2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ (mandya) ಕ್ಷೇತ್ರ ಇಂಡಿಯಾದಲ್ಲೇ (India) ಟಾಕ್ ಸೃಷ್ಟಿ ಮಾಡಿತ್ತು. ಆ ಕಾರಣಕ್ಕಾಗಿ ಪ್ರಚಾರದ ಅಬ್ಬರವೂ ಜೋರಾಗಿತ್ತು. ಮಾತಿನ ಸಮರ ಮಿತಿ ಮೀರಿತ್ತು. ಅಂದು ಪಕ್ಷೇತರವಾಗಿ ಕಣಕ್ಕಿಳಿದಿದ್ದ ಸುಮಲತಾರ (sumalatha) ಪರವಾಗಿ ದರ್ಶನ್ (darshan) ಮತ್ತು ಯಶ್ (Yash) ಜೋಡೆತ್ತುಗಳಂತೆ ಕಣದಲ್ಲಿ ನಿಂತು ಸುಮಲತಾರಿಗೆ ಗೆಲುವು ತಂದುಕೊಟ್ಟಿದ್ರು. ಅಂದು ನಟ ದರ್ಶನ್ ಮೇಲೆ ಜೆಡಿಎಸ್ (Jds) ಮಾಡಿದ ಟೀಕೆ ಅಷ್ಟಿಷ್ಟಲ್ಲ.

ಖುದ್ದು ಕುಮಾರಸ್ವಾಮಿ (kumaraswamy) ಹಾದಿಯಾಗಿ ಜೆಡಿಎಸ್ ಎಲ್ಲಾ ನಾಯಕರು ಸುಮಲತಾ, ಯಶ್ ಸೇರಿದಂತೆ ದರ್ಶನ್‌ರನ್ನೂ ಕೂಡ ಹಿಗ್ಗಾ-ಮುಗ್ಗಾ ಟೀಕಿಸಿದ್ದರು. ಆ ಮಾತಿನ ಯುದ್ಧದಲ್ಲಿ ಹೆಚ್‌ಡಿಕೆ ಮತ್ತು ನಟ ದರ್ಶನ್ ನಡುವೆ ವಾಕ್ಸಮರ ತಾರಕ್ಕಕೇರಿ ವಯಕ್ತಿಕ ದ್ವೇಷ ಹುಟ್ಟುವ ಹಂತ ತಲುಪಿತ್ತು. ಈಗಲೂ ಅದು ಹಾಗೇ ಮುಂದುವರೆದಂತೆ ಕಾಣಿದೆ.

ಈ ಬಾರಿ ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಮಾಡ್ತಿಲ್ಲ.. ಬಿಜೆಪಿ (bjp) ಸೇರ್ಪಡೆಯಾಗಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಆದ್ರೆ ಇದುವರೆಗೂ ಪ್ರಚಾರಕ್ಕಂತೂ ಬಂದಿಲ್ಲ.. ಇರ್ಲಿ ! ಆದ್ರೆ ದರ್ಶನ್ ನ ನಡೆ ಮಾತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸುಮಲತಾ ಕುಮಾರಸ್ವಾಮಿಯವರಿಗೆ (kumaraswamy) ಬೆಂಬಲ ಸೂಚಿಸಿದ್ರೆ ಇತ್ತ ನಟ ದರ್ಶನ್ ಸ್ಟಾರ್ ಚಂದ್ರು (star chandru) ಪರವಾಗಿ ಪ್ರಚಾರಕ್ಕಿಳಿದಿದ್ದಾರೆ.

ಅಂದು ನಿಖಿಲ್ ಕುಮಾರಸ್ವಾಮಿ (Nikhil kumaraswamy) ವಿರುದ್ಧ ಪ್ರಚಾರಕ್ಕಿಳಿದು ಮಣಿಸಿದ್ದ ನಟ ದರ್ಶನ್ ಇಂದು ಕುಮಾರಸ್ವಾಮಿಯವರ ವಿರುದ್ಧ ಪ್ರಚಾರ ಕೈಗೊಂಡಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕನಿಷ್ಠ ಕುಮಾರಸ್ವಾಮಿ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿದ್ರೂ, ಕಾಂಗ್ರೇಸ್ ಪ್ರಾರದಲ್ಲೂ ತೊಡಗದೇ ನ್ಯೂಟ್ರಲ್ ಆಗಿರಬಹುದಿತ್ತು. ಆದ್ರೆ ದರ್ಶನ್ ಹೆಚ್.ಡಿ.ಕೆ ವಿರುದ್ಧ ಮತ್ತೆ ಮತ ಪ್ರಚಾರಕ್ಕೆ ದುಮುಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮನಾರಸ್ವಾಮಿ ಬಹಳ ಮೃದುವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಪ್ರಜಾಪಭುತ್ವದಲ್ಲಿ ಯಾರ ಪರ ಪ್ರಚಾರ ಮಾಡಬೇಕು ಎಂಬುದು ಅವರವರ ಆಯ್ಕೆ. ಹೀಗಾಗಿ aದ್ರಲ್ಲಿ ತಪ್ಪೇನೂ ಇಲ್ಲ ಎಂದು ಹೆಚ್ .ಡಿ.ಕೆ ಪ್ರತಿಕ್ರಿಯಿಸಿದ್ದಾರೆ. ಕಳೆದ ಬಾಎಇ ಇದೇ ಕುಮಾರಸ್ವಾಮಿಯವರು ದರ್ಶನ್ ವಿರುದ್ಧ ಡಿ ಬಾಸ್ ಅಂತೆ ಡಿ ಬಾಸ್ ಎಂದು ವ್ಯಂಗವಾಡಿದ್ದು ಭಾರಿ ವೈರಲ್ ಕೂಡ ಆಗಿತ್ತು. ಈ ಬಾರಿಯ ಕಣ ಕೊಂಚ ಸೈಲೆಂಟ್ ಆದಂತಿದೆ. ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಬೇಕಿದೆ.






