ಎರಡು ದಿನ ಧಾಳಿಮಾಡಿ, ಚಿತ್ರತಂಡಕ್ಕೆ ಅಪಾರವಾದ ನಷ್ಟ ಉಂಟುಮಾಡಿತ್ತು. ಎರಡನೆಯ ದಿನ ನಿರ್ಮಾಪಕ ತ್ರಿವಿಕ್ರಮರವರು ಸುಮಾರು 25 ಜನ ಬೌನ್ಸರ್ ಗಳನ್ನು ನೇಮಿಸಿದ್ದರು‌.ಆದರೆ ಚಿತ್ರೀಕರಣ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬೆದರಿಕೆಯ “ಕಾಲ್”ನಿಂದ ಬೌನ್ಸರ್ ಗಳೇ ಓಡಿಹೋಗಿ, ಮಂಗಳೂರಿನ ಬೌನ್ಸರ್ ಗಳು ತಮ್ಮ ಕರ್ತವ್ಯಕ್ಜೆ ಮಸಿಬಳಿದುಕೊಂಡರು..

ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಯವರು ಪರಿಪರಿಯಾಗಿ ರೌಡಿಗಳ ಮನ ಒಲಿಸಿದರೂ ಕೇಳದ ಗೂಂಡಗಳು ಶೂಟಿಂಗನ್ನು ಸ್ಥಗಿತಗೊಳಿಸಿ ವಿಕ್ರತಿ ಮೆರೆದಿದ್ದರು. ಆದರೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಎದೆಗುಂದದೆ, ಪೋಲೀಸರ ಸರ್ಪಗಾವಲಿನಲ್ಲಿ ಮೂರನೇ ಭಾರಿ ಮತ್ತೆ ಅದೇ ಸೋಮೇಶ್ವರ ಕಡಲ ಕಿನಾರೆಯಲ್ಲಿ ಗುಳಿಗ ಹಾಡಿನ ಚಿತ್ರೀಕರಣ ಮುಗಿಸುವಲ್ಲಿ ಯಶಸ್ವಿಯಾದರು. ಇವತ್ತು ಈ ಹಾಡು ಶ್ರೋತ್ರಗಳ ಮತ್ತು ವೀಕ್ಷಕರ ಮನತಣಿಸಲು ನುಗ್ಗಿ ಬರುತ್ತಿದೆ…!!

Tags: kannada cinemaKarnatakakoragajjasandalwood
Previous Post

Santhosh Lad: ಅಂಧರ ಬಾಳಿಗೆ ಹೊಸ ಬೆಳಕು ನೀಡಿದ ಸಂತೋಷ್‌ ಲಾಡ್‌ ಫೌಂಡೇಶನ್..!!

Next Post

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Related Posts

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ
ಸಿನಿಮಾ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

by ಪ್ರತಿಧ್ವನಿ
April 25, 2026
0

ಕನ್ನಡ ಚಿತ್ರರಂಗದ ಎರಡು ಪ್ರಮುಖ ಕುಟುಂಬಗಳಾದ ದರ್ಶನ್ ತೂಗುದೀಪ ಮತ್ತು ಅರ್ಜುನ್ ಸರ್ಜಾ ಅವರ ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 25, 2026
ಹಣ ಕಡಿತಕ್ಕೂ ಮುನ್ನ ಎಚ್ಚರಿಕೆ ಕಡ್ಡಾಯ: ಆಟೋ-ಡೆಬಿಟ್ ನಿಯಮದಲ್ಲಿ ಆರ್‌ಬಿಐ ದೊಡ್ಡ ಬದಲಾವಣೆ

ಹಣ ಕಡಿತಕ್ಕೂ ಮುನ್ನ ಎಚ್ಚರಿಕೆ ಕಡ್ಡಾಯ: ಆಟೋ-ಡೆಬಿಟ್ ನಿಯಮದಲ್ಲಿ ಆರ್‌ಬಿಐ ದೊಡ್ಡ ಬದಲಾವಣೆ

April 25, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
Next Post

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada