• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಜೆಡಿಎಸ್‌-ಕಾಂಗ್ರೆಸ್‌ನಲ್ಲಿ ಭ್ರಷ್ಟರು, ಕೋಮುವಾದಿಗಳು ತುಂಬಿದ್ದಾರೆ : ಅಮಿತ್‌ ಶಾ

ಪ್ರತಿಧ್ವನಿ by ಪ್ರತಿಧ್ವನಿ
December 30, 2022
in ಕರ್ನಾಟಕ, ದೇಶ, ರಾಜಕೀಯ
0
ಜೆಡಿಎಸ್‌-ಕಾಂಗ್ರೆಸ್‌ನಲ್ಲಿ ಭ್ರಷ್ಟರು, ಕೋಮುವಾದಿಗಳು ತುಂಬಿದ್ದಾರೆ : ಅಮಿತ್‌ ಶಾ
Share on WhatsAppShare on FacebookShare on Telegram

ರಾಜ್ಯ-ಕೇಂದ್ರದಲ್ಲಿರುವ ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮಂಡ್ಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ವಿರುದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹರಿಹಾಯ್ದಿದ್ದಾರೆ.

ADVERTISEMENT

ಜೆಡಿಎಸ್‌-ಕಾಂಗ್ರೆಸ್‌ ಆಡಳಿತವನ್ನು ನಾವು ನೋಡಿದ್ದೇವೆ. ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ದೆಹಲಿಗೆ ಎಟಿಎಂ ಆಗುತ್ತದೆ, ಜೆಡಿಎಸ್ ಆಡಳಿತದಲ್ಲಿ ಕರ್ನಾಟಕ ಒಂದು ಕುಟುಂಬಕ್ಕೆ ಎಟಿಎಂ ಆಗುತ್ತದೆ. ಈ ಎರಡೂ ಪಕ್ಷಗಳೂ ಭ್ರಷ್ಟಾಚಾರದ ಮೂಲಕ ಈ ನೆಲದ ಅಭಿವೃದ್ಧಿಯನ್ನು ತಡೆಯುತ್ತಾ ಬಂದಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯತ್ತ ದಾಪುಗಾಲಿಡಲಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಭ್ರಷ್ಟರು, ಅಪರಾಧಿಗಳು ಮತ್ತು ಕೋಮುವಾದಿಗಳಿಂದ ತುಂಬಿದ್ದಾರೆ ಎಂದು ಕಿಡಿಕಾರಿದ್ದಾರೆ.

ದೇಶಕ್ಕೆ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಬಿಜೆಪಿಗೆ ಎರಡು ಬಾರಿ ಅವಕಾಶ ಲಭಿಸಿತ್ತು. ಲಭಿಸಿದ ಮೊದಲ ಅವಕಾಶದಲ್ಲಿ ಬಿಜೆಪಿಯು ದಲಿತರೋರ್ವರನ್ನು ರಾಷ್ಟ್ರಪತಿ ಮಾಡಿದರೆ, ಎರಡನೇ ಅವಕಾಶದಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದೆ. ಬೊಮ್ಮಾಯಿ ಸರ್ಕಾರದ ಶಿಫಾರಸ್ಸಿನ ಮೇರೆಗೆ ‘ಬೆಟ್ಟ-ಕುರುಬ’ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲಾಗಿದೆ. ಮೋದಿ ಸರ್ಕಾರದ ಈ ನಿರ್ಧಾರದಿಂದ ಈ ಸಮುದಾಯದ ಸಾವಿರಾರು ಮಂದಿ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

2024 ರ ಜನವರಿ ತಿಂಗಳಲ್ಲಿ ಅಯೋಧ್ಯೆಗೆ ಭೇಟಿ ನೀಡಲು ಈಗಲೇ ಕಾಯ್ದಿರಿಸಿ ಆ ವೇಳೆಗೆ ಅಯೋಧ್ಯೆಯಲ್ಲಿ ಬಹುನಿರೀಕ್ಷಿತ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ. ದುರಾದೃಷ್ಟವೆಂದರೆ, ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಈ ಕಾರ್ಯವನ್ನು ಕಾನೂನಿನ ಸರಪಳಿಯಲ್ಲಿ ತಡೆಹಿಡಿದಿತ್ತು. ಪ್ರಧಾನಿ ಮೋದಿಯವರು ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6,000 ರೂಪಾಯಿ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರು ಈ‌ ಯೋಜನೆಗೆ ಹೆಚ್ಚುವರಿಯಾಗಿ 4,000 ರೂಪಾಯಿ ಸೇರಿಸಿ ಪ್ರತಿ ರೈತರಿಗೂ ಒಟ್ಟು 10,000 ರೂಪಾಯಿ ಲಭ್ಯವಾಗುವಂತೆ ಮಾಡಿದರು ಎಂದು ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಬಿಜೆಪಿಯವರು ರಾಜಕೀಯವಾಗಿ ಚಾಕಲೇಟ್ ಕೊಡುತ್ತಿದ್ದಾರೆ : ಡಿ.ಕೆ.ಶಿವಕುಮಾರ್‌

Next Post

Made In Bengaluru Premier Show Review : ಈ ಸಿನಿಮಾ ನೋಡಿ ಕಣ್ಣು ಒದ್ದೆಯಾಗಿದೆ ಮನಸು ಭಾರ ಆಗಿದೆ | Pratidhvani

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
Next Post
Made In Bengaluru Premier Show Review : ಈ ಸಿನಿಮಾ ನೋಡಿ ಕಣ್ಣು ಒದ್ದೆಯಾಗಿದೆ ಮನಸು ಭಾರ ಆಗಿದೆ | Pratidhvani

Made In Bengaluru Premier Show Review : ಈ ಸಿನಿಮಾ ನೋಡಿ ಕಣ್ಣು ಒದ್ದೆಯಾಗಿದೆ ಮನಸು ಭಾರ ಆಗಿದೆ | Pratidhvani

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!