ಕರೋನಾ ವೈರಸ್ ವಿರುದ್ಧ ಜಗತ್ತಿನಾದ್ಯಂತ ಕೋಟ್ಯಂತರ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ, ಕೋವಿಡ್ -19 ಲಸಿಕೆಗಳ ಪರಿಣಾಮಕಾರಿತ್ವವು ಕಡಿಮೆಯಾಗುತ್ತಿದೆ ಎಂದು ಇತ್ತೀಚಿನ ಮಾಹಿತಿಯು ಸೂಚಿಸುತ್ತದೆ. ಇದಕ್ಕೆ ಸಂಭವನೀಯ ಕಾರಣಗಳನ್ನು ಮತ್ತು ಮೂರನೇ ಡೋಸ್‌ನ ಪರಿಣಾಮಗಳನ್ನು ಈ ಲೇಖನದಲ್ಲಿ ಪರಿಶೋಧಿಸಲಾಗಿದೆ. ಕೋವಿಡ್ ಸೋಂಕುಗಳನ್ನು ತಡೆಗಟ್ಟುವಲ್ಲಿ ಲಸಿಕೆ ಪರಿಣಾಮಕಾರಿತ್ವ ಕಡಿಮೆಯಾಗಿರುವುದನ್ನು ಇಸ್ರೇಲ್, ಯುಕೆ ಮತ್ತು ಯುಎಸ್‌ನಲ್ಲಿ ಸಂಗ್ರಹಿಸಿದ ಇತ್ತೀಚಿನ ಮಾಹಿತಿ ತೋರಿಸುತ್ತದೆ. ಕೋವಿಡ್ – 19 ಸೋಂಕಿನ ಲಕ್ಷಣಗಳುಳ್ಳವರ ಮೇಲೆ ಸಂಪೂರ್ಣ ಲಸಿಕೆ ಹಾಕಿಸಿಕೊಂಡವರ ಮೇಲೆ ಬೀರಿರುವ ಪರಿಣಾಮವೇನು.? ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಲಸಿಕೆ ಪರಿಣಾಮ ಬೀರಿದೆಯೇ ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ.
ಆಗಸ್ಟ್ 31,2021ರ ವೇಳೆಗೆ ಇಸ್ರೇಲ್‌ನಲ್ಲಿ ಎಂಆರ್‌ಎನ್‌ಎ ಲಸಿಕೆಯನ್ನು ಶೇ. 60.6 ಜನರಿಗೆ ಎರಡು ಡೋಸ್ ನೀಡಲಾಗಿದೆ. ಈ ಪೈಕಿ ಕೋವಿಡ್ – 19 ಸೋಂಕಿನ ಲಕ್ಷಣ ಗಳನ್ನು ಹೊಂದಿದ್ದವರ ಮೇಲೆ ಲಸಿಕೆಯ ಪರಿಣಾಮಕಾರಿತ್ವ ಆರಂಭದಲ್ಲಿ ಶೇ. 95ರಷ್ಟಿತ್ತಾದರೂ, ಇತ್ತೀಚಿನ ಮಾಹಿತಿ ಪ್ರಕಾರ ಲಸಿಕೆಯ ಪರಿಣಾಮಕಾರಿತ್ವ ಶೇ. 40.5ಕ್ಕೆ ಕುಸಿದಿದೆ. ಆದರೆ, ಸಮಾಧಾನಕರವಾದ ಅಂಶವೆಂದರೆ ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಲಸಿಕೆಯ ಪರಿಣಾಮಕಾರಿತ್ವ ಅಷ್ಟು ಕಡಿಮೆಯಾಗಿಲ್ಲ. ಆರಂಭದಲ್ಲಿ ಇದರ ಚೇತರಿಕೆಯ ಪರಿಣಾಮ ಶೇ. 89 ಇದ್ದಿದ್ದು, ಇತ್ತೀಚಿನ ಮಾಹಿತಿ ಪ್ರಕಾರ ಶೇ. 88ಕ್ಕೆ ಅಂದರೆ ಶೇ. 1 ರಷ್ಟು ಮಾತ್ರ ಕುಸಿತ ಕಂಡಿದೆ. ಜೂನ್ 20, 2021 ರಿಂದ ಜುಲೈ 17, 2021ರವರೆಗೆ ಈ ಅಧ್ಯಯನ ನಡೆಸಲಾಗಿದೆ.
ಇನ್ನು, ಆಗಸ್ಟ್ 31,2021ರ ವೇಳೆಗೆ ಅಮೆರಿಕದಲ್ಲಿ ಎಂಆರ್‌ಎನ್‌ಎ ಲಸಿಕೆಯನ್ನು ಶೇ. 53.0 ಜನರಿಗೆ ಎರಡು ಡೋಸ್ ನೀಡಲಾಗಿದೆ. ಈ ಪೈಕಿ ಕೋವಿಡ್ – 19 ಸೋಂಕಿನ ಲಕ್ಷಣಗಳನ್ನು ಹೊಂದಿದ್ದವರ ಮೇಲೆ ಲಸಿಕೆಯ ಪರಿಣಾಮಕಾರಿತ್ವ ಆರಂಭದಲ್ಲಿ ಶೇ. 90ರಷ್ಟಿತ್ತಾದರೂ, ಇತ್ತೀಚಿನ ಮಾಹಿತಿ ಪ್ರಕಾರ ಲಸಿಕೆಯಿಂದ ಚೇತರಿಕೆಯಾಗಿರುವ ಪರಿಣಾಮಕಾರಿತ್ವ ಶೇ. 42 ರಿಂದ ಶೇ. 80ರಷ್ಟಿದೆ ಎಂದು ಕಂಡುಬಂದಿದೆ.
ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಶೇ. 90ರಷ್ಟು ಜನರು ಆರಂಭದಲ್ಲಿ ಚೇತರಿಕೆ ಕಂಡಿದ್ದರು. ಇತ್ತೀಚಿನ ಮಾಹಿತಿ ಪ್ರಕಾರ ಇದರ ಪ್ರಮಾಣ ಶೇ. 75 ರಿಂದ ಶೇ. 90 ಎಂದು ತಿಳಿದುಬಂದಿದೆ. ಜುಲೈ 2021ರವರೆಗೆ ನಡೆದ ಅಧ್ಯಯನದ ಪ್ರಕಾರ ಲಸಿಕೆಯ ಪರಿಣಾಮಕಾರಿತ್ವ ಕುಸಿದಿದೆ.
ಇದೇ ರೀತಿ, ಆಗಸ್ಟ್ 31,2021ರ ವೇಳೆಗೆ ಯುಕೆಯಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಹಾಕಿಸಿಕೊಂಡ ಶೇಕಡಾವಾರು ಸಂಖ್ಯೆ ಶೇ. 64.4. ಈ ಪೈಕಿ ಕೋವಿಡ್ – 19 ಸೋಂಕಿನ ಲಕ್ಷಣಗಳನ್ನು ಹೊಂದಿದ್ದವರ ಮೇಲೆ ಲಸಿಕೆಯ ಪರಿಣಾಮಕಾರಿತ್ವ ಆರಂಭದಲ್ಲಿ ಶೇ. 97ರಷ್ಟಿತ್ತಾದರೂ, ಇತ್ತೀಚಿನ ಮಾಹಿತಿ ಪ್ರಕಾರ ಲಸಿಕೆಯ ಪರಿಣಾಮಕಾರಿತ್ವ ಶೇ. 71 – 84 ಎಂದು ಕಂಡುಬಂದಿದೆ. ಇನ್ನೊಂದೆಡೆ, ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಕೋವಿಡ್ ಸೋಂಕಿತರು ಶೇ. 92ರಷ್ಟು ಜನರು ಆರಂಭದಲ್ಲಿ ಚೇತರಿಕೆ ಕಂಡಿದ್ದರು.
ಇತ್ತೀಚಿನ ಮಾಹಿತಿ ಪ್ರಕಾರ ಇದರ ಪ್ರಮಾಣ ಶೇ. 94ಕ್ಕೆ ಹೆಚ್ಚಳವಾಗಿದೆ. ಇಸ್ರೇಲ್, ಅಮೆರಿಕದಲ್ಲಿ ಲಸಿಕೆಯ ಪರಿಣಾಮಕಾರಿತ್ವ ಆಸ್ಪತ್ರೆಗೆ ದಾಖಲಾಗುವುದರ ಮೇಲೂ ಸ್ವಲ್ಪ ಕಡಿಮೆಯಾಗಿದ್ದರೆ, ಯುಕೆಯಲ್ಲಿ ಹೆಚ್ಚಾಗಿರುವುದು ಇನ್ನೊಂದು ಸಮಾಧಾನಕರ ಅಂಶ. ಇತ್ತೀಚೆಗೆ ನಡೆದ ಎರಡು ಅಧ್ಯಯನಗಳ ವರದಿ ಆಧರಿಸಿ ಯುಕೆ ಈ ಮಾಹಿತಿ ನೀಡಿದೆ.
ಈ ಡೇಟಾ ಸೋಂಕಿನ ವಿರುದ್ಧ ರಕ್ಷಣೆ (ರೋಗಲಕ್ಷಣದ ಕೋವಿಡ್ ವಿರುದ್ಧದ ಪರಿಣಾಮಕಾರಿತ್ವ) ವಿಶೇಷವಾಗಿ ಇಸ್ರೇಲ್ ಮತ್ತು ಅಮೆರಿಕದಲ್ಲಿ ಕುಸಿತ ಕಂಡಿರುವುದನ್ನು ತೋರಿಸುತ್ತದೆ. ಆದರೂ, ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಲಸಿಕೆ ಪ್ರಭಾವ ಬೀರಿದ್ದು, ಲಸಿಕೆಯ ಪರಿಣಾಮಕಾರಿತ್ವ ಹೆಚ್ಚೇನೂ ಕುಸಿದಿಲ್ಲ. ಯುಕೆಯಲ್ಲಿ ಈ ಪರಿಣಾಮಕಾರಿತ್ವ ಹೆಚ್ಚಾಗಿದೆ. ಇನ್ನು, ಇಸ್ರೇಲ್ ಅಧ್ಯಯನವು 2021ರ ಆರಂಭದಲ್ಲಿ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳಿಗೂ ನಂತರ ಲಸಿಕೆ ಹಾಕಿಸಿಕೊಂಡ ಜನರಿಗೆ ಹೋಲಿಸಿದರೆ ಆರಂಭದಲ್ಲಿ ಲಸಿಕೆ ಹಾಕಿಸಿಕೊಂಡವರೇ.
