ದೇಹದಲ್ಲಿ ಹಿಮೋಗ್ಲೋಬಿನ್ ಅನ್ನುವುದು ಬಹಳ ಮುಖ್ಯ. ರಕ್ತದಲ್ಲಿ ಕಂಡುಬರುವಂತಹ ಒಂದು ಪ್ರಮುಖ ಅಂಶವೆಂದರೆ ಹಿಮೋಗ್ಲೋಬಿನ್, ಹಿಮೋಗ್ಲೋಬಿನ್ ಕಡಿಮೆ ಆದಲ್ಲಿ ತಲೆಸುತ್ತು, ಕಣ್ಮುಂಜಾಗುವುದು, ಡಯಾಬಿಟಿಸ್ ಅಲ್ಲಿ ವೇರಿಯೇಷನ್ ಕಂಡುಬರುತ್ತದೆ ಬಿಪಿ ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ..ಹಾಗಂತ ಹಿಮೋಗ್ಲೋಬಿನ್ ಹೆಚ್ಚಾಗುವುದು ಕೂಡ ಒಳ್ಳೆಯದಲ್ಲ ಇದರಿಂದ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಂಡಿತ.

ಡಿಹೈಡ್ರೇಶನ್
ದೇಹದಲ್ಲಿ ರಕ್ತದ ಪ್ರಮಾಣವು ಕಡಿಮೆಯಾದಾಗ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು.ಇದರಿಂದ ದೇಹ ಡಿಹೈಡ್ರೇಟ್ ಆಗುತ್ತದೆ..ಹಾಗೂ ಭಯಾರಿಕೆ ಹೆಚ್ಚಾಗುತ್ತದೆ, ಸುಸ್ತು ಕಾಡುತ್ತದೆ.
ಬ್ಲಡ್ ಕ್ಲಾಟ್
ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾದಾಗ ,ರಕ್ತವನ್ನು ಹೆಚ್ಚು ಸ್ನಿಗ್ಧವಾಗಿಸುತ್ತದೆ ಮತ್ತು ಇದರಿಂದ ರಕ್ತ ಹೆಪ್ಪುಗಟ್ಟುತ್ತದೆ ,ಮತ್ತು ಆರೋಗ್ಯದ ಮೇಲೆ ತೊಂದರೆಯನ್ನು ಹೆಚ್ಚಿಸುತ್ತದೆ.
ಹೃದಯಕ್ಕೆ ಸಂಬಂಧಿಸಿದ ಕಾಯಿಲೆ
ಹಿಮೋಗ್ಲೋಬಿನ್ ಮಟ್ಟ ಹೆಚ್ಚಾದ್ರೆ ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ..ಹಾಗಾಗಿ ಹಿಮೋಗ್ಲೋಬಿನ್ ನಾರ್ಮಲ್ ಆಗಿ ಇರುವುದು ಉತ್ತಮ.

ಮೂತ್ರಪಿಂಡದ ಹಾನಿ
ಹೆಚ್ಚಿನ ಹಿಮೋಗ್ಲೋಬಿನ್ ಮಟ್ಟ ,ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನುಂಟುಮಾಡಬಹುದು, ಇದು ಮೂತ್ರಪಿಂಡದ ಹಾನಿ ಮತ್ತು ಕಾಯಿಲೆಗೆ ಕಾರಣವಾಗಬಹುದು.