ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಉಳಿದಿದ್ದು ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಮಾತಿನ ಕೆಸರೆರಚಾಟ, ಆರೋಪ-ಪ್ರತ್ಯಾರೋಪಗಳಲಿ ತೊಡಗಿದ್ದಾರೆ.
ಇನ್ನು ಬಿಜೆಪಿ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ವಾಗ್ದಾಳಿ ನಡೆಸಿದ್ದು ದಲಿತರನ್ನ ಧ್ವಂಸ ಮಾಡೋದು ಇವರ ಪರಮಗುರಿ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಧ್ರುವನಾರಾಯಣ ನಾನು ಅಂಬೇಡ್ಕರ್ವಾದಿ ಎಂದು ಹೇಳುವ ಸಿಎಂ ಬೊಮ್ಮಾಯಿ SC-ST ಸಮುದಾಯಕ್ಕೆ ನೀಡಿರುವ ಕೊಡುಗೆ ಏನುSC-STಗೆ ಮೀಸಲಾತಿ ಹೆಚ್ಚಳ ಮಾಡಿರುವುದನ್ನ ನಾವು ಸ್ವಾಗತಿಸುತ್ತೇವೆ. ಆದ್ರೆ, ರಾಜಕೀಯ ಕಾರಣಕ್ಕೆ ಈ ಮೀಸಲಾತಿ ಹೆಚ್ಚಿಸುವ ಪ್ರಯತ್ನ ನಡೆದಿದೆ. ಅದನ್ನ 9 ಶೆಡ್ಯೂಲ್ಗೆ ಸೇರಿಸದಿದ್ರೆ ಚುನಾವಣಾ ಗಿಮಿಕ್ ಆಗುತ್ತೆ ಎಂದು ಆರೋಪಿಸಿದ್ದಾರೆ.

ನಮ್ಮದು ಜಾತ್ಯಾತೀತ ರಾಷ್ಟ್ರ ಎಂಬುದನ್ನ ಸಿ.ಟಿ.ರವಿ ಒಪ್ಪಿಕೊಳ್ಳಬೇಕಿದ್ದು, ಧರ್ಮ ಧರ್ಮಗಳ ನಡುವೆ ದ್ವೇಷದ ವಿಷ ಬೀಜ ಬಿತ್ತುವ ಕೆಲಸ ಬೇಡ ಚುನಾವಣೆ ವೇಳೆ ಮಾತ್ರ ಬಿಜೆಪಿಗೆ ದಲಿತರು ನೆನಪಾಗುವುದು ಹೀಗಾಗಿ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಅವರಿಗೆ ಇಲ್ಲ ಎಂದು ಚಾಟಿ ಬೀಸಿದ್ದಾರೆ.
ಬಿಜೆಪಿಗೆ ದಲಿತರ ಬಗ್ಗೆ ಧೃತರಾಷ್ಟ್ರನ ಪ್ರೇಮ ಆಗಿದೆ ಅಷ್ಟೇ ಆಲಿಂಗನ ನೆಪದಲ್ಲಿ ದಲಿತರನ್ನ ಧ್ವಂಸ ಮಾಡೋದು ಇವರ ಗುರಿ. ಇಂದಿರಾ ಗಾಂಧಿ 20 ಅಂಶದ ಕಾರ್ಯಕ್ರಮ ನೀಡಿದ್ದು, ಬಾಬಾ ಸಾಹೇಬರು ಕೊಟ್ಟ ಸಂವಿಧಾನವನ್ನ ಕಾಂಗ್ರೆಸ್ ಪಾಲಿಸುತ್ತಿದೆ. ಜವಹರಲಾಲ್ ನೆಹರು ಸರ್ಕಾರಿ ಕಾರ್ಖಾನೆಗಳನ್ನ ಸ್ಥಾಪಿಸಿದ್ರು. ಆದ್ರೆ, ಬಿಜೆಪಿ ಸರ್ಕಾರ ಕಾರ್ಖಾನೆಗಳ ಖಾಸಗೀಕರಣ ಮಾಡುತ್ತಿದೆ. ಇನ್ನ ನಾವು ಎಂದಿಗೂ ದಲಿತರನ್ನ ಮತ ಬ್ಯಾಂಕ್ ಆಗಿ ಬಳಸಿಕೊಂಡಿಲ್ಲ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.
ಕೇಂದ್ರ ಸರ್ಕಾರ ಬಂದು 9 ವರ್ಷದಲ್ಲಿ ದಲಿತರಿಗೆ ನೀಡಿದ ಕೊಡುಗೆ ಏನು..?ಭೂ ಸುಧಾರಣೆ ಕಾಯ್ದೆಯನ್ನೆ ತಿದ್ದುಪಡಿ ಮಾಡುತ್ತಿದ್ದಾರೆ.. ಬಾಬಾ ಸಾಹೇಬರು ಕೊಟ್ಟಂತಹ ಸಂವಿಧಾನ ವನ್ನು ಕಾಂಗ್ರೆಸ್ ಪಕ್ಷ ಪಾಲಿಸುತ್ತಿದೆ. ನಾವು ಎಂದಿಗೂ ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಲ್ಲ ಎಂದು ಹೇಳಿದ್ದಾರೆ.






