ಕರ್ನಾಟಕ ರತ್ನ ಪವರ್ಸ್ಟಾರ್ ಡಾ || ಪಿನೀತ್ ರಾಜ್ಕುಮಾರ್ ಫೋಟೋ ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್ಕಪ್ 2022ನಲ್ಲಿ ರಾರಜಿಸಿದೆ.
ದಕ್ಷಿಣ ಜಿಲ್ಲೆಯ ಪುತ್ತೂರು ಮೂಲದ ಅನಿವಾಸಿ ಕನ್ನಡಿಗ ಖಾಲಿದ್ ಫುಟ್ಬಾಲ್ ಪಂದ್ಯದ ವೇಳೆ ತಮ್ಮ ನೆಚ್ಚಿನ ನಟನ ಫೋಟೋ ಹಿಡಿದು ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಖಾಲಿದ್ ನಾನು ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿ ಅವರ ಸಮಾಜಮುಖಿ ಕೆಲಸಗಳಿಂದ ನಾನು ಪ್ರಭಾವಿತನಾಗಿದ್ದೇನೆ ಹೀಗಾಗಿ ಫಿಫಾ ವಿಶ್ವಕಪ್ ಪಂದ್ಯದ ವೇಳೆ ಅವರ ಫೋಟೋವನ್ನ ಪ್ರದರ್ಶಿಸಿದೆ ಎಂದು ತಿಳಿಸಿದ್ದಾರೆ.