ಲಸಿಕೆ ಪರಿಣಾಮಕಾರಿತ್ವ ಕುಸಿಯುತ್ತಿರುವುದು ಅಪಾಯವೇ.!?
ಇಲ್ಲ, ಏಕೆಂದರೆ ಲಸಿಕೆ ಪಡೆದವರಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ. ಅಂದರೆ, ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ರಕ್ಷಣೆ ಇನ್ನೂ ಹೆಚ್ಚಾಗಿದೆ. ತಾತ್ವಿಕವಾಗಿ, ಸಾರ್ವಜನಿಕ ಲಸಿಕೆ ಕಾರ್ಯಕ್ರಮವು ಜನಸಂಖ್ಯೆಯನ್ನು ಸೋಂಕು, ಪ್ರಸರಣ ಮತ್ತು ಆಸ್ಪತ್ರೆಗೆ (ಮತ್ತು ನಂತರದ ಮರಣ) ದಾಖಲಾಗುವುದರ ವಿರುದ್ಧ ರಕ್ಷಿಸಬೇಕು. ಆರಂಭಿಕ ಲಸಿಕೆ ಪರಿಣಾಮಕಾರಿತ್ವದ ದತ್ತಾಂಶವು ಸೋಂಕು ಮತ್ತು ಆಸ್ಪತ್ರೆಯ ವಿರುದ್ಧ ಹೆಚ್ಚಿನ ಪರಿಣಾಮಕಾರಿತ್ವವನ್ನು ತೋರಿಸಿದೆ. ಸೋಂಕು ಮತ್ತು ಪ್ರಸರಣದ ನಡುವಿನ ಸಂಬಂಧವು ಸ್ವಯಂಚಾಲಿತವಾಗಿಲ್ಲ ಮತ್ತು ಅದನ್ನು ಸಾಬೀತುಪಡಿಸಬೇಕಾಗಿದೆ.
ಕೆಲವು ಪ್ರಸ್ತುತ ಕ್ಲಿನಿಕಲ್ ಪ್ರಯೋಗದ ದತ್ತಾಂಶಗಳು ಇದನ್ನು ಪ್ರಸ್ತುತ ಲಸಿಕೆಗಳಿಗೆ ಹೋಲಿಸಿದೆ. ಸೋಂಕಿನ ವಿರುದ್ಧ ರಕ್ಷಣೆ ಕಡಿಮೆಯಾಗಿದ್ದರೂ, ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಲಸಿಕೆಗಳು ಇನ್ನೂ ಪ್ರಯೋಜನಕಾರಿಯಾಗಿದೆ. ಅಲ್ಲದೆ, ಆಸ್ಪತ್ರೆಗಳು ಆರೋಗ್ಯ ಸಾಮರ್ಥ್ಯದ ಮೇಲೆ ಬೀರುವ ಹೊರೆ ಗರಿಷ್ಠವಾಗಿರುತ್ತದೆ. ಈ ಹಿನ್ನೆಲೆ ಎಲ್ಲಿಯವರೆಗೆ ರೋಗವನ್ನು ಮನೆಯಲ್ಲಿಯೇ ನಿರ್ವಹಿಸಬಹುದೋ ಅಲ್ಲಿಯವರೆಗೆ ಅದು ಫ್ಲೂ ಅಥವಾ ಜ್ವರದ ರೀತಿಯ ಅಸ್ವಸ್ಥತೆಗಿಂತ ಕೆಟ್ಟದ್ದೇನೂ ಆಗಿರುವುದಿಲ್ಲ.
ದತ್ತಾಂಶವು ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ರಕ್ಷಣೆ ಅಧಿಕವಾಗಿದೆ ಎಂದು ತೋರಿಸುತ್ತದೆ. ಯುಕೆಯಲ್ಲಿನ ಇತ್ತೀಚಿನ ರೋಗ ಪ್ರವೃತ್ತಿಗಳು ಹೆಚ್ಚುವರಿ ಬೆಂಬಲವನ್ನು ನೀಡುತ್ತವೆ. ಇತ್ತೀಚೆಗೆ, ಅಲ್ಲಿನ ಪ್ರಕರಣಗಳು ಜನವರಿ 2021ರ ಪೀಕ್ ಅವಧಿಗೆ ಹೋಲಿಸಿದರೆ ಶೇ. 85 ರಷ್ಟು ಮತ್ತೆ ಕಂಡುಬಂದಿದೆಯಾದರೂ, ಸಾವಿನ ಸಂಖ್ಯೆ ಆ ಪೀಕ್ ಅವಧಿಗೆ ಹೋಲಿಸಿದರೆ ಈಗ ಶೇ. 10ರಷ್ಟು ಮಾತ್ರ ಎಮದು ವರದಿ ಹೇಳುತ್ತದೆ.
