ತುಮಕೂರು : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಬಂಡಾಯದ ಬಿರುಗಾಳಿಯೇ ಎದ್ದಿದೆ. ಹಿರಿಯ ನಾಯಕರು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಿದ್ದರೆ ಟಿಕೆಟ್ ವಂಚಿತ ಇನ್ನೂ ಕೆಲವರು ಪಕ್ಷಕ್ಕೆ ಗುಡ್ ಬೈ ಹೇಳ್ತಿದ್ದಾರೆ. ಇದೀಗ ತುಮಕೂರು ಜಿಲ್ಲೆಯ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ.
ಬೆಂಬಲಿಗರ ಜೊತೆ ಸಭೆ ಕರೆದು ಬಳಿಕ ಮಾತನಾಡಿದ ಸೊಗಡು ಶಿವಣ್ಣ, ನನ್ನ ಮನೆಯಲ್ಲಿ ಬಿಜೆಪಿಗೆ ಸೇರಿದ ಬಾವುಟಗಳಿವೆ,ಅದಕ್ಕೆ ನಾನು ಗೌರವ ನೀಡಬೇಕು. ಅದನ್ನು ಒಂದು ಕಡೆಗೆ ಶಿಫ್ಟ್ ಮಾಡಿದ ಬಳಿಕ ನಾನು ಅಧಿಕೃತವಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ನಾನು ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಸ್ಪರ್ಧೆ ಮಾಡುವುದು ಖಚಿತ. ನಾಳೆಯೇ ನಾನು ಪಕ್ಷಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.