• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಮತ್ತೆ ಓಟಕ್ಕಿಳಿದ ಕರೋನಾ : ಸರ್ಕಾರಕ್ಕೆ ಲಾಕ್‌ ಡೌನ್‌ ಸಲಹೆ ನೀಡಿದ TAC!

ಕರ್ಣ by ಕರ್ಣ
January 3, 2022
in ಇದೀಗ
0
ಬಿಜೆಪಿಯ ಸೈದ್ಧಾಂತಿಕ ಮೂಲವಾದ ಸಂಘಪರಿವಾರನ್ನು ಓಲೈಸಲು ಮುಂದಾದರೇ ಸಿಎಂ ಬೊಮ್ಮಾಯಿ?
Share on WhatsAppShare on FacebookShare on Telegram

ಮೂರನೇ ಅಲೆ ಬರುತ್ತಾ ಇಲ್ಲವಾ ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಕೊರೋನಾ ಏಕಾ ಏಕಿ ಓಟಕ್ಕಿಳಿದಿದೆ. ಒಂದ್ಕಡೆ ಓಮಿಕ್ರಾನ್ ಇನ್ನೊಂದ್ಕಡೆ ಏರುತ್ತಿರುವ ಸೋಂಕು ಸರ್ಕಾರದ ನಿದ್ದೆ ಗೆಡಿಸಿದೆ. ಇದರ ಮಧ್ಯೆ ತಜ್ಞರಿಂದ ಲಾಕ್‌ ಡೌನ್‌ ಸಲಹೆ ಸರ್ಕಾರದ ಟೇಬಲ್‌ ಮೇಲೆ ಬಂದಿದೆ. ಅತ್ತ ಸರ್ಕಾರವೂ ಅಂತಿಮವಾಗಿ ಕೊರೋನಾ ಮಿತಿ ಮೀರಿದರೆ ಲಾಕ್‌ ಡೌನ್‌ ಮಾಡುವುದೊಂದೇ ದಾರಿ ಎಂಬ ಸುಳಿವು ಬಿಟ್ಟುಕೊಟ್ಟಿದೆ.

ADVERTISEMENT

ಪಾಸಿಟಿವಿಟಿ ದರ 5% ದಾಟಿದರೆ ಲಾಕ್‌ ಡೌನ್‌?

ದಿನಗಳೇ ಕಳೆದು ಹೋಗಿದ್ದವು. ಯಾರೂ ಈ ಪದ ಬಳಸುತ್ತಿರಲಿಲ್ಲ. ಬಹುಶಃ ಬಹುತೇಕ ಮಂದಿ ಲಾಕ್‌ ಡೌನ್‌ ಎನ್ನುವ ಪದವನ್ನೇ ನೆನೆಪಿನಲ್ಲಿ ಇಟ್ಟುಕೊಂಡಿಲ್ಲ. ಯಾರಿಗೂ ಮತ್ತೊಮ್ಮೆ ಅಂತಾ ದಿನಗಳು ಎದುರುಗೊಳ್ಳುವಷ್ಟು ತೃಣವೂ ಉಳಿದಿಲ್ಲ. ಆದರೆ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಸೋಂಕು ಏರುಗತಿ ಹಿಡಿದಿದೆ. ಮೂರನೇ ಅಲೆಯ ಸ್ಪಷ್ಟ ಸುಳಿವು ಸಿಕ್ಕಿದೆ. ಹೀಗಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ಒಂದಿಷ್ಟು ಸಲಹೆ ಕೊಟ್ಟಿದೆ. ಈ ಸಲಹೆಯಲ್ಲಿ ಲಾಕ್ಡೌನ್ ಕೂಡಾ ಇರೋದು ರಾಜ್ಯದ ಜನರನ್ನ ಮತ್ತೆ ಆತಂಕಕ್ಕೆ ದೂಡಿದೆ.

