
ಆನೇಕಲ್ ಪೊಲೀಸರು ನಕಲಿ ಉಪಲೋಕಾಯುಕ್ತರನ್ನು ಅರೆಸ್ಟ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ಮೂಲದ ಆನಂದ್ ಕುಮಾರ್ ಬಂಧಿತ ಆರೋಪಿ. ಉಪಲೋಕಾಯುಕ್ತ ಬಿ ವೀರಪ್ಪ ಹೆಸರು ದುರ್ಬಳಕೆ ಮಾಡಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಉಪಲೋಕಾಯುಕ್ತರ ಹೆಸರಲ್ಲಿ ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯ ನಾಯಕ್‌ಗೆ ಆರೋಪಿ ಪೋನ್ ಮಾಡಿದ್ದನು. ವಿಶೇಷ ತಹಶಿಲ್ದಾರ್ ಸಭೆಯಲ್ಲಿದ್ದ ಕಾರಣಕ್ಕೆ ಪೋನ್ ತೆಗೆದಿರಲಿಲ್ಲ. ಟ್ರೂ ಕಾಲರ್‌ನಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅಂತ ಬಂದಿತ್ತು. ಆ ಬಳಿಕ ಉಪಲೋಕಾಯುಕ್ತ ಕಚೇರಿಗೆ ತೆರಳಿದ್ದ ಕರಿಯಾ ನಾಯಕ್, ಸಭೆಯಲ್ಲಿ ಇದ್ದುದ್ದರಿಂದ ಕರೆ ಸ್ವೀಕರಿಸಲಿಲ್ಲ ಎಂದು ಕ್ಷಮೆ ಕೇಳಿದ್ದರು.
ವಿಶೇಷ ತಹಶೀಲ್ದಾರ್ ಮಾತು ಕೇಳಿ ಶಾಕ್ ಆದ ಉಪಲೋಕಾಯುಕ್ತ ಬಿ ವೀರಪ್ಪ, ಉಪಲೋಕಾಯುಕ್ತರು ಕೂಡಲೇ ದೂರು ನೀಡುವಂತೆ ಸೂಚನೆ ನೀಡಿದ್ದರು. ಆನೇಕಲ್ ಪೊಲೀಸ್ ಠಾಣೆಯಲ್ಲಿ ವಿಶೇಷ ತಹಶೀಲ್ದಾರ್ ದೂರು ಸಲ್ಲಿಸಿದ್ದರು. ಆ ಬಳಿಕ ಆರೋಪಿ ಆನಂದ್ ಬಂಧಿಸಿ ಜೈಲಿಗಟ್ಟಿದ್ದಾರೆ ಪೊಲೀಸ್ರು.
ಸರ್ಜಾಪುರ ಹೋಬಳಿ ಚಿಕ್ಕನಹಳ್ಳಿ ಜಮೀನು ವಿಚಾರವಾಗಿ ಪೋನ್ ಮಾಡಿದ್ದ ಆನಂದ್, ಸರ್ವೇ ನಂಬರ್ 18/P16 ಹೊಸ ನಂಬರ್ 191 ಒಂದು ಎಕರೆ ಜಾಗವನ್ನ ಖಾತೆ ಮಾಡಿಕೊಡಲು ಶಿಫಾರಸ್ಸು ಮಾಡಲು ಮುಂದಾಗಿದ್ದ ಎನ್ನಲಾಗಿದೆ. ರಾಮಸ್ವಾಮಿ ಅಡಿಗರಿಂದ ನಾರಾಯಣ ಅಡಿಗ ಎಂಬುವವರಿಗೆ ಖಾತೆ ಮಾಡಿಸಲು ಪ್ಲಾನ್ ಮಾಡಿ ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಹೆಸರು ಹೇಳಿಕೊಂಡು ಶಿಫಾರಸು ಮಾಡಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ.


