• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಗೆಸ್ಟ್ ಹೌಸ್ ಪೀಠೋಪಕರಣಗಳನ್ನ ಹಿಂದಿರುಗಿಸುವಂತೆ ರೋಹಿಣಿ ಸಿಂಧೂರಿಗೆ ATI ಪತ್ರ

Any Mind by Any Mind
December 5, 2022
in ಕರ್ನಾಟಕ
0
ಗೆಸ್ಟ್ ಹೌಸ್ ಪೀಠೋಪಕರಣಗಳನ್ನ ಹಿಂದಿರುಗಿಸುವಂತೆ ರೋಹಿಣಿ ಸಿಂಧೂರಿಗೆ ATI ಪತ್ರ
Share on WhatsAppShare on FacebookShare on Telegram

IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ. ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನಿಯುಕ್ತಿಯಾಗಿ ಬಂದಾಗ 40 ದಿನಗಳ ಕಾಲ ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಲ್ಲಿ ಉಳಿದು ಕೊಂಡಿದ್ರು. ಬಳಿಕ ಡಿಸಿ ನಿವಾಸಕ್ಕೆ ರೋಹಿಣಿ ಸಿಂಧೂರಿ ಶಿಫ್ಟ್ ಆಗುವಾಗ ಆಡಳಿತ ತರಬೇತಿ ಕೇಂದ್ರ ಅತಿಥಿ ಗೃಹದಿಂದ 12 ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ADVERTISEMENT

ಸಾಮಾಗ್ರಿಗಳ ವಾಪಸ್ಗೆ 2020ರಿಂದ ATI ಬರೆದಿರುವ 3 ಪತ್ರಕ್ಕೆ ರೋಹಿಣಿ ಸಿಂಧೂರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಮೈಸೂರು ಡಿಸಿಗೆ ATI ಅಧಿಕಾರಿಗಳು ಮತ್ತೊಂದು ಪತ್ರ ಬರೆದಿದ್ದು, ಟೆಲಿಫೋನ್ ಟೇಬಲ್, ಬೆತ್ತದ ಚೇರ್ ಸೇರಿ 12 ಸಾಮಾಗ್ರಿ DC ವಸತಿ ಗೃಹದಲ್ಲಿ ಇದ್ದರೆ ವಾಪಸ್ ಕೊಡಿ ಎಂದು ಪತ್ರ ಬರೆದಿದ್ದಾರೆ.

ATI ಬರೆದಿರೋ ಪತ್ರದಲ್ಲಿ ಏನಿದೆ..?

ಮೈಸೂರು ಡಿಸಿ ಯಾಗಿ ರೋಹಿಣಿ ಸಿಂಧೂರಿ ನಿಯುಕ್ತಿಯಾದಾಗ ATI ಸಂಸ್ಥೆಯ ಗೆಸ್ಟ್ ಹೌಸ್ನಲ್ಲಿ ಉಳಿದುಕೊಂಡಿದ್ರು. ಇಲ್ಲಿಂದ ಅಧಿಕೃತ ನಿವಾಸಕ್ಕೆ ಶಿಫ್ಟ್ ಆಗಬೇಕಾದ್ರೆ ಕೆಲವೊಂದು ವಸ್ತುಗಳನ್ನ ತೆಗೆದುಕೊಂಡು ಹೋಗಿರುತ್ತಾರೆ ಅದರಲ್ಲಿ ಪ್ರಮುಖವಾಗಿ ಟೆಲಿಫೋನ್ ಟೇಬಲ್, ಬೆತ್ತದ ಚೇರ್ , ಮೈಕ್ರೋ ವೆವನ್, ಮಂಚ, ಹಾಸಿಗೆ, ಯೋಗಾ ಮ್ಯಾಟ್ ಒಳಗೊಂಡಿದೆ. ಒಟ್ಟು 12 ಸಾಮಾಗ್ರಿಗಳನ್ನ ಪಡೆದಿರುತ್ತಾರೆ. ಇವೆಲ್ಲವೂ DC ವಸತಿ ಗೃಹದಲ್ಲಿ ಇದ್ದರೆ ವಾಪಸ್ ಕೊಡಿ ಎಂದು ಕೇಳಿದ್ದಾರೆ.