ನಿಜ.. ರಾಜ್ಯದಲ್ಲಿ ಪಾಸಿಟಿವಿಟಿ ದರ 5%ರ ಗಡಿ ದಾಟಿದರೆ ಲಾಕ್‌ ಡೌನ್‌ ಒಂದೇ ಅಸ್ತ್ರ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸ್ಸಿನಲ್ಲಿ ಉಲ್ಲೇಖಿಸಿದೆ. ಜೊತೆಗೆ ರಾಜ್ಯದಲ್ಲಿರುವ ಒಟ್ಟಾರೆ ಐಸಿಯು ಬೆಡ್ ಶೇಕಡಾ 40 ರಷ್ಟು ಭರ್ತಿಯಾದರೂ ಸಾಕು ಲಾಕ್‌ ಡೌನ್‌ ಅಸ್ತ್ರ ಪ್ರಯೋಗಿಸ ಬೇಕಾಗ್ಬಹುದೆಂದು ತಜ್ಞರ ಸಮಿತಿ ಶಿಫಾರಸ್ಸಿನಲ್ಲಿ ತಿಳಿಸಿದೆ. ಜನರು ಕೊವಿಡ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಪರಿಸ್ಥಿತಿ ಕೈಮೀರಿದರೆ ನಮ್ಮ ಬಳಿಯೂ ಮಂತ್ರದಂಡವಿಲ್ಲ. ಲಾಕ್‌ ಡೌನ್‌ ನಂತಾ ತೀರ್ಮಾನ ಅನಿವಾರ್ಯ ಆಗ ಬಹುದೆಂದು ಸಿಎಂ ಬಸವರಾಜ ಬೊಮ್ಮಾಯಿಯೂ ಲಾಕ್‌ ಡೌನ್‌ ಸುಳಿವು ನೀಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ದೆಹಲಿ ಮಾದರಿಯಲ್ಲಿ ಬಣ್ಣದ (Colour Code) ಆಧಾರದಲ್ಲಿ ನಿರ್ಬಂಧ ವಿಧಿಸಬೇಕೆಂಬ ಸಲಹೆಯನ್ನೂ ತಾಂತ್ರಿಕ ಸಲಹಾ ಸಮಿತಿ ನೀಡಿದೆ. ಕೊರೋನಾ ಪಾಸಿಟಿವಿಟಿ ತಕ್ಕಂತೆ ಯೆಲ್ಲೋ, ಆರೆಂಜ್, ರೆಡ್ ಎಂದು ಕಲರ್ ಕೋಡ್ ನಿರ್ಬಂಧ ವಿಧಿಸೋಕೆ ಸರ್ಕಾರ ತೀರ್ಮಾನಿಸಿದೆ.

ಪಾಸಿಟಿವಿಟಿ ದರ 1ಕ್ಕಿಂತ ಕಮ್ಮಿ ಇದ್ರೆ ಎಲ್ಲೋ ಅಲರ್ಟ್!

ಪಾಸಿಟಿವಿಟಿ ದರ 1ಕ್ಕಿಂತ ಕಮ್ಮಿ ಇದ್ರೆ ಎಲ್ಲೋ ಅಲರ್ಟ್ ಘೋಷಿಸಲಾಗುತ್ತೆ. ಈ ಪ್ರದೇಶದಲ್ಲಿ ಮದುವೆ ಸಮಾರಂಭಕ್ಕೆ 200 ರಿಂದ 300 ಜನರಿಗೆ ಮಾತ್ರ ಅವಕಾಶ ಇರಲಿದೆ. ಹಾಗೆ ಅಂತ್ಯ ಸಂಸ್ಕಾರಕ್ಕೆ 100 ರಿಂದ 200 ಜನರಿಗೆ ಅವಕಾಶ ಕೊಡಲಾಗುತ್ತೆ.

ಪಾಸಿಟಿವಿಟಿ ದರ 1% ರಿಂದ 2%ರ ಒಳಗಿದ್ದರೆ ಆರೆಂಜ್ ಅಲರ್ಟ್!

ಪಾಸಿಟಿವಿಟಿ ದರ 1ಕ್ಕಿಂತ ಹೆಚ್ಚು ಎರಡಕ್ಕಿಂತ ಕಡಿಮೆ ಇರುವ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಆರೆಂಜ್ ಅಲರ್ಟ್ ವಲಯದಲ್ಲಿ ಮಾಲ್, ಶಾಂಪಿಂಗ್ ಕಾಂಪ್ಲೆಕ್ಸ್ ಗೆ ಬೆಳಿಗ್ಗೆ 6ರಿಂದ ಮಧ್ಯಹ್ನ 1 ರವೆಗೆ ಮಾತ್ರ ಅವಕಾಶ ಕೊಡಲು ಸೂಚಿಸಲಾಗಿದೆ. ಜೊತೆಗೆ ಸಿನಿಮಾ, ಸ್ಕೂಲ್, ಫಬ್, ಬಾರ್, ಆಫೀಸ್, ಫ್ಯಾಕ್ಟರಿ, ಸಲೂನ್, ಮೆಟ್ರೋ, ಗಳಲ್ಲಿ ಕೇವಲ 50% ಅವಕಾಶ ನೀಡಲು ಸೂಚಿಸಲಾಗಿದೆ. ಮಾತ್ರವಲ್ಲ ಸ್ವಿಮಿಂಗ್ ಫೂಲ್, ಜಿಮ್ ನಲ್ಲಿ ತರಬೇತಿಗೆ ಮಾತ್ರ ಅವಕಾಶ ಕಲ್ಪಿಸಲು ತಜ್ಞರು ಸಲಹೆ ನೀಡಿದ್ದಾರೆ.

