ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಂತಿಮ ಮುದ್ರೆ ಒತ್ತಿದ್ದಾರೆ. ಅಂತೆಯೇ ಈಗ ರಾಜ್ಯದಲ್ಲಿ ಕಾನೂನು ಜಾರಿಗೆ ಬರಲಿದೆ.
ಅಂದ್ಹಾಗೆ, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಬಿಲ್ ಪಾಸ್ ಮಾಡಿತ್ತು. ಈಗ ರಾಜ್ಯಪಾಲರ ಅಂಕಿತ ಹಾಕಿದ್ದರಿಂದ ಕಾನೂನು ಈಗ ರಾಜ್ಯದಲ್ಲಿ ಜಾರಿಗೆ ಬರಲಿದೆ. ಈ ಮೂಲಕ ಕರ್ನಾಟಕವು ಮತಾಂತರ ವಿರೋಧಿ ಕಾನೂನನ್ನ ಜಾರಿಗೆ ತಂದ 9ನೇ ರಾಜ್ಯವಾಗಿದೆ.
ಕಾನೂನು ಬಲವಂತದ ಮತಾಂತರ, ಆಮಿಷ ಹಾಗು ಮದುವೆಯ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುವುದನ್ನು ನಿಷೇಧಿಸುತ್ತದೆ.

ಬಲವಂತದ ಮತಾಂತರಕ್ಕೆ 3-5 ವರ್ಷಗಳ ಜೈಲು ಶಿಕ್ಷೆ ಹಾಗು 25 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.
ಅಪ್ರಾಪ್ತ, ಎಸ್ಸಿ/ಎಸ್ಟಿ ಗೆ ಸೇರಿದವರನ್ನು ಮತಾಂತರಿಸಿದರೆ 50 ಸಾವಿರ ರೂಪಾಯಿ, ಸಾಮೂಹಿಕ ಮತಾಂತರ ಮಾಡಿದ್ದಲ್ಲಿ 1 ಲಕ್ಷ ರೂಪಾಯಿ ದಂಡದೊಂದಿಗೆ 3-10 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು.
ಒಂದು ವೇಳೆ ಮತಾಂತರವಾಗಲು ಬಯಸುವವರು ಆ ಜಿಲ್ಲೆಯ ಜಿಲ್ಲಾಧಿಕಾರಿಗಳಿಎ ಕನಿಷ್ಠ 60 ದಿನಗಳ ಮುಂಚೆ ಅಥವಾ ಮತಾಂತರವಾದ 30 ದಿನದ ಒಳಗೆ ತಿಳಿಸಬೇಕು.