ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮಗಳು ಅರ್ಹಾಳ ಜೊತೆಗಿನ ಮುದ್ದಾದ ವಿಡಿಯೋವನ್ನು ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದಕ್ಷಿಣದ ಕೆಲವೇ ಪ್ರಸಿದ್ಧ ಸ್ಟಾರ್ ಕಿಡ್ಗಳ ಸಾಲಲ್ಲಿ ಇವರು ಒಬ್ಬರಾಗಿದ್ದಾರೆ.
ಸಮಂತಾ ರುತ್ ಪ್ರಭು ನಟಿಸಿದ ‘ಶಾಕುಂತಲಂ’ ಚಿತ್ರದ ಮೂಲಕ ಅರ್ಹಾ ನಟನೆಗೆ ಪದಾರ್ಪಣೆ ಮಾಡಿದ್ದಾರೆ. ಇನ್ನೂ ನಟ ಅಲ್ಲು ಅರ್ಜುನ್ಗೆ ಮಗಳು ಎಂದರೆ ಕೊಂಚ ಹೆಚ್ಚೇ ಪ್ರೀತಿ. ಅವಳಿಗಾಗಿಯೇ ಹೆಚ್ಚಿನ ಸಮಯವನ್ನು ಅವರು ಮೀಸಲಿಡುತ್ತಾರೆ. ಅವಳ ಜೊತೆಗಿನ ವಿಡಿಯೋ ಮತ್ತು ಫೋಟೋವನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ.