ನವದೆಹಲಿ : ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಇಸ್ರೇಲ್ ಹಾಗೂ ಅಮೆರಿಕದ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ಅಮೆರಿಕ ಹಾಗೂ ಇಸ್ರೇಲ್ ಹೇಳುತ್ತಿವೆ. ಆದರೆ ಈ ಬಗ್ಗೆ ಸ್ಪಷ್ಟನೆ ದೊರೆಯುತ್ತಿಲ್ಲ, ಒಂದೆಡೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರೂರಿಯನ್ನು ಇಲ್ಲವಾಗಿಸಿದ್ದೇವೆ, ಅವನ ಸಾವಿನಿಂದ ಜಗತ್ತಿನ ಎಲ್ಲ ರಾಷ್ಟ್ರಗಳಿಗಳೂ ನ್ಯಾಯ ಸಿಕ್ಕಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಈ ನಡುವೆಯೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಖಮೇನಿ ಅವರನ್ನು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಿದ್ದೇವೆ ಎಂದು ಹೇಳುವ ಮೂಲಕ ಖಮನೈನಿ ಸಾವನ್ನು ಒಪ್ಪಿಕೊಂಡಿಲ್ಲ.
ಆದರೆ ಈ ಎಲ್ಲ ಊಹಾಪೋಹಗಳ ನಡುವೆಯೂ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮನೈನಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಸರ್ಕಾರಿ ದೂರದರ್ಶನ ದೃಢಪಡಿಸಿದೆ. ಈ ಪ್ರಕಟಣೆ ಇಂದು ಬೆಳಿಗ್ಗೆ ಹೊರಬಿದ್ದಿದ್ದು, ಇರಾನ್ ತನ್ನ ಸರ್ವೋಚ್ಚ ನಾಯಕನ ಗೌರವಾರ್ಥವಾಗಿ 40 ದಿನಗಳ ಶೋಕಾಚರಣೆಯನ್ನು ಆಚರಿಸಲಿದೆ ಎಂದು ಸ್ಥಳೀಯ ಸುದ್ದಿವಾಹಿನಿ ನಿರೂಪಕರು ನ್ಯೂಸ್ ಓದುವಾಗಲೇ ಕಣ್ಣೀರಿಟ್ಟಿದ್ದಾರೆ
ಇದನ್ನೂ ಓದಿ : ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ: ತನಿಖೆಯಲ್ಲಿ ಸತ್ಯ ಬಯಲಾಯಿತೆ ?






