ಮಾಂಸಹಾರಿಗಳು ಸಸ್ಯಹಾರಿಗಳ ಮೇಲೆ ಅವರು ಕೇವಲ ಸಸ್ಯಹಾರವನ್ನು ತಿಂದು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತಾರೆಂದು ಹಲ್ಲೆ ಮಾಡಿದ್ದನ್ನು ಒಮ್ಮೆಯಾದರೂ ನೋಡಿದ್ದೀರಾ, ಕೇಳಿದ್ದೀರಾ? ಮಾಂಸಹಾರಿಗಳು ಒಮ್ಮೆಯಾದರೂ, ಪುಳ್ಚಾರ್ಗಳು ಸಸ್ಯಹಾರ ತ್ಯಜಿಸಿ, ಮಾಂಸಹಾರ ಸೇವಿಸಬೇಕೆಂದು ಕಟ್ಟಪ್ಪಣೆ ಮಾಡಿದ್ದುಂಟಾ? ಮಾಂಸಹಾರಿ ದೇವತೆಗಳ ಹಬ್ಬದಂದು, ಮಾಂಸಹಾರಿಗಳು ಯಾವತ್ತಾದರೂ, ಎಲ್ಲಿಯಾದರೂ ಇಡೀ ಪಟ್ಟಣದಲ್ಲಿ ತರಕಾರಿ ಮಾರಾಟ ನಿಷೇಧ ಮಾಡಿಸಿದುಂಟಾ?
ಊಹುಂ! ಆದರೆ ಸಸ್ಯಹಾರಿಗಳು ಈ ವಿಷಯದಲ್ಲಿ ಮಾಂಸಹಾರಿಗಳ ಮೇಲೆ ಹಲ್ಲೆ ಮಾಡುವುದು, ದಬ್ಬಾಳಿಕೆ ನಡೆಸುವುದು, ಮಾಂಸಹಾರ ಹಾಗೂ ಮಾಂಸಹಾರಿಗಳ ಬಗ್ಗೆ ಕೇವಲವಾಗಿ ಮಾತಾನಾಡುವುದು, ಹೀಯಾಳಿಸುವುದು ನಿತ್ಯವೂ ನಡೆಯುತ್ತದೆ.
ಇದರಿಂದ ನಿತ್ಯ ಸಸ್ಯಹಾರ ಸೇವನೆಯಿಂದ ವ್ಯಕ್ತಿಯ ಭಾವನೆಗಳು ದುರ್ಬಲವಾಗುತ್ತವೆ, ಅವರಿಗೆ ತಮ್ಮ ಭಾವನೆಗಳ ಮೇಲೆ ನಿಯಂತ್ರಣ ತಪ್ಪುತ್ತದೆ, ಅವರ ಮೆದುಳು ಹಾಗೂ ನಾಲಗೆಯ ನಡುವಿನ ಸಂಪರ್ಕದಲ್ಲಿ ಅವಾಗಾವಾಗ ವ್ಯತ್ಯಯವುಂಟಾಗುತ್ತದೆ, ಅವರಲ್ಲಿ ಕ್ರೌರ್ಯ, ರಕ್ತದಾಹ ಹೆಚ್ಚಾಗುತ್ತದೆ ಹಾಗೂ ಅವರಲ್ಲಿ ಕ್ರಿಮಿನಲ್ ಗುಣಲಕ್ಷಣಗಳು ಬೆಳೆಯುತ್ತವೆಯೆಂದು ತಿಳಿಯಬಹುದು.







