ಜನವರಿ 28ರಂದು ಮಹಾರಾಷ್ಟ್ರದ ಬಾರಾಮತಿ ಬಳಿ ನಡೆದ ವಿಮಾನ ಅಪಘಾತದಲ್ಲಿ ಮಾಜಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದರು. ಈ ಅಪಘಾತ ನಡೆದ ಒಂದು ತಿಂಗಳ ನಂತರ, ಅಪಘಾತದ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ.ಅಜಿತ್ ಪವಾರ್ ಅವರ ವಿಮಾನದ ಅಪಘಾತದ ತನಿಖೆಯನ್ನು ವಾಯು ಅಪಘಾತ ತನಿಖಾ ಬ್ಯೂರೋ (AAIB) ನಡೆಸುತ್ತಿದೆ. ಈ ಸಂಸ್ಥೆ ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ.

22 ಪುಟಗಳ ಈ ವರದಿಯು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ವಿಮಾನವು ನೆಲಕ್ಕೆ ಅಪ್ಪಳಿಸುವ ಮೊದಲು ಮರಕ್ಕೆ ಡಿಕ್ಕಿ ಹೊಡೆದು ನಂತರ ನೆಲಕ್ಕೆ ಅಪ್ಪಳಿಸಿದೆ ಎಂದು ವರದಿ ಹೇಳಿದೆ.ವಿಮಾನ ಅಪಘಾತದ ಸಮಯದಲ್ಲಿ ಗೋಚರತೆ ಕೇವಲ 2000 ಮೀಟರ್ ಆಗಿತ್ತು. ಆದ್ದರಿಂದ, ಹವಾಮಾನ ಮತ್ತು ಗೋಚರತೆಯು ಈ ವಿಮಾನ ಅಪಘಾತಕ್ಕೆ ಹೆಚ್ಚಿನ ಕಾರಣವಾಗಿರಬಹುದು ಎಂದು ವರದಿ ಬಹಿರಂಗಪಡಿಸಿದೆ.

ಅಪಘಾತವು ಒಂದೇ ಕಾರಣದಿಂದ ಆಗಿಲ್ಲ. ಹವಾಮಾನ, ಮೂಲಸೌಕರ್ಯ, ಕಾರ್ಯಾಚರಣೆಯ ನಿರ್ಧಾರಗಳೆಲ್ಲವೂ ಸೇರೊ ಆಗಿರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.ಅಜಿತ್ ಪವಾರ್ ಅವರ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವೈಫಲ್ಯದ ಯಾವುದೇ ನೇರ ಪುರಾವೆಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಘಟನೆಯ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿದೆ,





