ಸ್ಯಾಂಡಲ್‌ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ʻಬಚ್ಚನ್ʼ ಸಿನಿಮಾ ತೆರೆಕಂಡು ಇಂದಿಗೆ 10 ವರ್ಷ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರೋ ಕಿಚ್ಚ ಸುದೀಪ್ ಪುತ್ರಿ ಸಾನ್ವಿ, ಈಗ ಅಪ್ಪನ ಬಚ್ಚನ್ ಚಿತ್ರದ 10 ವರ್ಷದ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಕಿಚ್ಚ ಸುದೀಪ್ ಮಗಳು ಸಾನ್ವಿ ಉತ್ತಮ ಗಾಯಕಿ, ಕಲೆಗಾರ್ತಿಯೂ ಹೌದು.. ಬಚ್ಚನ್ ಸಿನಿಮಾದಲ್ಲಿ ಸುದೀಪ್ ಅವರ ಲುಕ್ನ ಪೆನ್ಸಿಲ್ ಸ್ಕೆಚ್ ಬಿಡಿಸಿ ಬಚ್ಚನ್ ಸಿನಿಮಾದ 10ನೇ ವರ್ಷದ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ ಸಾನ್ವಿ.

ಸಾನ್ವಿ ಸುದೀಪ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಕೆಚ್‌ಅನ್ನ ಹಂಚಿಕೊಂಡಿದ್ದು, ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಸ್ವತಃ ಕಿಚ್ಚ ಸುದೀಪ್ ಸ್ವಾನಿ ಸ್ಪೆಷಲ್ ಗಿಫ್ಟ್‌ಗೆ ಫಿದಾ ಆಗಿದ್ದು, ಸ್ವತಃ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಲವ್ ಯೂ ಬೇಬಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.