ಪಾಸಿಟಿವಿಟಿ ರೇಟ್ 2 ದಾಟಿದರೆ ರೆಡ್ ಅಲರ್ಟ್!

ಪಾಸಿಟಿವಿಟಿ ರೇಟ್ 2% ದಾಟುತ್ತಿದ್ದಂತೆ ಆ ಜಿಲ್ಲೆ ಅಥವಾ ವಲಯವನ್ನು ರೆಡ್ ಅಲರ್ಟ್ ಎಂದು ಘೋಷಿಸಬೇಕು. ಈ ವಲಯದಲ್ಲಿ ಮಾರುಕಟ್ಟೆ, ಶಾಪಿಂಗ್ ಮಾಲ್ ಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 1ರವರಗೆ ಮಾತ್ರ ಅವಕಾಶ ಕಲ್ಪಿಸಬೇಕು. ಹಾಗೆ ಸಿನಿಮಾ ಹಾಲ್, ಸಲೂನ್, ಸ್ವಿಮಿಂಗ್ ಫೂಲ್, ಜಿಮ್, ಸಾರ್ವಜನಿಕ ಸಾರಿಗೆ, ವರ್ಕಶಾಪ್, ಪಾರ್ಕ್, ಪ್ರಾಣಿಸಂಗ್ರಹಾಲಯ, ಮನರಂಜನಾ ಫಾರ್ಕ್ ಆರ್ಟ್ ಗ್ಯಾಲರಿ, ಮ್ಯೂಸಿಯಂ ಹಾಗೂ ಮೆಟ್ರೋ ಸೇರಿದಂತೆ ಇನ್ನಿತರ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಬೇಕೆಂದು ತಜ್ಞರು ಸಮಿತಿ ತಮ್ಮ ಶಿಫಾರಸ್ಸಿನಲ್ಲಿ ಹೇಳಿದ್ದಾರೆ.

ಇನ್ನು ನಿತ್ಯ 75 ಸಾವಿರ RT-PCR ಟೆಸ್ಟ್ ಮಾಡಬೇಕು ಜೊತೆಗೆ ಶೇಕಡಾ 30ರಷ್ಟು RAT (Rapid Antigen Test) ಟೆಸ್ಟ್ ಮಾಡಬೇಕೆಂದು ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸದ್ಯ ತಜ್ಞರ ಶಿಫಾರಸು ಒಂದು ಕಡೆ ಹಾಗೂ ಮತ್ತೊಂದೆಡೆ ಏರಿಕೆಯಾಗುತ್ತಿರುವ ಕೊರೋನಾ ಸಂಖ್ಯೆ ನೋಡಿದರೆ ರಾಜ್ಯ ಮತ್ತೊಮ್ಮೆ ಲಾಕ್‌ ಡೌನ್‌ ನಂಥಾ ಕರಾಳ ದಿನಗಳನ್ನ ಎದುರಿಸುವ ಪರಿಸ್ಥಿತಿಗೆ ಬಂದು ನಿಲ್ಲುತ್ತಾ ಎನ್ನುವ ಆತಂಕ ಮತ್ತೆ ಹೆಚ್ಚಾಗಿದೆ.

Tags: BJPCovid 19ಕರೋನಾಕೋವಿಡ್-19ಬಿಜೆಪಿಲಾಕ್‌ ಡೌನ್‌
Previous Post

ನಾನು ಸಾಯ್ತಾ ಇದ್ದರೂ ಪಾತ್ರ ಮಾಡುತ್ತಲೇ ಸಾಯಬೇಕು : ಹಿರಿಯ ನಟಿ ಮಾಲತಿ ಮೈಸೂರು | INTERVIEW

Next Post

ಕೆಟ್ಟ ಕನಸೆಂಬಂತೆ ಮುಗಿದ 2021ನ್ನೂ ನೆನಪಿಸಿಕೊಳ್ಳಲು ಒಂದಿಷ್ಟು ಕಾರಣಗಳಿವೆ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
Next Post
ಕೆಟ್ಟ ಕನಸೆಂಬಂತೆ ಮುಗಿದ 2021ನ್ನೂ ನೆನಪಿಸಿಕೊಳ್ಳಲು ಒಂದಿಷ್ಟು ಕಾರಣಗಳಿವೆ

ಕೆಟ್ಟ ಕನಸೆಂಬಂತೆ ಮುಗಿದ 2021ನ್ನೂ ನೆನಪಿಸಿಕೊಳ್ಳಲು ಒಂದಿಷ್ಟು ಕಾರಣಗಳಿವೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada