ಮುಂದಿನ 10 ದಶಕಗಳ ಒಳಗಾಗಿ ದೇಶಾದ್ಯಂತ 6ಜಿ ನೆಟ್ವರ್ಕ್ ಸಂಪರ್ಕ ಕಲ್ಪಿಸುವುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಹೇಳಿದ್ದಾರೆ.
ಇದರಿಂದಾಗಿ ಅತಿ ವೇಗದ ಅಂತರ್ಜಾಲ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ದೇಶದಲ್ಲಿ 3ಜಿ ಹಾಗು 4ಜಿ ಸೇವೆಗಳು ಚಾಲ್ತಿಯಲ್ಲಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ 5ಜಿ ಸೇವೆ ಲಭ್ಯವಾಗಲಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಮಂಡಳಿ (TRAI)ನ ಬೆಳ್ಳಿ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, 5ಜಿ ಸೇವೆಗೆ ಚಾಲನೆ ನೀಡುವುದರಿಂದ ದೇಶದ ಆರ್ಥಿಕತೆಗೆ 45 ಸಾವಿರ ಕೋಟಿ ಡಾಲರ್ (34,89,885 ಲಕ್ಷ ಕೋಟಿ) ಲಾಭವಾಗಲಿದೆ ಎಂದು ತಿಳಿಸಿದ್ದಾರೆ.
ಇದು ಕೇವಲ ಇಂಟರ್ನೆಟ್ ವೇಗವನ್ನು ಹೆಚ್ಚಿಸುವುದಿಲ್ಲ ದೇಶದ ಆರ್ಥಿಕ, ಅಭಿವೃದ್ದಿ ಹಾಗು ಉದ್ಯೋಗದ ಸೃಷ್ಟಿಗೆ ಸಂಬಂಧಿಸಿದ ವಿಚಾರವಾಗಿದೆ. ಮುಂದುವರೆದು, 5ಜಿ ಅಳವಡಿಕೆಯಿಂದ ದೇಶದ ಆಡಳಿತದಲ್ಲಿ ಸಕಾರಾತ್ಮಕ ಬೆಳವಣಿಗೆ ಆಗಲಿದೆ ಜೀವನ ನಿರ್ವಹಣೆ ಸುಗಮವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೃಷಿ, ಆರೋಗ್ಯ, ಶಿಕ್ಷಣ, ಸರಕು ಸಾಗಾಣೆ ಹಾಗು ಮೂಲಸೌಕರ್ಯ ಕ್ಷೇತ್ರಗಳಿಗು ಹೆಚ್ಚಿನ ಉತ್ತೇಜನ ಸಿಗಲಿದೆ ಎಂದಿದ್ದಾರೆ.