ಬಿಗ್ ಬಾಸ್ ಸಮಯ ನಿನ್ನಯ ಎಪಿಸೋಡ್ ನಲ್ಲಿ ಕಿಚ್ಚ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸನ್ನ ತಗೊಂಡಿದ್ದಾರೆ. ಅದರಲ್ಲೂ ಐಶ್ವರ್ಯ ಮೋಕ್ಷಿತ ಶಿಶಿರ್ ಮೂರು ಜನರು ಟಾರ್ಗೆಟ್ ನಾಮಿನೇಷನ್ ಬಗ್ಗೆ ಮಾತನಾಡಿರುವ ವಿಚಾರವನ್ನು, ಕಿಚ್ಚ ಮಾತನಾಡಿದ್ದು ಇದು ಸರಿಯಲ್ಲವೆಂದು ಕಂಟೆಸ್ಟೆಂಟ್ ಗಳಿಗೆ ಬುದ್ಧಿವಾದ ಹೇಳಿದ್ದಾರೆ.

ಹಾಗೂ ಮಂಜು ಮತ್ತು ಗೌತಮಿ ಅವರ ಫ್ರೆಂಡ್ ಶಿಪ್ ಬಗ್ಗೆ ಕಿಚ್ಚ ಮಾತನಾಡಿದ್ದು ಮಂಜುಗೆ ಸರಿಯಾಗಿ ಬೈದಿದ್ದಾರೆ ಅದು ಕೂಡ ಈ ವಾರದಲ್ಲಿದ್ದಕ್ಕೆ ಟಾಸ್ಕಗಳಲ್ಲಿ ಸರಿಯಾಗಿ ಆಟವಾಡದಿದ್ದಕ್ಕೆ ಕಿಚ್ಚ ಬೈದಿದ್ದಾರೆ. ಮನೆಯಲ್ಲಿ ಧನರಾಜ್ ಹಾಗೂ ರಜತ್ ಅವರಿಗೆ ತಿದ್ದಿ ಬುದ್ದಿ ಹೇಳಿದ್ದು ಮಾಡಿದ್ದು ತಪ್ಪು ಎಂದು ಪನಿಶ್ಮೆಂಟ್ ಕೂಡ ನೀಡಿದ್ದಾರೆ.

ಇನ್ನು ಭಾನುವಾರದ ಎಪಿಸೋಡ್ ನಲ್ಲಿ ಯಾರಪ್ಪ ಎಲಿಮಿನೇಟ್ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇರೋದೊಂದು ಸಹಜ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಟ್ಟು ಎಂಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಅದರಲ್ಲಿ ನಿನ್ನೆಯ ಎಪಿಸೋಡ್ ನಲ್ಲಿ, ಕಿಚ್ಚ ಹನುಮಂತು ಹಾಗೂ ತ್ರಿವಿಕ್ರಮ ಅವರನ್ನು ನಾಮಿನೇಷನ್ ಇಂದ ಸೇವ್ ಮಾಡಿದ್ದಾರೆ.

ಆದ್ರೆ ಇನ್ನುಳಿದ ಆರುಸ್ಪರ್ಧಿಗಳಲ್ಲಿ ಯಾರು ಎಲಿಮಿನೇಟ್ ಆಗಬಹುದು ಎಂಬ ಚರ್ಚೆ ಈಗಾಗಲೇ ನಡೀತಾ ಇತ್ತು ಹೆಚ್ಚಾಗಿ ಚೈತ್ರ ಹಾಗೂ ಧನರಾಜ್ ಅವರ ಹೆಸರು ಕೇಳಿ ಬರ್ತಾ ಇದೆ. ಈ ವಾರ ಎಲ್ಲರಿಗೂ ಕಂಪೇರ್ ಮಾಡಿದ್ರೆ ಚೈತ್ರ ಅವರ ಪರ್ಫಾರ್ಮೆನ್ಸ್ ಕಡಿಮೆ ಇತ್ತು ಮಾತ್ರವಲ್ಲದೆ ಕಳಪೆ ಕೂಡ ಅವರೇ ಹೋಗಿದ್ದರು.
ಒಟ್ಟಿನಲ್ಲಿ ಸಂಡೆಯ ಎಪಿಸೋಡ್ ನಲ್ಲಿ ಎಷ್ಟು ಫನ್ ಇರುತ್ತದೆ ಅಷ್ಟೇ ಟೆನ್ಶನ್ ಕೂಡ ಇರುತ್ತದೆ.