ಲಸಿಕೆಯ ಪರಿಣಾಮಕಾರಿತ್ವ ಕಡಿಮೆಯಾಗಿರುವ ಕುರಿತು ಆತಂಕ ವ್ಯಕ್ತವಾಗುತ್ತದೆಯಾದರೂ, ಇದಕ್ಕೆ ಕಾರಣ ಬೇರೆ ಇರುತ್ತದೆ. ಆರಂಭದಲ್ಲಿ ಪರಿಣಾಮಕಾರಿತ್ವದ ಸಂಖ್ಯೆಗಳು ಹೆಚ್ಚಿರುವುದಕ್ಕೆ ಪ್ರಮುಖ ಕಾರಣ ಅದು ಕ್ಲಿನಿಕಲ್ ಟ್ರಯಲ್ ಫಲಿತಾಂಶ ಮಾತ್ರ ಅಂದರೆ ನಿಯಂತ್ರಿತ ಸೆಟ್ಟಿಂಗ್‌ನಲ್ಲಿನ ಪ್ರಯೋಗಗಳಿಂದ ಕೆಲವು ತಿಂಗಳ ಡೇಟಾವನ್ನು ಆಧರಿಸಿವೆ. ಆ ವೇಳೆ, ಸಾಮಾನ್ಯ ಜನರ ಮೇಲೆ ಅಷ್ಟಾಗಿ ಅಧ್ಯಯನ ನಡೆದಿರಲಿಲ್ಲ.
ಇನ್ನೊಂದೆಡೆ, ನಂತರ ನಡೆದ ಅಧ್ಯಯನ ನೈಜ-ಪ್ರಪಂಚದ ಡೇಟಾ ಆಗಿದ್ದು, ಇದು ಕಡಿಮೆ ಇರುವುದು ಸಹ ಸಾಮಾನ್ಯವೇ ಆಗಿದ್ದು, ಅಚ್ಚರಿದಾಯಕವೇನಲ್ಲ. ಅಲ್ಲದೆ, ಯುಎಸ್‌ಎ, ಯುಕೆಯ ಇತ್ತೀಚಿನ ಮಾಹಿತಿ ಸರಾಸರಿ ಫಲಿತಾಂಶ (ಯುಎಸ್ಎ – ಶೇ. 42 ರಿಂದ ಶೇ. 80 ಹಾಗೂ ಯುಕೆ – ಶೇ. 71 – 84 ) ನೀಡಿರುವುದರಿಂದ ಪರಿಣಾಮಕಾರಿತ್ವದ ನಿಜವಾದ ಕುಸಿತದ ಬಗ್ಗೆ ಯಾವುದೇ ನಿರ್ದಿಷ್ಟ ತೀರ್ಮಾನಕ್ಕೆ ಬರುವುದು ಕಷ್ಟಕರವಾಗಿಸುತ್ತದೆ.
ಪರಿಣಾಮಕಾರಿತ್ವದ ವ್ಯತ್ಯಾಸಗಳಿಗೆ ವಿವರಣೆ ಏನು..?
“ರೋಗನಿರೋಧಕ ವ್ಯವಸ್ಥೆಯು ನಂಬಲಾಗದಷ್ಟು ಸಂಕೀರ್ಣವಾಗಿದೆ” ಎಂಬ ಹೇಳಿಕೆಯು ರೋಗವನ್ನು ಉಂಟುಮಾಡುವ ಏಜೆಂಟ್‌ಗಳಿಂದ ನಮ್ಮನ್ನು ರಕ್ಷಿಸುವ ಪ್ರತಿರಕ್ಷಣಾ ವ್ಯವಸ್ಥೆ ಎಂದು ಕರೆಯಬಹುದು.
ವೈರಸ್ ದೇಹಕ್ಕೆ ಸೋಂಕು ತಗುಲಿದ ಬಳಿಕ ಪ್ರಾಥಮಿಕವಾಗಿ ನಮ್ಮ ದೇಹದ ಎರಡು ಸ್ಥಳಗಳಲ್ಲಿ ಕಂಡುಬರುತ್ತದೆ. ಒಂದು ದೇಹದಾದ್ಯಂತ ಸಂಚರಿಸಲು ಬಳಸುವ ರಕ್ತಪರಿಚಲನಾ ವ್ಯವಸ್ಥೆಯಲ್ಲಿ. ಹಾಗೂ, ಎರಡನೆಯದು ವೈರಸ್ ಆಕ್ರಮಿಸುವ ಮತ್ತು ಮಲ್ಟಿಪ್ಲೈ ಆಗಲು ಬಳಸುವ ವಿವಿಧ ಅಂಗಾಂಶಗಳ ಜೀವಕೋಶ ಅಥವಾ ಟಿಶ್ಯೂಗಳಲ್ಲಿರುತ್ತದೆ. ಆದ್ದರಿಂದ, ಈ ಎರಡು ಸ್ಥಳಗಳಲ್ಲಿ ವೈರಸ್ ಎದುರಿಸಲು ಪ್ರತಿರಕ್ಷಣಾ ವ್ಯವಸ್ಥೆಯು ಅಂದರೆ ನಮ್ಮ ಇಮ್ಯೂನ್ ಸಿಸ್ಟಂ ಎರಡು ಪ್ರಮುಖ ಶಸ್ತ್ರಾಸ್ತ್ರಗಳನ್ನು ಹೊಂದಿದೆ.
