ಮೂರು ದಿನಗಳ ಹಿಂದೆ ಭಾರೀ ಅಪಘಾತದಿಂದ ಪಾರಾಗಿದ್ದು, ಅದು ಇನ್ನೂ ತನ್ನನ್ನು ಆಘಾತಗೊಳಿಸುತ್ತಿದೆ ಎಂದು ಸಂಗೀತ ಸಂಯೋಜಕ ಮತ್ತು ಗಾಯಕ ಎ.ಆರ್. ರೆಹಮಾನ್ ಪುತ್ರ ಎ.ಆರ್. ಅಮೀನ್ ಹೇಳಿದ್ದಾರೆ. ಸಂಗೀತ ನುಡಿಸುತ್ತಿದ್ದ ಸೆಟ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಅಮೀನ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ತಾನು ಪ್ರದರ್ಶನ ನೀಡುತ್ತಿದ್ದಾಗ ದೀಪಗಳು ಮತ್ತು ಕಟ್ಟಲಾಗಿದ್ದ ಇತರ ವಸ್ತುಗಳು ಮೇಲಿನಿಂದ ಬಿದ್ದವು ಎಂದು ಪೋಸ್ಟ್‌ನಲ್ಲಿ ಅಮೀನ್ ಹೇಳಿದ್ದಾರೆ. ತನಗೆ ಯಾವುದೇ ಗಾಯವಾಗಿಲ್ಲ, ಹಾಗೂ ಸಂಪೂರ್ಣ ಪಾರಾಗಿದ್ದೇನೆ, ಆದರೆ ಘಟನೆಯಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ತನ್ನನ್ನು ಸುರಕ್ಷಿತವಾಗಿರಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸಿದ ಅಮೀನ್, “ನಾನು ಇಂದು ಸುರಕ್ಷಿತವಾಗಿ ಮತ್ತು ಜೀವಂತವಾಗಿರುವ ಸರ್ವಶಕ್ತ, ನನ್ನ ಪೋಷಕರು, ನನ್ನ ಕುಟುಂಬ, ಹಿತೈಷಿಗಳು ಮತ್ತು ನನ್ನ ಆಧ್ಯಾತ್ಮಿಕ ಗುರುವಿಗೆ ನಾನು ಕೃತಜ್ಞನಾಗಿದ್ದೇನೆ.” ಎಂದು ಬರೆದಿದ್ದಾರೆ.






