![](https://pratidhvani.com/wp-content/uploads/2024/09/n633004784172762836420589975b1a7687d98d29ab7fb36c93ecb4ade499b46f3d98798cd0791a2f8b6b2b.jpg)
ಕೋಲಾರದಲ್ಲಿ ಸೇನಾ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂ ಸ್ಪರ್ಶ ಮಾಡಿದೆ. ಕೋಲಾರ ಜಿಲ್ಲೆ ಬಂಗಾರಪೇಟೆಯ ದೊಡ್ಡೂರು ಕೆರೆಯಲ್ಲಿ ಭೂ ಸ್ಪರ್ಶ ಮಾಡಿದೆ. ಆ ಬಳಿಕ ತಾಂತ್ರಿಕ ದೋಷ ಸರಿಪಡಿಸಲು ಮತ್ತೊಂದು ಹೆಲಿಕಾಪ್ಟರ್ನಲ್ಲಿ ಆಗಮಿಸಿದ ವಾಯುಸೇನೆ ಸಿಬ್ಬಂದಿ ಸಮಸ್ಯೆ ಸರಿಪಡಿಸಿದ್ದಾರೆ.
![](https://pratidhvani.com/wp-content/uploads/2024/09/1002536565-1024x462.jpg)
ಹೆಲಿಕಾಪ್ಟರ್ ಹಾರಾಟದ ವೇಳೆ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಭಾರತೀಯ ವಾಯಸೇನೆಗೆ ಸೇರಿದ ಹೆಲಿಕಾಪ್ಟರ್, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲ. ಹೆಲಿಕಾಪ್ಟರ್ ಸರಿಪಡಿಸಲು ಅಗತ್ಯ ಸಲಕರಣೆ, ಸಿಬ್ಬಂದಿಯನ್ನು ಮತ್ತೊಂದು ಹೆಲಿಕಾಪ್ಟರ್ನಲ್ಲಿ ಒದಗಿಸಲಾಗಿದೆ.
ಒರ್ವ ಮಹಿಳಾ ಪೈಲಟ್ ಸೇರಿದಂತೆ, ಮೂವರು ಸುರಕ್ಷಿತರಾಗಿದ್ದಾರೆ. ಹೆಲಿಕಾಪ್ಟರ್ ತರಬೇತಿ ವೇಳೆ ಕೋಲಾರ, ಬಂಗಾರಪೇಟೆ ಕಡೆ ಹಾರಾಟ ನಡೆಸುತ್ತಿದ್ದ ವೇಳೆ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಹೆಲಿಕಾಪ್ಟರ್ ನೋಡಲು ಸ್ಥಳೀಯ ಜನರು ಜಮಾಯಿಸಿದ್ದರು. ಸ್ಥಳದಲ್ಲಿ ಬಂಗಾರಪೇಟೆ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ.