• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಮೆರಿಕ ಸಂಧಾನ.. ಕದನ ವಿರಾಮ ಘೋಷಿಸಿದ ಭಾರತ – ಪಾಕ್​..

ಕೃಷ್ಣ ಮಣಿ by ಕೃಷ್ಣ ಮಣಿ
May 10, 2025
in Top Story, ದೇಶ, ವಿದೇಶ, ಶೋಧ
0
ಅಮೆರಿಕ ಸಂಧಾನ.. ಕದನ ವಿರಾಮ ಘೋಷಿಸಿದ ಭಾರತ – ಪಾಕ್​..
Share on WhatsAppShare on FacebookShare on Telegram
Lawyer Jagadesh Kumar :ಸಿಎಂ ರಾಸಲೀಲೆ ವಿಡಿಯೋ ಇದೆ..   #pratidhvani #actor #excm #karnataka

ಕಾಶ್ಮೀರದ ಪಹಲ್ಗಾಮ್​ನಲ್ಲಿ ಅಮಾಯಕರನ್ನು ಬಲೆ ಪಡೆದ ದಿನದಿಂದಲೇ ಭಾರತ ಹಾಗು ಪಾಕಿಸ್ತಾನದ ನಡುವೆ ಉಗ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಆ ಬಳಿಕ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ಮಾಡಿ, ಉಗ್ರರ ಕುಟುಂಬಗಳನ್ನೇ ಸರ್ವನಾಶ ಮಾಡಿತ್ತು. ಆ ಬಳಿಕ ಪಾಕಿಸ್ತಾನ ಅಪ್ರೋದಿತ ದಾಳಿ ನಡೆಸುವ ಮೂಲಕ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿತ್ತು. ನಂತರ ಭಾರತವೂ ಕೂಡ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಕೆಲಸ ಮಾಡಿತ್ತು.

ADVERTISEMENT

ಸ್ವತಃ ಪಾಕಿಸ್ತಾನ ಪ್ರಧಾನಿ ಶಹಬಾಜ್​ ಷರೀಫ್​ ನಿವಾಸದ ಬಳಿಯಲ್ಲೇ ಡ್ರೋಣ್​ ಸ್ಫೋಟ ಮಾಡುವ ಮೂಲಕ ಭಾರತದ ಸಾಮರ್ಥ್ಯ ಏನು..? ಅನ್ನೋದನ್ನು ಪಾಕಿಸ್ತಾನಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿತ್ತು. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ಹಾಗು ಪಾಕಿಸ್ತಾನ ನಡುವೆ ಸೃಷ್ಟಿಯಾಗಿದ್ದ ಆತಂಕದ ಕಾರ್ಮೋಡವನ್ನು ಸರಿಸುವಂತೆ ಒತ್ತಡ ಎದುರಾಗಿತ್ತು. ಆದರೆ ನರಿ ಬುದ್ಧಿಯ ಪಾಕಿಸ್ತಾನ, ಕಳ್ಳನಂತೆ ಭಾರತದ ಗಡಿ ಮೇಲೆ ದಾಳಿ ಮಾಡುವ ಕೆಲಸ ಮಾಡಿತ್ತು.

ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟಿದ್ದ ಭಾರತ, ಪಾಕಿಸ್ತಾನದ ಪ್ರಮುಖ ಏರ್​ಬೇಸ್​ಗಳನ್ನು ಸ್ಫೋಟ ಮಾಡುವ ಮೂಲಕ ನಾನು ಎಷ್ಟು ಬಲಿಷ್ಠ ಎನ್ನುವುದನ್ನು ತೋರಿಸಿತ್ತು. ಆ ಬಳಿಕ ಪಾಕಿಸ್ತಾನ ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಬುದ್ಧಿ ಹೇಳಿಸಲು ಮುಂದಾಗಿತ್ತು. ಆದರೆ ಭಾರತ ಯಾವುದಕ್ಕೂ ಸೊಪ್ಪು ಹಾಕದೆ ಪಾಕ್​ನ ಸೊಕ್ಕನ್ನು ಮುರಿಯುವ ಕೆಲಸ ಮಾಡಿತ್ತು. ಅಂತಿಮವಾಗಿ ಅಮೆರಿಕ ಸಂಧಾನವನ್ನು ಫಲಪ್ರಧ ಮಾಡಿದ್ದು, ಪಾಕ್​ ಹಾಗು ಭಾರತದ ನಡುವೆ ರಾಜಿ ಸೂತ್ರ ಮುಂದಿಟ್ಟಿದೆ.

ಪಾಕಿಸ್ತಾನದ ಮಿಲಿಟರಿ DG ಭಾರತದ ಮಿಲಿಟರಿ ಅಧಿಕಾರಿ ಜೊತೆಗೆ ಮಾತನಾಡಿದ್ದು, ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಘೋಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಆ ಬಳಿಕ ಮೇ 12ರಂದು ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದು, ಭಾರತ ಹಾಗು ಪಾಕಿಸ್ತಾನ ತಕ್ಷಣದಿಂದಲೇ ಕದನ ವಿರಾಮ ಘೋಷಣೆಗೆ ಒಪ್ಪಿಕೊಂಡಿದ್ದು, ಎರಡೂ ದೇಶಗಳಿಗೂ ಶುಭಾಶಯಗಳು. ಸಾಮಾನ್ಯ ಜ್ಞಾನವನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಎಂದು ಬರೆದುಕೊಂಡಿದ್ದಾರೆ.

Tags: ceasefiredonald trump on india pakistan ceasefiredonald trump on india-pakistan ceasefire liveIndiaindia pakistan ceasefireindia pakistan ceasefire agreementindia pakistan warPakistanpakistan ceasefirepakistan newspakistan talibanpakistan ttp ceasefirepakistan ttp ceasefire agreementpakistani talibantaliban pakistan ceasefiretrump india pakistantrump on india pakistan
Previous Post

ದೇಶ ಅಂದಾಗ ಎಲ್ಲರೂ ಒಂದೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Next Post

ಕಾಂಗ್ರೆಸ್​ ಸರ್ಕಾರದಲ್ಲಿ ಹಳೇ ಟ್ಯಾಂಕರ್​ಗೆ ಹೊಸ ಬಣ್ಣ.. ಅಸಲಿಯತ್ತು ಬಯಲು..

Related Posts

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ
Top Story

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದಲ್ಲಿ ಸಿನಿಮಾವನ್ನೇ ಹೋಲಿಸುವಂತಹ ಬ್ಯಾಂಕ್ ಚಿನ್ನಾಭರಣ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ...

Read moreDetails
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
Next Post
ಕಾಂಗ್ರೆಸ್​ ಸರ್ಕಾರದಲ್ಲಿ ಹಳೇ ಟ್ಯಾಂಕರ್​ಗೆ ಹೊಸ ಬಣ್ಣ.. ಅಸಲಿಯತ್ತು ಬಯಲು..

ಕಾಂಗ್ರೆಸ್​ ಸರ್ಕಾರದಲ್ಲಿ ಹಳೇ ಟ್ಯಾಂಕರ್​ಗೆ ಹೊಸ ಬಣ್ಣ.. ಅಸಲಿಯತ್ತು ಬಯಲು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada