ರಂಗ ಕಲಾಚತುರೆ ಎಂದೇ ಖ್ಯಾತರಾಗಿರುವ ಮಾಲತಿ ಮೈಸೂರು ಅವರು ಮೂಲತಃ ರಂಗಭೂಮಿ ಕಲಾವಿದರು. ಇವರು ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದ್ದೇ ಅಚ್ಚರಿ. ಮೊದ ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡ ನಟಿ ಮಾಲತಿ ತಮ್ಮ ಪ್ರತಿಭೆಯಿಂದಲೆ ಬೆಳ್ಳಿ ಪರದೆ ಮೇಲೆ ರಾರಾಜಿಸಿದವರು. ಅವರ ಈ ಸಿನಿ ಜಗತ್ತಿನ ಬಗ್ಗೆ ಪ್ರತಿಧ್ವನಿ.ಕಾಂ ಸಂದರ್ಶನ ಮಾಡಿದೆ.