ಒಂದು ಪ್ರತಿಕಾಯದ ಶಸ್ತ್ರಾಸ್ತ್ರ. ಪ್ರತಿಕಾಯಗಳು ಅಥವಾ ಆ್ಯಂಟಿಬಾಡಿ ರಕ್ತಪರಿ ಚಲನೆಯ ವೈರಸ್‌ನ ಕೆಲವು ಮೇಲ್ಮೈ ಪ್ರೋಟೀನ್‌ಗಳ ಮೇಲೆ ‘ಲಾಕ್’ ಆಗುತ್ತವೆ, ಇದರಿಂದಾಗಿ ವೈರಸ್ ನಮ್ಮ ಜೀವಕೋಶಗಳ ಮೇಲೆ ದಾಳಿ ಮಾಡುವುದನ್ನು ತಡೆಯುತ್ತದೆ. ಇದಲ್ಲದೆ, ವೈರಸ್ ಅನ್ನು ನಾಶಗೊಳಿಸಲು ಕಟ್ಟಿಹಾಕುತ್ತದೆ. ಹೀಗಾಗಿ, ಪ್ರತಿಕಾಯಗಳನ್ನು ರಕ್ಷಣೆಯ ಮೊದಲ ಸಾಲು ಎಂದು ಭಾವಿಸಬಹುದು. ಆದರೂ, ವೈರಸ್ ನಮ್ಮ ಜೀವಕೋಶಗಳನ್ನು ಪ್ರವೇಶಿಸಿದ ನಂತರ ಆ್ಯಂಟಿಬಾಡಿ ನಿಷ್ಪರಿಣಾಮ ಕಾರಿಯಾಗಿರುತ್ತವೆ. ಈ ಸಮಯದಲ್ಲಿ, ಪ್ರತಿರಕ್ಷಣಾ ಪ್ರತಿಕ್ರಿಯೆಯ ಎರಡನೇ ಶಸ್ತ್ರಾಸ್ತ್ರ ಪ್ರಸ್ತುತವಾಗುತ್ತದೆ.
ಈ ಶಸ್ತ್ರಾಸ್ತ್ರವನ್ನು ಕಿಲ್ಲರ್ ಟಿ ಸೆಲ್ ಆರ್ಮ್ ಎಂದು ಹೆಸರಿಸಲಾಗಿದೆ. ಈ ಜೀವಕೋಶಗಳು ವೈರಸ್ ಅನ್ನು ಹೊಂದಿರುವ ಮತ್ತು ಅದರೊಳಗೆ ವೈರಸ್ ರೆಪ್ಲಿಕೇಟ್ ಆಗುವ ನಮ್ಮ ದೇಹದ ಜೀವಕೋಶಗಳನ್ನು ಅಥವಾ ಸೆಲ್‌ಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಟಿ ಸೆಲ್‌ಗಳು ಅಂತಹ ಕೋಶಗಳನ್ನು ಕೊಲ್ಲುತ್ತವೆ, ಇದರಿಂದಾಗಿ ಸೆಲ್‌ಗಳೊಳಗಿನ ವೈರಸ್ ಅನ್ನು ತೆಗೆದುಹಾಕುತ್ತದೆ. ವೈರಸ್ ನಮ್ಮ ದೇಹದ ಜೀವಕೋಶಗಳಲ್ಲಿ ಒಮ್ಮೆ ಹಿಡಿದು ಕೊಂಡರೆ ರೋಗ ಉಂಟಾಗುತ್ತದೆ ಎಂಬುದು ಸರಳ ದೃಷ್ಟಿಕೋನ. ಈ ಹಿನ್ನೆಲೆ ಪ್ರತಿಕಾಯದ ಪ್ರತಿಕ್ರಿಯೆಯು ದುರ್ಬಲವಾಗಿದ್ದರೂ ಬಲವಾದ ಟಿ-ಸೆಲ್ ಪ್ರತಿರಕ್ಷಣಾ ಕಾರ್ಯವು ತೀವ್ರ ರೋಗದಿಂದ ರಕ್ಷಿಸುತ್ತದೆ.
ಇನ್ನೊಂದೆಡೆ, ವ್ಯಾಕ್ಸಿನೇಷನ್ ಅಥವಾ ಲಸಿಕೀಕರಣ ಪ್ರತಿರಕ್ಷಣಾ ಪ್ರತಿಕ್ರಿಯೆಯ ಎರಡು ಶಸ್ತ್ರಾಸ್ತ್ರಗಳನ್ನು ಸ್ಥಾಪಿಸುತ್ತದೆ; ಈ ಎರಡು ಶಸ್ತ್ರಾಸ್ತ್ರಗಳು ಸಮಯಕ್ಕೆ ಮತ್ತು ರೂಪಾಂತ ರಗಳಿಗೆ ಪ್ರತಿಕ್ರಿಯೆಯಾಗಿ ವಿಭಿನ್ನವಾಗಿ ಪ್ರಬುದ್ಧವಾಗಬಹುದು. ರಕ್ತಪರಿಚಲನೆಯ ಪ್ರತಿಕಾಯ ಮಟ್ಟಗಳು ಕಾಲಾನಂತರದಲ್ಲಿ ಕುಸಿಯುತ್ತವೆ. ಈ ವ್ಯವಸ್ಥೆಯಲ್ಲಿ ಬೇಡಿಕೆಯ ಮೇಲೆ ಪ್ರತಿಕಾಯಗಳನ್ನು ಉತ್ಪಾದಿಸಲು “ಮೆಮೋರಿ” ಇದ್ದರೂ, ಪದೇ ಪದೇ ಆ್ಯಂಟಿಬಾಡಿ ಉತ್ಪಾದಿಸಲು ಸಮಯ ತೆಗೆದುಕೊಳ್ಳಬಹುದು. ಈ ಹಿನ್ನೆಲೆ ದುರ್ಬಲ ಮತ್ತು ವಿಳಂಬವಾದ ಪ್ರತಿಕಾಯ ಪ್ರತಿಕ್ರಿಯೆಯಿಂದ ರೋಗಲಕ್ಷಣವುಳ್ಳ ಕೋವಿಡ್ ಸೋಂಕಿಗೆ ಕಾರಣವಾಗಬಹುದು. ಆದರೆ ಟಿ-ಸೆಲ್ ಪ್ರತಿಕ್ರಿಯೆ ಹಾಗೇ ಇದ್ದಲ್ಲಿ, ವ್ಯಕ್ತಿಯನ್ನು ತೀವ್ರ ರೋಗದಿಂದ ರಕ್ಷಿಸಲಾಗುತ್ತದೆ. ಅಂದರೆ ಆಸ್ಪತ್ರೆಗೆ ದಾಖಲಾಗುವುದನ್ನು ಬಹುತೇಕ ತಪ್ಪಿಸುತ್ತದೆ.
ಹೆಚ್ಚುವರಿಯಾಗಿ, ಲಸಿಕೆಯ ಪರಿಣಾಮಕಾರಿತ್ವವು ಕಡಿಮೆಯಾಗುವುದಕ್ಕೆ ಮತ್ತೊಂದು ಕಾರಣ ಒಂದು ರೂಪಾಂತರದಿಂದ ಪ್ರತಿರಕ್ಷಣಾ ವ್ಯವಸ್ಥೆಯು ಹೊಸ ರೂಪಾಂತರವನ್ನು ಎದುರಿಸಬೇಕಾಗುತ್ತದೆ. ಇಲ್ಲಿಯೂ ಸಹ, ಎರಡು ಶಸ್ತ್ರಾಸ್ತ್ರಗಳ ರೂಪಾಂತರಕ್ಕೆ ಪ್ರತಿಕ್ರಿಯೆಯಲ್ಲಿನ ವ್ಯತ್ಯಾಸಗಳು ನಿರ್ಣಾಯಕವಾಗಿವೆ. ಪ್ರತಿಕಾಯದ ಶಸ್ತ್ರಾಸ್ತ್ರ ವೈರಲ್ ಮೇಲ್ಮೈ ಪ್ರೋಟೀನ್‌ಗಳಿಗೆ ಪ್ರತಿಕ್ರಿಯಿಸುತ್ತದೆ ಮತ್ತು ಈ ಮೇಲ್ಮೈ ಪ್ರೋಟೀನ್‌ನಲ್ಲಿನ ಬದಲಾವಣೆಗಳು ಪ್ರತಿಕಾಯ ಪ್ರತಿಕ್ರಿಯೆಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು.
ಆದರೂ, ಟಿ ಸೆಲ್‌ಗಳು ಮೇಲ್ಮೈಯ ಸಣ್ಣ ತುಣುಕುಗಳು ಮತ್ತು ಇತರ ವೈರಲ್ ಪ್ರೋಟೀನ್‌ಗಳಿಗೆ ಪ್ರತಿಕ್ರಿಯಿಸುತ್ತವೆ. T ಜೀವಕೋಶಗಳು ವಿಶಾಲವಾದ ಗುರಿಗಳಿಗೆ ಪ್ರತಿಕ್ರಿಯಿಸುವುದರಿಂದ-ನಿರ್ದಿಷ್ಟ ಪ್ರೋಟೀನ್ ನಿಯಂತ್ರಿತವಾದ ನಿರ್ದಿಷ್ಟ ಸೈಟ್‌ಗೆ ಪ್ರತಿಕ್ರಿಯಿಸುವ ಪ್ರತಿಕಾಯಗಳಿಗೆ ಹೋಲಿಸಿದರೆ ಹೆಚ್ಚು ಪ್ರೋಟೀನ್‌ಗಳು ಮತ್ತು ಪ್ರೋಟೀನ್‌ಗಳ ಮೇಲೆ ಹೆಚ್ಚಿನ ತಾಣಗಳು ಸೈಟ್‌ನಲ್ಲಿ ಸ್ಥಳೀಯ “ಆಕಾರ” ದಿಂದ, ಟಿ-ಸೆಲ್ ಪ್ರತಿಕ್ರಿಯೆಯು ರೂಪಾಂತರಗಳಿಗೆ ಹೆಚ್ಚು ನಿರೋಧಕವಾಗಿದೆ.