ಸಾಮಾಗ್ರಿಗಳ ವಾಪಸ್ಗೆ 2020ರಿಂದ ATI ಬರೆದಿರುವ 3 ಪತ್ರಕ್ಕೆ ರೋಹಿಣಿ ಸಿಂಧೂರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಮೈಸೂರು ಡಿಸಿಗೆ ATI ಅಧಿಕಾರಿಗಳು ಮತ್ತೊಂದು ಪತ್ರ ಬರೆದಿದ್ದು, ನೂತನ ಡಿಸಿ ಕೆ.ವಿ. ರಾಜೇಂದ್ರ ಉತ್ತರ ಕೊಡಬೇಕಾಗಿದೆ. ರೋಹಿಣಿ ಸಿಂಧೂರಿ ಮೈಸೂರಲ್ಲಿ ಇದ್ದಷ್ಟು ದಿನ ಎಲ್ಲಾ ವಸ್ತುಗಳನ್ನ ಉಪಯೋಗಿಸಿದ್ದು , ಈಗ ಆರೋಪ ಬಂದರೂ ಯಾವುದೇ ಪ್ರತಿಕ್ರಿಯೆ ನೀಡದಿರೋದು ಎಲ್ಲರನ್ನ ಆಶ್ಚರ್ಯಗೊಳಿಸಿದೆ.

ಒಂದಿಲ್ಲೊಂದು ವಿಚಾರಗಳಲ್ಲಿ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಗೃಹ ಉಪಯೋಗಿ ವಸ್ತುಗಳ ಬಳಕೆ ವಿಚಾರದಲ್ಲೂ ವಿವಾದ ಸೃಷ್ಟಿಕೊಂಡಿರುವುದು ವಿಪರ್ಯಾಸವಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ 2020 ಅಕ್ಟೋಬರ್ನಲ್ಲಿ ಮೈಸೂರಿಗೆ ಆಗಮಿಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆಡಳಿತ ತರಭೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಬಟ್ಟೆ ಬ್ಯಾಗ್ ಖರೀದಿ ಹಗರಣದಲ್ಲಿ ಶಾಸಕ ಸಾ.ರಾ ಮಹೇಶ್ ವಿರುದ್ಧ ಸಿಡಿದು ಬಾರಿ ಸದ್ದು ಮಾಡಿದ್ದ ರೋಹಿಣಿ ಸಿಂಧೂರಿ ಕಣ್ಣೀರಿಟ್ಟು ಮೈಸೂರಿನಿಂದ ಹೊರಟಿದ್ರು.

ಕರೋನಾ ಸಂಧರ್ಭದಲ್ಲಿ ಹಣಕಾಸು ದುರ್ಬಳಕೆ ಆರೋಪ ಹೊತ್ತಿದ್ದ ರೋಹಿಣಿ ಸಿಂಧೂರಿ ವಿರುದ್ದ ಇದೀಗ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳೇ ಪತ್ರ ಬರೆದಿದ್ದು, ತಮ್ಮ ಸಂಸ್ಥೆಯಿಂದ ಹೊತ್ತೊಯ್ದ ವಸ್ತುಗಳನ್ನ ಮರಳಿ ನೀಡುವಂತೆ ಕೇಳಿಕೊಂಡಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಬಲವಂತದ ಮತಾಂತರ ಸಂವಿಧಾನಕ್ಕೆ ವಿರುದ್ದವಾದದ್ದು : ಸುಪ್ರೀಂ ಕೋರ್ಟ್‌

Next Post

ಫಿಫಾ ವಿಶ್ವಕಪ್‌ನಲ್ಲಿ ರಾರಾಜಿಸಿದ ಅಪ್ಪು ಫೋಟೋ

Related Posts

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?
Top Story

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ನಟಿಗೆ ನಿರ್ಮಾಪಕರೊಬ್ಬರು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಧಾರವಾಹಿಯಲ್ಲಿ ನಟಿಸಿದ ನಟಿಗೆ ಸಂಭಾವನೆ ನೀಡದ ನಿರ್ಮಾಪಕರಿಂದ ವಂಚನೆ...

Read moreDetails
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
Next Post
ಫಿಫಾ ವಿಶ್ವಕಪ್‌ನಲ್ಲಿ ರಾರಾಜಿಸಿದ ಅಪ್ಪು ಫೋಟೋ

ಫಿಫಾ ವಿಶ್ವಕಪ್‌ನಲ್ಲಿ ರಾರಾಜಿಸಿದ ಅಪ್ಪು ಫೋಟೋ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada