ಐಶ್ವರ್ಯ ಗೌಡ (Aishwarya gowda) ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ (ED), ಅಕ್ರಮ ಹಣ ವರ್ಗಾವಣೆಯ ಬೆನ್ನು ಹತ್ತಿದ್ದು, ಈ ಕೇಸ್ ನಲ್ಲಿ ಹೆಸರು ಕೇಳಿ ಬಂದಿರುವ ಮಾಜಿ ಸಂಸದ ಡಿಕೆ ಸುರೇಶ್ (Dk suresh) ಅವರ ಬೆನ್ನು ಬಿದ್ದಿದೆ.

ಈ ಹಿಂದೆ ಐಶ್ವರ್ಯ ಗೌಡ ಬ್ಯಾಂಕ್ ಅಕೌಂಟ್ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ಕಲೆಹಾಕಿದ್ದ ಇ.ಡಿ ಮಾಜಿ ಸಂಸದ ಡಿ.ಕೆ ಸುರೇಶ್ ರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಜೂನ್ 19 ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸೂಚಿಸಿತ್ತು. ಆದ್ರೆ ಕಾರಣಾಂತರಗಳಿಂದ ಡಿ ಕೆ ಸುರೇಶ್ ಅವರುಗೆ ಅದು ಸಾಧ್ಯವಾಗಿರಲಿಲ್ಲ.

ಹೀಗಾಗಿ ಇಂದು ಇ. ಡಿ. ವಿಚಾರಣೆಗೆ ಮಾಜಿ ಸಂಸದ ಡಿ. ಕೆ. ಸುರೇಶ್ ತೆರಳಿದ್ದಾರೆ. ಸದಾಶಿವನಗರದ ನಿವಾಸದಿಂದ ತೆರಳಿದ ಸುರೇಶ್, ಶಾಂತಿನಗರದ ಇ.ಡಿ ಕಚೇರಿಗೆ ಆಗಮಿಸಿದ್ದಾರೆ. ಐಶ್ವರ್ಯ ಗೌಡ ಪ್ರಕರಣದಲ್ಲಿ ತಮ್ಮ ಪಾತ್ರ, ಆಕೆಯ ಪರಿಚಯ ಮತ್ತು ಹಣದ ವಹಿವಾಟಿನ ಬಗ್ಗೆ ಇ.ಡಿ ಕೇಳಲಿರುವ ಪ್ರಶ್ನೆಗೆ ಸುರೇಶ್ ಉತ್ತರಿಸಬೇಕಿದೆ.





