ಚೀನಾದ (China) ಮೇಲೆ ಅಮೆರಿಕಾದ (America) ಸುಂಕ ಸಮರ ಮುಂದುವರೆದಿದೆ.ಚೀನಾದ ಮೇಲೆ ಒಟ್ಟಾರೆ ಶೇ.145 ರಷ್ಟು ಅಮದು ಸುಂಕವನ್ನು ಅಮೆರಿಕಾ ಹೇರಿಕೆ ಮಾಡಿದೆ.ಮೊನ್ನೆ ಮೊನ್ನೆಯಷ್ಟೇ ಚೀನಾದ ಮೇಲೆ ಶೇ.125 ರಷ್ಟು ಸುಂಕ ವಿಧಿಸಿದ್ದ ಅಮೆರಿಕಾ ಅದನ್ನು ಈಗ ಮತ್ತೆ ಏರಿಕೆ ಮಾಡಿದೆ.

ಆದ್ರೆ ಈಗ ಇದರ ಮೇಲೆ ಈ ಮೊದಲೇ ಶೇ.20 ರಷ್ಟು ಅಮದು ಸುಂಕ ವಿಧಿಸಲಾಗಿ ಚೀನಾದ ಉತ್ಪನ್ನಗಳ ಮೇಲೆ ಒಟ್ಟಾರೆ ಶೇ.145 ರಷ್ಟು ಅಮದು ಸುಂಕವನ್ನು ಅಮೆರಿಕಾ ವಿಧಿಸಿದೆ.

ಈ ನಿರ್ಧಾರವನ್ನು ಖಂಡಿಸಿದ್ದ ಚೀನಾ ಇದಕ್ಕೆ ಪ್ರತಿಯಾಗಿ ಅಮೆರಿಕಾದಿಂದ ಚೀನಾಗೆ ಅಮದು ಆಗುವ ಉತ್ಪನ್ನಗಳ ಮೇಲೆ ಶೇ.84 ರಷ್ಟು ಸುಂಕ ವಿಧಿಸಿತ್ತು. ಆ ನಂತರ ಚೀನಾದ ಈ ಕ್ರಮಕ್ಕೆ ಪ್ರತಿಯಾಗಿ ಚೀನಾದಿಂದ ಅಮೆರಿಕಾಕ್ಕೆ ಅಮದು ಆಗುವ ಉತ್ಪನ್ನಗಳ ಮೇಲೆ ಶೇ.145 ರಷ್ಟು ಸುಂಕವನ್ನು ಅಮೆರಿಕಾ ಘೋಷಿಸಿದೆ.