ಮುಖದ ಅಂದವನ ಹೆಚ್ಚಿಸುವಲ್ಲಿ ಕಣ್ಣಿನ ಪಾತ್ರ ಮಹತ್ವದ್ದು. ಕಣ್ಣನ್ನ ನೋಡ್ತಾ ಇದ್ದಂತೆ ಮತ್ತೊಬ್ಬರ ಒಳ ಮನಸು ಅರ್ಥವಾಗುತ್ತದೆ. ಕೆಲವರಿಗೆ ತಮ್ಮ ಮುಖಕ್ಕಿಂತ ಕಣ್ಣುಗಳು ಅದ್ಭುತವಾಗಿರುತ್ತವೆ. ಹೀಗೆ ಕಣ್ಣಿನ ಅಂದವನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಹೆಚ್ಚು ಜನ ಹೆಣ್ಣುಮಕ್ಕಳು ಕಾಡಿಗೆಯನ್ನು ಹಚ್ಚಿಕೊಳ್ಳುತ್ತಾರೆ.ಆದ್ರೆ ಪ್ರತಿದಿನ ಕಾಜಲ್ ಬಳಸುವುದರಿಂದ ಕಣ್ಣಿಗೆ ಹಾನಿ..

- ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಕಾಡಿಗೆಯಲ್ಲಿ ಕೆಮಿಕಲ್ಸ್ ನ ಹೆಚ್ಚು ಬಳಸಿರುತ್ತಾರೆ,ಇದ್ರಿಂದ ಕಣ್ಣಿಗೆ ತುಂಬಾ ಹಾನಿಯಾಗುತ್ತದೆ.
- ಪಾದರಸದ ಸೀಸ ಮತ್ತು ಪ್ಯಾರಾಬೆನ್ ಗಳಂತಹ ಅಂಶಗಳನ್ನು ಕಾಜಲ್ ನಲ್ಲಿ ಬಳಸಲಾಗುತ್ತದೇ,ಇದು ಕಣ್ಣುಗಳಿಗೆ ಕಂಜಕ್ಟಿವೈಟಿಸ್ ಸಮಸ್ಯೆಯನ್ನು ಆಗಬಹುದು..ಪ್ರತಿದಿನ ಬಳಸಿದ್ರೆ ಕಣ್ಣಿನ ಅಲರ್ಜಿ ಆಗುತ್ತದೆ.
- ಕಾಡಿಗೆಯನ್ನು ಹೆಚ್ಚು ಬಳಸುವುದರಿಂದ ಕಣ್ಣಿನ ಉರಿ ಹೆಚ್ಚಾಗುತ್ತದೇ..ಕಣ್ಣುಗಳು ಕೆಂಪಾಗುವ ಲಕ್ಷಣಗಳು ಕಂಡು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ..
- ಹೆಚ್ಚು ಹೊತ್ತು ಕಾಡಿಗೆಯನ್ನು ಹಚ್ಚಿ ಬಿಡುವುದರಿಂದ, ತುರಿಕೆ ಶುರುವಾಗುತ್ತದೆ..ಕಿರಿ ಕಿರಿ ಉಂಟಾಗುತ್ತದೆ..
ಕೆಮಿಕಲ್ಸ್ ಇಲ್ಲದೆ ಮನೆಯಲ್ಲಿ ಸಿಂಪಲ್ ಆಗಿ ಕಾಜಲ್ ಅನ್ನು ತಯಾರಿಸೋದು ಹೀಗೇ..ಒಂದು ಬಟ್ಟಲಿಗೆ ತುಪ್ಪವನ್ನು ಹಾಕಿ..ನಂತರ ಎರಡು ದೀಪವನ್ನು ಹಚ್ಚಿ ಅದರ ಮೇಲೆ ತುಪ್ಪ ಹಾಕಿದ ಬಟ್ಟಲನ್ನು 20 ನಿಮಿಷಗಳ ಕಾಲ ಹಾಗೆ ಇಡೀ..ನಂತರ ಆ ಬಟ್ಟಲಲ್ಲಿ ಕಪ್ಪಾಗಿರುವ ಭಾಗವನ್ನು ಸ್ಪೂನ್ ನಿಂದ ತೆಗೆದು ಒಂದು ಡಬ್ಬಿಗೆ ಹಾಕಿ ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನೆಯನ್ನು ಮಿಶ್ರಣ ಮಾಡಿ ಬಳಸುವುದು ಉತ್ತಮ..