ಆದ್ದರಿಂದ, ಸಮಯ ಮತ್ತು ರೂಪಾಂತರಗಳಿಂದ ಉಂಟಾಗುವ ಪ್ರತಿಕಾಯದ ಪರಿಣಾಮಕಾರಿತ್ವದ ಕುಸಿತಕ್ಕೆ ಇದೇ ಕಾರಣವೆನ್ನಬಹುದು. ಈ ಹಿನ್ನೆಲೆ ರೋಗಲಕ್ಷಣವುಳ್ಳ ಕೋವಿಡ್ ಸೋಂಕಿನ ವಿರುದ್ಧ ಲಸಿಕೆಯ ಪರಿಣಾಮಕಾರಿತ್ವ ಕಡಿಮೆ ಮಾಡುತ್ತದೆ. ಅಲ್ಲದೆ, ಟಿ-ಸೆಲ್ ಪ್ರತಿಕ್ರಿಯೆಯ ಮುಂದುವರಿದ ಪರಿಣಾಮಕಾರಿತ್ವವು ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಹೆಚ್ಚಿನ ಮಟ್ಟದ ರಕ್ಷಣೆಯನ್ನು ವಿವರಿಸುತ್ತದೆ. ಪ್ರಸ್ತುತ, ಈ ವಿವರಣೆಯು ಪ್ರತಿರಕ್ಷಣಾ ವ್ಯವಸ್ಥೆಯ ಕ್ರಿಯೆಯ ಸಾಮಾನ್ಯ ತತ್ವಗಳನ್ನು ಆಧರಿಸಿದ ಊಹೆಯಾಗಿದೆ. ಮೇಲಿನ ಮೂಲ ವಿವರಣೆಯನ್ನು ದೃಢೀಕರಿಸಲು ಮತ್ತು ಪರಿಪೂರ್ಣಗೊಳಿಸಲು ಹೆಚ್ಚಿನ ಡೇಟಾ ಅಗತ್ಯವಿದೆ.
ಪ್ರತಿಕಾಯಗಳು ಪರಿಚಲನೆಯು ಲಭ್ಯವಿರುವ ರಕ್ಷಣಾತ್ಮಕ ಸಂಪನ್ಮೂಲಗಳ ಸಂಪೂರ್ಣವಲ್ಲ ಎಂದೂ ಈ ವಿವರಣೆ ಸೂಚಿಸುತ್ತದೆ. ಟಿ-ಸೆಲ್ ಮಾಪನಗಳಿಗೆ ಹೋಲಿಸಿದರೆ ಆ್ಯಂಟಿಬಾಡಿ ಪರೀಕ್ಷೆಗಳನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸಲು ಸುಲಭ ಮತ್ತು ಆದ್ದರಿಂದ ವ್ಯಾಪಕವಾಗಿ ಲಭ್ಯವಿದೆ. ಆದರೂ, ವ್ಯಕ್ತಿಗಳು ಲಸಿಕೆಯನ್ನು ಪಡೆಯುವುದು ಮತ್ತು ಸೂಕ್ತ ನಡವಳಿಕೆಯ ಕುರಿತು ಸ್ಥಳೀಯ ಮಾರ್ಗದರ್ಶನವನ್ನು ಅನುಸರಿಸುವುದು ಉತ್ತಮ ಅಭ್ಯಾಸವಾಗಿದೆ.
ಮೂರನೇ ಡೋಸ್ ಲಸಿಕೆ ಸಹಾಯ ಮಾಡುವುದೇ.!?
ಭಾರತ ಸೇರಿ ಬಹುತೇಕ ದೇಶಗಳಲ್ಲಿ ಈಗಲೂ ಎರಡು ಡೋಸ್ ಲಸಿಕೆಯನ್ನು ಸಂಪೂರ್ಣ ಲಸಿಕೀಕರಣ ಎಂದು ಪರಿಗಣಿಸಲಾಗಿದೆ. ಅಲ್ಲದೆ, 2 ಡೋಸ್ ಲಸಿಕೆ ಹಾಕಿಸಿದರೂ, ಸೋಂಕು ಬಂದ ಬಳಿಕವೂ ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ರಕ್ಷಣೆ ನೀಡುತ್ತದೆ. ಮೂರನೇ ಡೋಸ್‌ನ ಪ್ರಮುಖ ಪ್ರಯೋಜನವೆಂದರೆ ಸೋಂಕಿನ ವಿರುದ್ಧ ಪರಿಣಾಮ ಕಾರಿತ್ವವನ್ನು ಸುಧಾರಿಸುವುದು. ಪ್ರಸ್ತುತ ಸೀಮಿತ ಡೇಟಾ ಪ್ರಕಾರ ಪ್ರತಿಕಾಯದ ಮಟ್ಟದಲ್ಲಿ ಸುಧಾರಣೆ ಮತ್ತು ಮೂರನೇ ಡೋಸ್ ನಂತರ ಪರಿಣಾಮಕಾ ರಿತ್ವದ ಹೆಚ್ಚಳವನ್ನು ತೋರಿಸುತ್ತದೆ. ಈ ಹಿನ್ನೆಲೆ, ಕೆಲವು ದೇಶಗಳು ಹೆಚ್ಚಿನ ಅಪಾಯವಿರುವ ಜನಸಂಖ್ಯೆಗೆ ಮೂರನೆಯ ಡೋಸ್ ನೀಡುವ ಕುರಿತು ಚಿಂತೆ ಮಾಡುತ್ತಿದೆ ಹಾಗೂ ಕೆಲವು ದೇಶಗಳಲ್ಲಿ ಈಗಾಗಲೇ ಹಲವರಿಗೆ ನೀಡಲಾಗಿದೆ.
