ಕೋವಿಡ್‌ ಸಂಕಷ್ಟ: ʼಪರಮಾತ್ಮ ನಿರ್ಭರ್ʼ ಮೇಲೆ ಈಗ ಹಳ್ಳಿಗಳೂ ಅವಲಂಬಿತವಾಗಿವೆ –ರಾಹುಲ್ ಗಾಂಧಿ

ಕರೋನಾ ಎರಡನೇ ಅಲೆಯ ಹಟ್ಟಹಾಸ ನಗರಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿಯೂ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಆ ದೇವರ ಕರುಣೆಯಿಂದಲೇ ಇಂದು ನಗರ ಮತ್ತು ಹಳ್ಳಿಗಳು ಉಳಿದಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿಬೀಸಿದಂತಿದೆ.

ಭಾರತದ ಹಳ್ಳಿಗಳಲ್ಲಿಯೂ COVID-19 ಪ್ರಕರಣಗಳು ಶೀಘ್ರವಾಗಿ ಹಬ್ಬುತ್ತಿರುವುದರ ಬಗ್ಗೆ ಟ್ವಿಟರ್‌ನಲ್ಲಿ ಮಾಧ್ಯಮಯೊಂದರ ವರದಿಯನ್ನು ಉಲ್ಲೇಖಿಸಿದ ಅವರು ನಗರಗಳ ನಂತರ ಈಗ ದೇಶದ ಹಳ್ಳಿಗಳೂ ದೇವರ ಮೇಲೆ ಅವಲಂಬಿತವಾಗಿವೆ (ಪರಮಾತ್ಮ ನಿರ್ಭರ್) ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಕಳವಳವ್ಯಕ್ತಪಡಿಸಿದ್ದಾರೆ.

ಆಡಳಿತಗಾರರ ನಿರ್ಲಕ್ಷ್ಯ ಹಾಗು ವೈದ್ಯಕೀಯ ಕ್ಷೇತ್ರದ ಸೌಲಭ್ಯಗಳ ಕುಂಟಿತದಿಂದ ಆಕ್ಸಿಜನ್, ಬೆಡ್‌ಸಿಗದೆ, ಮಹಾಮಾರಿಯ ವಿರುದ್ಧ ಹೋರಾಡಿ ಬದುಕುವ ಜೀವಗಳು ಸೋಂಕಿಗೆ ಬಲಿಯಾಗಿವೆ. ಆತ್ಮನಿರ್ಭರ ಭಾರತ ನಿರ್ಮಾಣ ಮಾಡುತ್ತೇವೆಂದು ಭರವಸೆ ಕೊಟ್ಟ ಮೋದಿ ಸರ್ಕಾರ ಕೋವಿಡ್ ಸಂದಿಗ್ಧ ಪರಿಸ್ಥಿಯಲ್ಲಿ ಕೈಚೆಲ್ಲಿ ಕುಳಿತಿದೆ ಎಂಬುವುದು ರಾಜಕೀಯ ನಾಯಕರು ಹಾಗು ದೇಶದ ಪ್ರಜ್ಞಾವಂತ ಸಮುದಾಯದ ಆರೋಪವಾಗಿದೆ.

ಈ ನಿಟ್ಟಿನಲ್ಲಿಯೇ ʼಪರಮಾತ್ಮ ನಿರ್ಭರ್ʼ ಪದವನ್ನು ಬಳಸಿ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದಂತಿದೆ. ಕರೋನಾ ನಿಯಂತ್ರಣದ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರವನ್ನು ರಾಹುಲ್‌ ಗಾಂಧಿ ಹಂತ-ಹಂತವಾಗಿ ತರಾಟೆಗೆಳೆದಿದ್ದು, ಕೋವಿಡ್‌ ಎರಡನೇ ಅಲೆಯ ನಿಯಂತ್ರಣ ಮತ್ತು ಮುಂದಾಗುವ ದುರಂತವನ್ನು ತಪ್ಪಿಸುವ ಸಲುವಾಗಿ ಸೋಂಕಿನ ವಿರುದ್ಧ ಧೈರ್ಯದಿಂದ ಹೋರಾಡಲು ವೈದ್ಯಕೀಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದುಬಾರಿ ಯೋಜನೆಗಳನ್ನು ಕೈಬಿಡಟ್ಟು ಆ ಹಣವನ್ನು ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಬಳಸಿ ಕೋವಿಡ್‌ನಿಂದ ಮುಂದಾಗುವ ಅನಾಹುತವನ್ನು ತಪ್ಪಿಸಲು ಹಲವು ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು. ಜೊತಗೆ ದೇಶದಲ್ಲಿರುವ ಪ್ರತಿ ಪ್ರಜೆಗೂ ಉಚಿತ ಲಸಿಕೆ ನೀಡಬೇಕೆಂದು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದರು.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...