ಅದೇನೇ ಇದ್ದರೂ, ಮೂರನೇ ಡೋಸ್ ಪರಿಗಣಿಸಲು ಇತರ ಪ್ರಶ್ನೆಗಳಿವೆ. ಲಸಿಕೆಯ ಮೂಲ ಈಗಲೂ ‘ವುಹಾನ್ ಸ್ಟ್ರೈನ್’ ಅನ್ನು ಆಧರಿಸಿರುವುದರಿಂದ, ದೀರ್ಘಾವಧಿಯ ಪರಿಣಾಮಕಾ ರಿತ್ವವು ಆತಂಕಕಾರಿಯಾಗಿದೆ. ಎರಡು ಡೋಸ್‌ಗಳ ನಂತರ ರೋಗನಿರೋಧಕ ಶಕ್ತಿ ಕಡಿಮೆಯಾದರೆ, ಮೂರನೇ ಡೋಸ್ ಎಷ್ಟು ಕಾಲ ಪರಿಣಾಮಕಾರಿಯಾಗಿರುತ್ತದೆ..? ಇದು ಸಂಭಾವ್ಯ ಹೊಸ ರೂಪಾಂತರಗಳ ವಿರುದ್ಧ ರಕ್ಷಿಸುತ್ತದೆಯೇ..? ಎಂಬ ಪ್ರಶ್ನೆಗಳೂ ಕೇಳಿಬರುತ್ತವೆ.
ಭಾರತದಲ್ಲಿ, ಹೆಚ್ಚಿನ ಜನಸಂಖ್ಯೆಯು ಇನ್ನೂ ಸಂಪೂರ್ಣವಾಗಿ ಲಸಿಕೆ ಪಡೆದಿಲ್ಲ (ಎರಡು ಡೋಸ್) ಮತ್ತು ಆದ್ದರಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ. ಇದಲ್ಲದೆ, ಭಾರತೀಯ ಜನಸಂಖ್ಯೆಯಲ್ಲಿ ಎರಡು ಡೋಸ್ ಪರಿಣಾಮಕಾರಿತ್ವ ಮತ್ತು ಮೂರನೇ ಒಂದು ಭಾಗದ ಲಾಭದಲ್ಲಿ ಸಂಭವನೀಯ ಕಡಿತ ನಿರ್ಣಯಿಸುವ ಯಾವುದೇ ಡೇಟಾ ಇಲ್ಲ. ಇಂತಹ ಸುದೀರ್ಘ ಪ್ರಶ್ನೆಗಳು ಮತ್ತು ಮುಂದುವರಿದ ಲಸಿಕೆ ಪೂರೈಕೆ ನಿರ್ಬಂಧಗಳೊಂದಿಗೆ, ಆದ್ಯತೆಯು ಅರ್ಹ ಜನಸಂಖ್ಯೆಗೆ ಸಂಪೂರ್ಣ ವ್ಯಾಕ್ಸಿನೇಷನ್ ನೀಡುವುದು (ಮಕ್ಕಳಿಗೆ ಲಸಿಕೆಯ ಅನುಮೋದನೆ ಸೇರಿದಂತೆ) ಹಾಗೂ ಆಸ್ಪತ್ರೆಗೆ ದಾಖಲಾಗುವುದನ್ನು ನಿಯಂತ್ರಿಸುವುದಾಗಿರಬೇಕು.
ಇನ್ನು ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮೂಲಭೂತ ಮುನ್ನೆಚ್ಚರಿಕೆಗಳಾದ ಮಾಸ್ಕ್, ಸಾಮಾಜಿಕ ಅಥವಾ ದೈಹಿಕ ಅಂತರ, ನೈರ್ಮಲ್ಯ, ಮತ್ತು ಕಿಕ್ಕಿರಿದ ಒಳಾಂಗಣ ಸ್ಥಳಗಳಲ್ಲಿ ಸೂಕ್ತ ವೆಂಟಿಲೇಷನ್ ಅನ್ನು ಖಾತ್ರಿಪಡಿಸುವುದು ಮುಂದುವರಿಯಬೇಕು.